Advertisement

ಭಾರೀ ಹೆಸರು ಗಳಿಸಿದ್ದ ‘ಈಸೂರು ದಂಗೆ’ಇನ್ನಿಲ್ಲ..!

05:51 PM Mar 05, 2021 | Girisha |

ಶಿವಮೊಗ್ಗ : ಭಾರೀ ಜನಮನ್ನಣೆ ಗಳಿಸಿದ್ದ ಈಸೂರು ದಂಗೆ ಹೋರಿ ಸಾವನ್ನಪ್ಪಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ಈ ಹೋರಿ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಜನಪ್ರಿಯತೆ ಗಳಿಸಿತ್ತು.

Advertisement

ಈಸೂರು ಗ್ರಾಮದ ರೈತ ಕೊಪ್ಪದರ ಮಂಜಣ್ಣ ಎಂಬುವರು ಈ ಹೋರಿಯನ್ನು ಸಾಕಿದ್ದು, ಹೋರಿ‌ಹಬ್ಬದಂದು ಎಲ್ಲರ ಗಮನ ಸೆಳೆಯುತ್ತಿತ್ತು. ಅಲ್ಲದೆ ಈ ಹೋರಿಯನ್ನು ನೋಡಲೆಂದೇ ಅಕ್ಕ ಪಕ್ಕದ ಜಿಲ್ಲೆಯವರು ಹೋರಿ ಹಬ್ಬಕ್ಕೆ ಬರುತ್ತಿದ್ದರಂತೆ.

ಸ್ಪರ್ಧೆಯಲ್ಲಿ ಭಾಗವಹಿಸಿದರೆ ಬಹುಮಾನ ಫಿಕ್ಸ್ ಎನ್ನುವ ಮಟ್ಟಿಗೆ ಈಸೂರು ದಂಗೆ ನಂಬಿಕೆ ಗಳಿಸಿತ್ತು. 7 ಬೈಕ್, 15 ಫ್ರಿಜ್, 15 ಟಿವಿ, ಎತ್ತಿನಗಾಡಿ, ಬಂಗಾರ ಬಳೆ, 10ಕ್ಕೂ ಹೆಚ್ಚು ಗ್ರಾಂ ಬಂಗಾರ ಸೇರಿದಂತೆ ಹಲವು ಬಹುಮಾನ ಗೆದ್ದಿದೆ.

Advertisement

ಇಷ್ಟು ಜನಪ್ರಿಯತೆ ಪಡೆದ ಹೋರಿ ನಿನ್ನೆ ಸಂಜೆ ವಯೋಸಹಜವಾಗಿ ಮೃತಪಟ್ಟಿದ್ದು, ಟ್ರಾಕ್ಟರ್ ನಲ್ಲಿ ಮೆರವಣಿಗೆ ಮೂಲಕ ಅಂತಿಮ‌ ಸಂಸ್ಕಾರ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next