Advertisement

ಸಂಸ್ಕಾರಯುತ ಶಿಕ್ಷಣದಿಂದ ಮಕ್ಕಳ ಗುಣ ವಿಕಸನ: ಪ್ರೊ|ರವೀಂದ್ರ

02:50 AM Jul 11, 2017 | Karthik A |

ಕೊಡಿಯಾಲ್‌ಬೈಲ್‌: ವಿದ್ಯಾಭಾರತಿ ಕರ್ನಾಟಕ, ದ.ಕ. ಜಿಲ್ಲೆಯ ಘಟಕಕ್ಕೆ ಸಂಲಗ್ನಗೊಂಡ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ, ಶಿಕ್ಷಕ-ಶಿಕ್ಷಕೇತರರಿಗಾಗಿ ಜಿಲ್ಲಾ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮ ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಲಯದಲ್ಲಿ ನಡೆಯಿತು. ಕೆನರಾ ಕಾಲೇಜಿನ ನಿವೃತ್ತ ಉಪನ್ಯಾಸಕ ಪ್ರೊ| ರವೀಂದ್ರ ಉದ್ಘಾಟಿಸಿದರು. ಪ್ರೀತಿ – ವಾತ್ಸಲ್ಯಭರಿತ ಸಂಸ್ಕಾರಯುತ ಶಿಕ್ಷಣ ಮಕ್ಕಳಲ್ಲಿ ಗುಣ ವಿಕಾಸಗೊಳ್ಳಲು ಸಹಕಾರಿ. ಸಮಸ್ಯೆಗಳನ್ನು ಎದುರಿಸಬಲ್ಲ ಮಾನಸಿಕ ಸಿದ್ಧತೆಗೆ ವಿದ್ಯಾರ್ಥಿಗಳನ್ನು ತಯಾರುಗೊಳಿಸಬೇಕು. ವಿದ್ಯಾಭಾರತಿಯ ಧ್ಯೇಯೋದ್ದೇಶ, ಕಾರ್ಯ ಚಟುವಟಿಕೆಗಳು ಇದಕ್ಕೆ ಪೂರಕ ಎಂದು ಅವರು ಹೇಳಿದರು.

Advertisement

ದ.ಕ. ವಿದ್ಯಾಭಾರತಿಯ ಅಧ್ಯಕ್ಷ ಪ್ರೊ | ಎಂ. ಬಿ. ಪುರಾಣಿಕ್‌ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಭಾರತಿಯ ಪ್ರಾಂತ ಉಪಾಧ್ಯಕ್ಷೆ ಪಾರ್ವತಿ, ಶಾರದಾ ವಿದ್ಯಾ ಸಂಸ್ಥೆಯ ಟ್ರಸ್ಟಿ ಪ್ರದೀಪ ಕುಮಾರ ಕಲ್ಕೂರ, ಎಸ್‌.ಕೆ.ಡಿ.ಬಿ. ಅಸೋಸಿಯೇಶನ್‌ನ ಕಾರ್ಯದರ್ಶಿ ಸುಧಾಕರ ರಾವ್‌ ಪೇಜಾವರ, ವಿದ್ಯಾಭಾರತಿ ಪ್ರಾಂತ ಕಾರ್ಯದರ್ಶಿ ವಸಂತ ಮಾಧವ ಉಪಸ್ಥಿತರಿದ್ದರು. ವಿದ್ಯಾಭಾರತಿ  ಜಿಲ್ಲಾ ಕಾರ್ಯದರ್ಶಿ ಲೋಕಯ್ಯ ಡಿ. ಪ್ರಸ್ತಾವನೆಗೈದರು. ಶಾರದಾ ವಿದ್ಯಾಲಯದ ಶಿಕ್ಷಕ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಪ್ರದೀಪ ಕುಮಾರ ಕಲ್ಕೂರ ವಂದಿಸಿದರು. ಶಾರದಾ ವಿದ್ಯಾಲಯದ ಉಪಪ್ರಾಂಶುಪಾಲ ದಯಾನಂದ ಕಟೀಲ್‌ ನಿರೂಪಿಸಿದರು.

ವಿದ್ಯಾಭಾರತಿಯ ಮೂಲಕ ಎಸ್‌ಜಿಎಫ್‌ಐಯಲ್ಲಿ ಪ್ರತಿನಿಧಿಸಿದ ಜಿಲ್ಲೆಯ ವಿವಿಧ ಶಾಲೆಗಳ ಕ್ರೀಡಾಳುಗಳನ್ನು ಗೌರವಿಸಲಾಯಿತು. ಕಟೀಲು ಶ್ರೀ ದುರ್ಗಾಪರಮೇಶ್ವರೀ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ| ಸೋಂದಾ ಭಾಸ್ಕರ ಭಟ್‌ ಅವರು ಸೋದರಿ ನಿವೇದಿತಾರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಅನಂತರ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆಗಳ ಶಿಕ್ಷಕ-ಶಿಕ್ಷಕೇತರರು ಹಾಗೂ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರಿಗಾಗಿ ಪ್ರತ್ಯೇಕ ಗುಂಪುಗಳಲ್ಲಿ ಚರ್ಚೆ ನಡೆಯಿತು. ಸಮಾರೋಪದಲ್ಲಿ ಶಾರದಾ ವಿದ್ಯಾಲಯದ ಅಧ್ಯಾಪಕ ಸತ್ಯನಾರಾಯಣ ಭಟ್‌ ವೈಯಕ್ತಿಕ ಗೀತೆ ಹಾಡಿದರು. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು.ದಯಾನಂದ ಕಟೀಲ್‌ ನಿರೂಪಿಸಿದರು. ರಜನಿ ಶೆಣೈ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next