Advertisement
ಎಲ್ಲರ ಮುಂದೆ ಮಕ್ಕಳನ್ನು ಬೈಯ್ದರೆ ಅವರು ಮುಂದೆ ಆಕ್ರಮಣಕಾರಿ ನಡವಳಿಕೆಯನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ಮುಗ್ಧ ಮನಸ್ಸು ಮಣ್ಣಿನಂತೆ. ಅದರ ಮೇಲೆ ನಾಟಿದ ಭಾವನೆಯನ್ನು ಅವರು ಅನುಸರಿಸುತ್ತಾರೆ.
Related Articles
Advertisement
ಎಲ್ಲರೆದುರು ಮಕ್ಕಳನ್ನು ಬಯ್ಯುವುದರಿಂದ ಮುಗ್ಧ ಮನಸ್ಸಿನ ಮೇಲೆ ಅಘಾತವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಅದಷ್ಟು ಇದನ್ನು ತಪ್ಪಿಸುವುದು ಒಳ್ಳೆಯದು. ಎಲ್ಲರೆದುರು ನಯವಾಗಿ ತಿಳಿಸಿ. ಕೇಳದೇ ಇದ್ದರೆ ಅವರನ್ನು ದೂರ ಕರೆದುಕೊಂಡು ಹೋಗಿ ನಿಧಾನವಾಗಿ ಮನಸ್ಸಿಗೆ ನಾಟುವಂತೆ ಮಾತನಾಡಿ. ಮತ್ತೆ ಈ ತಪ್ಪು ಆಗ ಬಾರದು ಎಂದು ಎಚ್ಚರಿಸಿ. ಆಗ ಮಗು ತನ್ನ ತಪ್ಪನ್ನು ತಿದ್ದಿಕೊಂಡು ಎಲ್ಲರೆದುರು ಸ್ವಾಭಿಮಾನದಿಂದ ಹಾಗೂ ಧೈರ್ಯದಿಂದ ಬಂದು ನಿಲ್ಲುತ್ತದೆ.