ತಿಪಟೂರು: ತಾಲೂಕಾದ್ಯಂತ ವ್ಯಾಪಕವಾಗಿ ತೆಂಗಿನ ಚಿಪ್ಪುಗಳನ್ನು ಹಾಡು ಹಗಲೇ ಕೃಷಿಕ ರಿಗೆ, ಸಾರ್ವಜನಿಕರಿಗೆ ತೀವ್ರ ತೊಂದರೆ ಯಾಗುವಂತೆ ಕೃಷಿ ಭೂಮಿಯಲ್ಲಿ ಪರಿಸರ ಇಲಾಖೆ ಸೇರಿದಂತೆ ಇಲಾಖೆ ಗಳಿಂದಪರವಾನಗಿಪಡೆಯದೆಅಕ್ರಮ ಹಾಗೂ ಅನಧಿಕೃತವಾಗಿ ಸುಡುತ್ತಿದ್ದು, ಇದರಿಂದ ನಿರಂತರವಾಗಿ ಭುಗಿಲೇಳುತ್ತಿರುವ ದಟ್ಟ ಹೊಗೆಯಿಂದ ಕೃಷಿ, ತೋಟಗಾರಿಕೆಗಳ ಇಳುವರಿ ಮೇಲೆ ತೀವ್ರ ಪ್ರಭಾವ ಬೀರುತ್ತಿರುವುದಲ್ಲದೆ, ಪರಿಸರಕ್ಕೆ ಧಕ್ಕೆಯಾಗುತ್ತಿದ್ದರೂ ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರುದೂರುತ್ತಿದ್ದಾರೆ.
ತಾಲೂಕಿನ ಅನೇಕ ಭಾಗಗಳಲ್ಲಿ ನೂರಾರು ಸಂಖ್ಯೆಯಲ್ಲಿ ಈ ದಂಧೆ ನಿರಂತರವಾಗಿ ನಡೆ ಯುತ್ತಿದ್ದರೂ, ಈ ಅಕ್ರಮ ದಂಧೆಗಳನ್ನು ತಡೆ ಗಟ್ಟಬೇಕಾದ ಕಂದಾಯ ಅಧಿಕಾರಿಗಳು ದೂರು ಬಂದವರ ವಿರುದ್ಧ ನೆಪ ಮಾತ್ರಕ್ಕೆ ನೋಟಿಸ್ ನೀಡಿಕೈತೊಳೆದುಕೊಳ್ಳುತ್ತಿದ್ದು, ಚಿಪ್ಪು ಸುಡುವ ಉದ್ಯಮಿಗಳ ಹಿತ ಕಾಯುವ ಮೂಲಕ ಅನ್ನದಾತನ ಬದುಕಿಗೆಕೊಡಲಿ ಪೆಟ್ಟು ನೀಡುತ್ತಿದ್ದಾರೆ. ಈ ದಂಧೆ ನಡೆಸುತ್ತಿ ರುವರು ಕೃಷಿಗೆ ಯೋಗ್ಯವಾಗಿರುವ ಮತ್ತು ಬೆಳೆ ಬೆಳೆವ ಬಯಲು ಪ್ರದೇಶದ ಜಮೀನು ಗಳನ್ನೇ ಆಯ್ಕೆ ಮಾಡಿಕೊಂಡು(ಚಿಪ್ಪು ಸುಡಲು) ಬಾಡಿಗೆಗೆ ಪಡೆದು ತಾಲೂಕಿನಾದ್ಯಂತ ನೂರಾರು ಕಡೆಗಳಲ್ಲಿ ಈ ದಂಧೆ ನಡೆಸುತ್ತಿದ್ದಾರೆ.
ಪರಸರಕ್ಕೆ ತೀವ್ರ ಹಾನಿ: ಕೃಷಿ ಭೂಮಿಯಲ್ಲೇ ದೊಡ್ಡ ದೊಡ್ಡ ಗುಂಡಿಗಳನ್ನು ತೆಗೆದು ಲೋಡುಗಟ್ಟಲೆಕೊಬ್ಬರಿಚಿಪ್ಪುಗಳನ್ನು ಸುರಿದು ಬೆಂಕಿ ಹಚ್ಚುತ್ತಿದ್ದು, ಈ ಗುಂಡಿಯಿಂದ ಭುಗಿ ಲೇಳುವ ದಟ್ಟ ಹೊಗೆ ನಿರಂತರವಾಗಿ ಮೇಲೆ ಬಂದು ಕೃಷಿ ಭೂಮಿಯ ಸುತ್ತಮುತ್ತ ಒಂದು ಕಿಲೋಮೀಟರ್ ವಿಸ್ತಾರದಲ್ಲಿ ಹರಡಿಕೊಳ್ಳು ತ್ತಿದೆ. ಹೀಗೆ ಹಬ್ಬಿದ ದಟ್ಟ ಹೊಗೆ ಗಾಳಿ ಬೀಸಿದಂತೆಲ್ಲಾ ರಸ್ತೆ, ಹೊಲ-ತೋಟಗಳಿಗೆಲ್ಲ ಬೆಳ್ಳಗೆ ಸುತ್ತಿಕೊಳ್ಳುತ್ತಿದೆ. ಈ ಗುಂಡಿಗಳಿಂದ ಅತಿಯಾದ ಬಿಸಿಯಿರುವ ದಟ್ಟ ಹೊಗೆ ಹೊಲ-ತೋಟಗಳಲ್ಲೇ ಹರಡಿ ಸುತ್ತಿಕೊಳ್ಳುವುದರಿಂದ ಗಿಡ-ಮರಗಳು ಸುಟ್ಟ ರೋಗಬಂದಂತಾಗಿ ಕೃಷಿ ಮತ್ತು ಪರಸರಕ್ಕೆ ತೀವ್ರ ಹಾನಿಯಾಗುತ್ತಿದೆ.
ಬಿಸಿ ಹೊಗೆಯಿಂದ ರೈತ ಉಪಕಾರಿಗಳಾದ ಜೇನು ಮತ್ತಿತರೆ ಕೀಟಗಳು,ಪಕ್ಷಿ ಸಂಕುಲಗಳು ನಾಶವಾಗಿ ಹೊಲ-ತೋಟಗಳ ಬೆಳೆಗಳ ಇಳುವರಿ ವಿಪರೀತವಾಗಿ ಕಡಿಮೆಯಾಗಿರುವು ದಲ್ಲದೆ, ಖುಷ್ಕಿ ಬೆಳೆಗಳಾದ ರಾಗಿ, ತೊಗರಿ ಜೋಳ ಸೇರಿದಂತೆ ತೆಂಗು, ಅಡಕೆ ಮತ್ತು ಬಾಳೆಯಂಥ ತೋಟಗಾರಿಕೆ ಬೆಳೆಗಳು ನಾನಾ ರೋಗರುಜಿನಗಳಿಗೆ ಈಡಾಗಿ ರೈತನಿಗೆ ತೀವ್ರ ಹೊಡೆತ ಬೀಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.ವ್ಯವಸಾಯಕ್ಕೆಂದು ಬಳಕೆಯಲ್ಲಿರುವ ಪಂಪ್‌ಸಟ್‌ಗಳಿಂದ ಅಕ್ರಮವಾಗಿ ಈ ಉದ್ಯಮಕ್ಕೆ ಯಥೇಚ್ಚವಾಗಿ ನೀರು ಉಪ ಯೋಗಿಸುತ್ತಿದ್ದು, ಈ ಬಗ್ಗೆ ಬೆಸ್ಕಾಂನವರು ಯಾವುದೇ ಕ್ರಮ ಜರುಗಿಸದಿರುವುದು ಅನುಮಾನಕ್ಕೆಡೆ ಮಾಡಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಅಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ.
ಯಾರು ಪ್ರಶ್ನಿಸುತ್ತಿಲ್ಲ: ಚಿಪ್ಪು ಸುಡುವ ವ್ಯವಹಾರ ದೊಡ್ಡಮಟ್ಟದ ಟರ್ನ್ಓವರ್ ತಲುಪಿ ಇದೊಂದು ಅಕ್ರಮ ಬೃಹತ್ ಉದ್ಯಮವಾಗಿದ್ದು, ಹೆಚ್ಚಿನ ಲಾಭ ತರುತ್ತಿರುವ ಅಂತರ್‌ರಾಜ್ಯಬ್ಯುಸಿನೆಸ್‌ಆಗಿ ನಡೆಯುತ್ತಿದೆ. ವಿಪರ್ಯಾಸವೆಂದರೆ ಪ್ರತಿಯೊಂದು ಉದ್ಯಮ, ಕೈಗಾರಿಕೆಗಳಿಗೂ ಹತ್ತು ಹಲವು ಕಾಯ್ದೆ-ಕಾನೂನುಗಳು ಜಾರಿಯಲ್ಲಿದ್ದರೂ ಕೃಷಿ ಜಮೀನುಗಳಲ್ಲಿ ಹಾಗೂ ಅಕ್ಕಪಕ್ಕ ಕೃಷಿ ಜಮೀನುಗಳಿಗೆ ಕಂಟಕ ತರುತ್ತಿರುವ ಈ ಉದ್ಯಮಕ್ಕೆ ಯಾವುದೇ ಇಲಾಖೆಗಳ ಪರವಾನಗಿ ಇಲ್ಲದಿದ್ದರೂ ಯಾವ ಇಲಾಖೆ ಯವರೂ ಪ್ರಶ್ನಿಸುತ್ತಿಲ್ಲ. ಜಿಲ್ಲಾಧಿಕಾರಿಗಳು, ಪರಿಸರ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಗಳು ಕೂಡಲೇ ಚಿಪ್ಪು ಸುಡುವ ಉಧ್ಯಮಗಳಿಗೆ ವೈಜ್ಞಾನಿಕ ರೀತಿಯ ತಂತ್ರಜ್ಞಾನ ಮತ್ತು ಕಠಿಣ ಕಾನೂನು ಜಾರಿಗೆ ತರುವ ಮೂಲಕ ಇದೀಗ ಚಾಲ್ತಿಯಲ್ಲಿರುವ ಅವೈಜ್ಞಾನಿಕ ಮತ್ತು ಅಕ್ರಮ ದಂಧೆಯ ಚಿಪ್ಪು ಸುಡುವ ಉದ್ಯವ ಕೂಡಲೇ ಬಂದ್ ಮಾಡಿಸುವ ಮೂಲಕ ಈ ಉದ್ಯಮಕ್ಕೆ ವೈಜ್ಞಾನಿಕ ನೆಲೆಕಲ್ಪಿಸಬೇಕಾಗಿದೆ.