Advertisement

ಪರಿಣಾಮಕಾರಿಯಾಗಲಿ ಕ್ಷಯರೋಗ ಚಿಕಿತ್ಸಾ ಆಂದೋಲನ

01:45 PM Jul 08, 2017 | |

ವಿಜಯಪುರ: ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆಗಾಗಿ ಜಿಲ್ಲೆಯಾದ್ಯಂತ ಜು. 17ರಿಂದ 31ರವರೆಗೆ ಆಂದೋಲನ ಹಮ್ಮಿಕೊಳ್ಳಲಾಗಿದೆ.
ಪರಿಣಾಮಕಾರಿಯಾಗಿ ನಡೆಸಲು ಜು. 15ರಂದು ಜಾಥಾ ಕಾರ್ಯಕ್ರಮ ಅಚ್ಚುಕಟ್ಟಾಗಿ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ ಸೂಚಿಸಿದರು.

Advertisement

ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮ, ಎಚ್‌ಐವಿ-ಏಡ್ಸ್‌, ಕ್ಷಯರೋಗ, ರಕ್ತಭಂಡಾರ ಸನ್ನದ್ಧತಾ ಪಡೆ ಸಮಿತಿ ಸಮನ್ವಯ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲೆಯಾದ್ಯಂತ ಜರುಗಲಿರುವ ಕ್ಷಯರೋಗ ಪತ್ತೆ-ಚಿಕಿತ್ಸಾ ಆಂದೋಲನ ಕಾರ್ಯಕ್ರಮ ಅಂಗವಾಗಿ ಜಿಲ್ಲೆಯ ಮುಖ್ಯ ಸ್ಥಳಗಳನ್ನು ಗುರುತಿಸಿಕೊಂಡು ಸೂಕ್ತ ಜಾಗೃತಿ ಮೂಡಿಸಬೇಕು. ಆಶಾ ಕಾರ್ಯಕರ್ತೆಯರಿಗೆ ಗುರಿ ನೀಡಬೇಕು. ಗ್ರಾಪಂ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಆಂದೋಲನದ
ಮಾಹಿತಿ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ವಿವಿಧ ಔದ್ಯೋಗಿಕ ಕ್ಷೇತ್ರ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ವಿಶೇಷ ಶಿಬಿರ ಹಮ್ಮಿಕೊಂಡು, 
ಚಿಕಿತ್ಸೆ ಕೊಡಿಸಬೇಕು. ಜನಸಮೂಹ ಸೇರುವ ಸಾರ್ವಜನಿಕ ಸ್ಥಳದಲ್ಲಿ ರೋಗದ ಜಾಗೃತಿಗೆ ಪ್ರಚಾರ ಕೈಗೊಳ್ಳಬೇಕು. ಕ್ಷಯ
ರೋಗದಿಂದ ಆಗುವ ಆರೋಗ್ಯ ಪರಿಣಾಮಗಳು, ಸೋಂಕನ್ನು ಸೊನ್ನೆಗೆ ತರಲು ಆರೋಗ್ಯ ಇಲಾಖೆ ಸಿಬ್ಬಂದಿ ಸಕ್ರೀಯವಾಗಿ ಕೆಲಸ
ಮಾಡಬೇಕು ಎಂದರು. ಮಹಾನಗರ ಪಾಲಿಕೆ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ಶಿಕ್ಷಣ ಇಲಾಖೆ, ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಕೈಗಾರಿಕೆ ಇಲಾಖೆ ಅ ಧಿಕಾರಿಗಳು ಪರಸ್ಪರ ಸಮನ್ವಯ ಸಾಧಿ ಸಿ ಕಾರ್ಯ ನಿರ್ವಹಿಸಬೇಕು. ನಗರದ ಕೊಳಚೆ ಪ್ರದೇಶಗಳಲ್ಲಿ ಜಾಗೃತಿಗಾಗಿ ಜು. 15ರಂದು ಜಾಥಾ ಕಾರ್ಯಕ್ರಮ ಹಮಿಕೊಳ್ಳುವಂತೆ ಸೂಚಿಸಿದರು. 

ಕ್ಷಯರೋಗ ಪತ್ತೆಗೆ ವಿಶೇಷ ತಪಾಸಣೆಗಾಗಿ ಉಚಿತ ಸೇವೆ, ತಜ್ಞ ವೈದ್ಯರ ಸಮಾಲೋಚನೆ, ಸಂಭವನೀಯ ಕ್ಷಯರೋಗಿಗಳ 
ಎದೆಯ ಕ್ಷಕಿರಣ ತಪಾಸಣೆ ನೀಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು. ಅದರಂತೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ನೆರವು
ಪಡೆಯುವ ಜೊತೆಗೆ ಸಮೂಹ ಮಾಧ್ಯಮಗಳ ಮೂಲಕ ಸೂಕ್ತ ಅರಿವು ಮೂಡಿಸುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ರಕ್ತದಾನ ಶಿಬಿರಗಳನ್ನು ವ್ಯವಸ್ಥಿತವಾಗಿ ಹಮ್ಮಿಕೊಳ್ಳುವ ಜೊತೆಗೆ ಗುರಿಗೆ ತಕ್ಕಂತೆ ಸಾಧನೆ ಮಾಡಬೇಕು. ಕಳೆದ ವರ್ಷದ ಹಾಗೂ ಪ್ರಸಕ್ತ ಸಾಲಿನ ಗುರಿಯನ್ನು ಸಾಧನೆ ಮಾಡುವಂತೆ ತಿಳಿಸಿದ ಅವರು, ಹೆಚ್ಚು ಹೆಚ್ಚು ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಬೇಕು. ತಾಲೂಕು ಮಟ್ಟದಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಜಾಗೃತಿ ಹಾಗೂ ಅನುಷ್ಠಾನ ಕ್ರಮಕ್ಕೆ ಮುಂದಾಗಬೇಕು ಎಂದು
ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಕ್ಷಯ ರೋಗ ಅಧಿಕಾರಿ ಡಾ| ಜೆ.ಬೀಳಗಿ ಕಾರ್ಯಕ್ರಮ ಕುರಿತು ಸೂಕ್ತ ಮಾಹಿತಿ ನೀಡಿದರು. ಕ್ಷಯರೋಗ
ನಿಯಂತ್ರಣ ಘಟಕದ ಉಪನಿರ್ದೇಶಕ ಡಾ| ಗುಂಡಪ್ಪ, ಜಿಲ್ಲಾ ಸರ್ವೇಕ್ಷಣಾ ಧಿಕಾರಿ ಡಾ| ಎಸ್‌.ಎಸ್‌. ಮೈಲಾರೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next