Advertisement

ಕೊರಟಗೆರೆ ಕ್ಷೇತ್ರದ ನಾಲ್ಕು ದಿಕ್ಕಿನಲ್ಲಿಯೂ ಶೈಕ್ಷಣಿಕ ಕ್ರಾಂತಿ: ಡಾ.ಜಿ.ಪರಮೇಶ್ವರ್

07:43 PM Jul 16, 2022 | Team Udayavani |

ಕೊರಟಗೆರೆ: ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ೩೦ಕೋಟಿ ರೂ ವಿಶೇಷ ಅನುಧಾನ ಮೀಸಲಿದೆ. ಕೊರಟಗೆರೆ ಕ್ಷೇತ್ರದ 36 ಗ್ರಾಪಂಗಳ ಅಧ್ಯಕ್ಷರು ಮತ್ತು ಸದಸ್ಯರ ಬೇಡಿಕೆ ಅನುಗುಣವಾಗಿ 50 ರಿಂದ 75 ಲಕ್ಷ ರೂ ಅನುಧಾನ ನೀಡುವ ಯೋಜನೆ ರೂಪಿಸಿದ್ದೇನೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.

Advertisement

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ೧೮ಗ್ರಾಮಗಳಲ್ಲಿ ಪಿಡಬ್ಲ್ಯೂಡಿ ಇಲಾಖೆ, ಹೇಮಾವತಿ ಮತ್ತು ಎತ್ತಿನಹೊಳೆ ಯೋಜನೆಯ ಸುಮಾರು ೮ಕೋಟಿ ೮೮ಲಕ್ಷ ಅನುಧಾನದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶನಿವಾರ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೇರವೇರಿಸಿದ ನಂತರ ಮಾತನಾಡಿದರು.

ಗುಡಿಸಲು ಮುಕ್ತ ಕೊರಟಗೆರೆ ಕ್ಷೇತ್ರವನ್ನಾಗಿ ಮಾಡುವ ಉದ್ದೇಶದಿಂದ ಈಗಾಗಲೇ ರಾಜ್ಯ ಸರಕಾರದಿಂದ 2961 ಮನೆಗಳನ್ನು ತಂದಿದ್ದೇನೆ. ಕೊರಟಗೆರೆ ಕ್ಷೇತ್ರದ 36 ಗ್ರಾಪಂಯಲ್ಲಿ ಮನೆಯಿಲ್ಲದೇ ಗುಡಿಸಲಿನಲ್ಲಿ ವಾಸವಿರುವ ಬಡ ಕುಟುಂಬಗಳಿಗೆ ಪ್ರಥಮ ಆಧ್ಯತೆ ನೀಡುತ್ತೇನೆ. ಗ್ರಾಪಂಯ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿವರ್ಗ ಅರ್ಹ ಪಲಾನುಭವಿಗಳ ಗುರುತಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಕೊರಟಗೆರೆ ತಾಲೂಕಿನ ಜಿಪಂ ಮತ್ತು ತಾಪಂ ಕ್ಷೇತ್ರಗಳಿಗೆ ಮೀಸಲಾದ ಸುಮಾರು 3 ಕೋಟಿ ಅನುಧಾನಕ್ಕೆ ಅನುಮೋದನೆಗೆ ಕಳುಹಿಸಿದ್ದೇನೆ. ಕೊರಟಗೆರೆ ಕ್ಷೇತ್ರದ 6 ಹೋಬಳಿಯಲ್ಲಿ ಕಳೆದ ೪ವರ್ಷದ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ. ಗ್ರಾಮೀಣ ಪ್ರದೇಶದ ಜನತೆಯ ಬೇಡಿಕೆಗೆ ಅನುಗುಣವಾಗಿ ಪ್ರತಿನಿತ್ಯ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಮುಂದಿನ ನಿಮ್ಮ ಜತೆಯಾಗಿ ಇರುತ್ತೇನೆ ಎಂದು ಭರವಸೆ ನೀಡಿದರು.

ಶೈಕ್ಷಣಿಕ ಕ್ರಾಂತಿಗೆ ಕೊರಟಗೆರೆ ಕ್ಷೇತ್ರದಲ್ಲಿ ಮೊದಲ ಆದ್ಯತೆ ನೀಡಿದ್ದೇನೆ. ಕೊರಟಗೆರೆ ಕ್ಷೇತ್ರದ ನಾಲ್ಕು ದಿಕ್ಕಿನಲ್ಲಿಯು ವಸತಿ ಶಾಲೆಗಳು ನಿರ್ಮಾಣ ಆಗಿವೆ. 100 ಕೋಟಿಗೂ ಅಧಿಕ ವೆಚ್ಚದ ವಸತಿ ಶಾಲೆಗಳು ಈಗಾಗಲೇ ನಿರ್ಮಾಣವಾಗಿವೆ. ಕೋಳಾಲ ಮತ್ತು ಸಿದ್ದರಬೆಟ್ಟದ ವಸತಿ ಶಾಲೆಗಳು ಈಗಾಗಲೇ ಉದ್ಘಾಟನೆಗೆ ಸಿದ್ದವಾಗಿವೆ. ಗ್ರಾಮೀಣ ಪ್ರದೇಶದ ಬಡಜನತೆಯ ಬಡತನ ನಿವಾರವಣೆಗೆ ಶಿಕ್ಷಣವೊಂದೇ ಪ್ರಮುಖ ಅಸ್ತ್ರ

Advertisement

ಕಾರ್ಯಕ್ರಮದಲ್ಲಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಯ್ಯ, ಕೊರಟಗೆರೆ ಅಧ್ಯಕ್ಷರಾದ ಅರಕೆರೆಶಂಕರ್, ಅಶ್ವತ್ಥನಾರಾಯಣ್, ತುಮುಲ್ ನಿರ್ದೇಶಕ ಈಶ್ವರಯ್ಯ, ತಾಪಂ ಮಾಜಿ ಉಪಾಧ್ಯಕ್ಷ ವೆಂಕಟಪ್ಪ, ಯುವಧ್ಯಕ್ಷ ವಿನಯ್‌ಕುಮಾರ್, ಮುಖಂಡರಾದ ಜಯರಾಮು, ಉಮಾಶಂಕರ್, ರಾಜಣ್ಣ, ವೆಂಕಟೇಶಗೌಡ ಸೇರಿದಂತೆ ಗ್ರಾಪಂಯ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

8 ಕೋಟಿ 88 ಲಕ್ಷದ ಅಭಿವೃದ್ದಿ ಕಾಮಗಾರಿ..

ತಣ್ಣೇನಹಳ್ಳಿಯಲ್ಲಿ ನೀರಿನ ಸಂಪರ್ಕಕ್ಕಾಗಿ ೨ಕೋಟಿ ೨೩ಲಕ್ಷ, ನರಸಯ್ಯನಪಾಳ್ಯದ ರಸ್ತೆಗೆ ೪೫ಲಕ್ಷ, ಗಡ್ಡೋಬನಹಳ್ಳಿಯ ರಸ್ತೆ-೨೫ಲಕ್ಷ, ಗಜಮುದ್ದನಹಳ್ಳಿ ರಸ್ತೆ ಕಾಮಗಾರಿ-೭೦ಲಕ್ಷ, ಚುಂಚೇನಹಳ್ಳಿ ರಸ್ತೆ-೪೦ಲಕ್ಷ, ಹೊಸಪಾಳ್ಯದ ರಸ್ತೆ-೩೭ಲಕ್ಷ, ಶಕುನಿತಿಮ್ಮನಹಳ್ಳಿ ರಸ್ತೆ-೧ಕೋಟಿ ೬೭ಲಕ್ಷ, ಹೊಳವನಹಳ್ಳಿ ಮುಖ್ಯರಸ್ತೆ-೩೬ಲಕ್ಷ, ಅಕ್ಕಿರಾಂಪುರ ಅಂಗನವಾಡಿ ಕಟ್ಟಡ-೧೬ಲಕ್ಷ, ಕ್ಯಾಶವಾರ ಸಿಸಿರಸ್ತೆ-೫ಲಕ್ಷ, ಸುಣ್ಣವಾಡಿಯ ರಸ್ತೆ-೯೯ಲಕ್ಷ, ಗುಂಡಿನಪಾಳ್ಯದ ರಸ್ತೆ-೩೫ಲಕ್ಷ, ಗಂಟಿಗಾನಹಳ್ಳಿಯ ರಸ್ತೆ-೫೦ಲಕ್ಷ, ಕೊರಟಗೆರೆ ಪದವಿಪೂರ್ವ ಕಾಲೇಜಿನ ಅಭಿವೃದ್ದಿ ಕಾಮಗಾರಿ-೧೦ಲಕ್ಷ ಗೌರಿನಿಲಯದ ಶಾಲಾ ಕೊಠಡಿ-೧೦ಲಕ್ಷ, ಗಡ್ಡೋಬನಹಳ್ಳಿಯ ಕುಡಿಯುವ ನೀರಿನ ಘಟಕ-೧೦ಲಕ್ಷ ಸೇರಿ ಒಟ್ಟು 8 ಕೋಟಿ 88 ಲಕ್ಷ ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next