ಹೆಚ್ಚು ಅಥವಾ ಅತೀ ಕಡಿಮೆ ನಿದ್ದೆ ಯಾವುದೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಒಬ್ಬ ವ್ಯಕ್ತಿಗೆ ದಿನಕ್ಕೆ 6 ಗಂಟೆಗಳ ನಿದ್ದೆ ಅತ್ಯಾವಶ್ಯಕ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿರುವ ವಿಚಾರ. ಆದರೆ ಒತ್ತಡದ ಬದುಕಿನಲ್ಲಿ ಇಂದು ನಾವು ನಿದ್ದೆ ಮಾಡುವುದನ್ನು ನಿರ್ಲಕ್ಷಿಸುತ್ತಿದ್ದೇವೆ. ಇದರಿಂದ ಕೆಲವೊಂದು ಕಾಯಿಲೆಗಳಿಗೆ ನಾವೇ ಆಮಂತ್ರಣ ನೀಡುತ್ತಿದ್ದೇವೆ.
ಚೆನ್ನಾಗಿ ನಿದ್ರೆ ಮಾಡದೇ ಇದ್ದರೆ ಹೃದಯ ಆರೋಗ್ಯದ ಮೇಲೆ ಮೊದಲ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಇದರಿಂದ ಹೃದಯಾಘಾತ, ಪಾರ್ಶ್ವವಾಯು ಅಪಾಯ ಹೆಚ್ಚಾಗುತ್ತದೆ. ಹಾಗಂತ ಹೆಚ್ಚು ನಿದ್ದೆ ಮಾಡುವುದು ಕೂಡ ಹೃದಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದ್ದರಿಂದ ನಿದ್ರೆಗೆ ಉತ್ತಮ ವೇಳಾಪಟ್ಟಿ ಮಾಡಿಕೊಂಡು ಪಾಲಿಸುವುದು ಅತ್ಯಗತ್ಯ.
ಇನ್ನು ಮಹಿಳೆಯರಲ್ಲಿ ಹಾರ್ಮೋನ್ ಗಳ ಅಸಮತೋಲನಕ್ಕೆ ಇದು ಕಾರಣವಾಗುತ್ತದೆ. ನಿದ್ರೆ ಕಡಿಮೆಯಾದರೆ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಕಡಿಮೆಯಾಗಿ ಮಾಸಿಕ ಅವಧಿಯಲ್ಲಿ ಹೆಚ್ಚಿನ ನೋವು, ಸೆಳೆತಕ್ಕೆ ಕಾರಣವಾಗುತ್ತದೆ. ನಿರ್ಲಕ್ಷಿಸಿದರೆ ಥೈರಾಯ್ಡ ಸಮಸ್ಯೆಗೂ ಕಾರಣವಾಗುತ್ತದೆ. ಹೀಗಾಗಿ ಹಾರ್ಮೋನ್ ಸಮತೋಲನದಲ್ಲಿರಿಸಲು ಉತ್ತಮ ನಿದ್ದೆಯು ಅತ್ಯಾವಶ್ಯಕ.
ಇದನ್ನೂ ಓದಿ:ಕ್ಲಬ್ ಗೆ ಪೊಲೀಸ್ ದಾಳಿ: ಕ್ರಿಕೆಟರ್ ಸುರೇಶ್ ರೈನಾ, ಗಾಯಕ ಗುರು ರಾಂಧವ ಬಂಧನ
ದೇಹದ ತೂಕ ಇಳಿಸಬೇಕು ಎಂಬ ಯೋಚನೆಯಲ್ಲಿರುವವರಿಗೆ ಸರಿಯಾದ ನಿದ್ದೆಯೂ ಅತ್ಯಾವಶ್ಯಕ. ಎಷ್ಟೇ ವ್ಯಾಯಾಮ, ಡಯಟ್ ಮಾಡಿ
ಸರಿಯಾಗಿ ನಿದ್ದೆ ಮಾಡದೇ ಇದ್ದರೆ ದೇಹದ ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗದೇ ಇರಬಹುದು. ನಿದ್ದೆ ಕಡಿಮೆಯಾದರೆ ತಿನ್ನುವ ಬಯಕೆ ಹೆಚ್ಚಾಗಿರುತ್ತದೆ. ಇದರಿಂದ ಮಧುಮೇಹದ ಅಪಾಯವೂ ಹೆಚ್ಚುತ್ತದೆ ಎನ್ನುತ್ತವೆ ಸಂಶೋಧನೆಗಳು. ಅದ್ದರಿಂದ ನಮ್ಮ ಆರೋಗ್ಯಕ್ಕೆ ಪೂರಕವಾಗಿ ನಿದ್ರೆ ಮಾಡುವುದು ಅತ್ಯಾವಶ್ಯಕ.