Advertisement
ಒಂದು ಸಾವಿರ ಶಾಲೆ ಗಳಲ್ಲಿನ ಆಂಗ್ಲ ಮಾಧ್ಯಮಕ್ಕೆ ಬೇಡಿಕೆ ಹೆಚ್ಚಿದೆ. ಆದರೆ 30ಮಕ್ಕಳಿಗೆ ಸಂಖ್ಯೆ ಮಿತಿಗೊಳಿಸಿರುವ ಕಾರಣ ಹೆತ್ತವರಿಗೆ ನಿರಾಶೆ ಯಾಗಿದೆ. ಹೀಗಾಗಿ “ನಲಿ-ಕಲಿ’ಯಲ್ಲಿ ಆಟ- ಚಟುವಟಿಕೆಗಳ ಮೂಲಕ ಇಂಗ್ಲಿಷ್ ಕಲಿಸಲು ಇಲಾಖೆ ಮುಂದಾಗಿದೆ.
ಆಯ್ಕೆಯಾದ ಶಿಕ್ಷಕರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಿದ್ದು, ಅವರು ಚಟುವಟಿಕೆ ಆಧಾರಿತ ಇಂಗ್ಲಿಷ್ ಕಲಿಸುವರು. ಕೆಲವೆಡೆ 4 ಮತ್ತು 5ನೇ ತರಗತಿಯ ಆಂಗ್ಲ ಶಿಕ್ಷಕರನ್ನು ಇದಕ್ಕೆ ಗೊತ್ತುಪಡಿಸಲಾಗಿದೆ ಎನ್ನುತ್ತಾರೆ ಸರ್ವ ಶಿಕ್ಷಾ ಅಭಿಯಾನದ ಪ್ರಮುಖರು.
Related Articles
ಇದು ಚಟುವಟಿಕೆ ಆಧಾರಿತ ಇಂಗ್ಲಿಷ್ ಕಲಿಕೆ ವಿಧಾನ. ಕಾರ್ಡ್ ಎಂಬುದು ಹೆಸರಷ್ಟೆ, 1ರಿಂದ 3ನೇ ತರಗತಿಗಳ ಮಕ್ಕಳನ್ನು ತಲಾ 30 ವಿದ್ಯಾರ್ಥಿಗಳ ಯೂನಿಟ್‌ಗಳಾಗಿ ವಿಂಗಡಿಸಲಾಗುತ್ತದೆ. ಪ್ರತೀ ಯೂನಿಟ್‌ಗೆ ಒಂದರಂತೆ ಕಲಿಕಾ ಸಾಮಗ್ರಿ ಮತ್ತು ಕಲಿಕಾ ವಿಧಾನ ಒಳಗೊಂಡ ಒಂದು ಸೆಟ್ ಆ್ಯಕ್ಟಿವಿಟಿ ಕಾರ್ಡ್ ನೀಡಲಾಗುತ್ತದೆ. ಇದರಲ್ಲಿರುವ ಸೂಚನೆಗಳ ಅನುಸಾರ ಶಿಕ್ಷಕರು ಬೋಧಿಸಬೇಕು. ಮೊದಲ 3 ತಿಂಗಳಲ್ಲಿ ಪದ, ಉಚ್ಚಾರ, ಆಲಿಸುವಿಕೆ, ಸಂಭಾಷಣೆ, ಬರವಣಿಗೆ ಸಂಬಂಧಿತ ಆಟಗಳು ಮೂಲಕ ಇಂಗ್ಲಿಷ್ ಕಲಿಕೆ; ಓದುವುದು, ಬರವಣಿಗೆಗೆ ಒತ್ತು ನೀಡಲಾಗುತ್ತದೆ.
Advertisement
ಪ್ರಸಕ್ತ ವರ್ಷವೇ ಪ್ರಾರಂಭಸರಕಾರಿ ಶಾಲೆಗಳಲ್ಲಿ ಕನ್ನಡದಷ್ಟೇ ಇಂಗ್ಲಿಷ್ ಭಾಷೆಗೂ ಒತ್ತು ನೀಡಲು ಸರಕಾರ ಸೂಚಿಸಿದೆ. ಆಂಗ್ಲ ಮಾಧ್ಯಮ ಆರಂಭ ವಾದ 1 ಸಾವಿರ ಶಾಲೆಗಳಲ್ಲಿ “ನಲಿ-ಕಲಿ’ ವ್ಯವಸ್ಥೆಯಡಿ ಪರಿಣಾಮ ಕಾರಿ ಆಂಗ್ಲ ಶಿಕ್ಷಣ ನೀಡಲಾಗುವುದು. ದಾಖಲಾತಿ ಪೂರ್ಣಗೊಂಡ ಬಳಿಕ ಮಕ್ಕಳ ಸಂಖ್ಯೆ ಆಧರಿಸಿ ಆ್ಯಕ್ಟಿವಿಟಿ ಕಾರ್ಡ್ ಹಂಚಲಾಗುತ್ತದೆ.
-ಗುಣವತಿ,
ಜೂನಿಯರ್ ಪ್ರೋಗ್ರಾಮ್ ಆಫೀಸರ್
ನಲಿಕಲಿ ಯೋಜನೆ ಪರಿಣಾಮಕಾರಿ ಅಧ್ಯಯನ
“ನಲಿ-ಕಲಿ’ಯಲ್ಲಿ ಪರಿಚಯ ಭಾಷೆಯಾಗಿ ಇಂಗ್ಲಿಷ್ ಬೋಧನೆ ಇತ್ತು. ಆದರೆ ಇಂಗ್ಲಿಷ್ ಮಾಧ್ಯಮ ಆರಂಭವಾದ ಕಾರಣ ದಾಖಲಾತಿ ಹೆಚ್ಚುತ್ತಿದೆ. ಅಂತಹ ಮಕ್ಕಳೂ ಇಂಗ್ಲಿಷನ್ನು ಕಲಿಯಲೆಂದು ಚಟುವಟಿಕೆ ಆಧಾರಿತ ಬೋಧನೆ ಆರಂಭವಾಗುತ್ತಿದೆ.
– ವೈ. ಶಿವರಾಮಯ್ಯ
ಡಿಡಿಪಿಐ ದ.ಕ. -ಧನ್ಯಾ ಬಾಳೆಕಜೆ