Advertisement

ಜೆಇಇ ಅಡ್ವಾನ್ಸ್ಡ್: ಗುಪ್ತಾಗೆ 1ನೇ ರ್‍ಯಾಂಕ್‌

01:00 AM Jun 15, 2019 | Team Udayavani |

ಹೊಸದಿಲ್ಲಿ: ಕಳೆದ ತಿಂಗಳು ನಡೆದಿದ್ದ ಈ ವರ್ಷದ ಜೆಇಇ (ಅಡ್ವಾನ್ಸ್ಡ್) ಪರೀಕ್ಷೆಯ ಫ‌ಲಿತಾಂಶವನ್ನು ರೂರ್ಕಿಯ ಐಐಟಿ ಸಂಸ್ಥೆ ಯು ಪ್ರಕಟಿಸಿದ್ದು, ಮಹಾರಾಷ್ಟ್ರದ ಬಳ್ಳಾರ್ಪು ರದ ಗುಪ್ತ ಕಾರ್ತಿಕೇಯ್‌ ಚಂದ್ರೇಶ್‌ ಎಂಬ ಅಭ್ಯರ್ಥಿ ದೇಶಕ್ಕೆ ಮೊದಲ ರ್‍ಯಾಂಕ್‌ ಗಳಿಸಿದ್ದಾರೆ. ಒಟ್ಟು 372 ಅಂಕಗಳಿಗೆ ಅವರು 346 ಅಂಕಗಳನ್ನು ಅವರು ಗಳಿಸಿದ್ದಾರೆ. ಅಲಹಾಬಾದ್‌ನ ಹಿಮಾಂಶು ಗೌರವ್‌ ಸಿಂಗ್‌ ದ್ವಿತೀಯ ರ್‍ಯಾಂಕ್‌ ಗಳಿಸಿದ್ದು, ದಿಲ್ಲಿಯ ಅರ್ಚಿತ್‌ ಬುಬ್ನ ತೃತೀಯ ರ್‍ಯಾಂಕ್‌ ಗಳಿಸಿದ್ದಾರೆ. ಮಹಿಳಾ ಅಭ್ಯರ್ಥಿಗಳಲ್ಲಿ ಶಬನಮ್‌ ಸಹಾಯ್‌ ಎಂಬುವರು, 372ಕ್ಕೆ 308 ಅಂಕ ಗಳಿಸಿ ಟಾಪರ್‌ ಆಗಿದ್ದಾರೆ. ಈ ಬಾರಿ, 1,61,319 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಡ್ ಗೆ ಹಾಜರಾಗಿದ್ದು, 38,705 ಅಭ್ಯರ್ಥಿಗಳು ತೇರ್ಗಡೆ ಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next