Advertisement
ರಾಜ್ಯ ಸರಕಾರವು ಶಿಕ್ಷಣ ಸಂಸ್ಥೆಗಳಿಗೆ 2023-24 ನೇ ಶೈಕ್ಷಣಿಕ ಸಾಲಿನಲ್ಲಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಏಕರೂಪ ಶುಲ್ಕ ಸಮಿತಿಯ ಶಿಫಾರಸ್ಸಿನಂತೆ ಪರಿಷ್ಕೃತ ಶುಲ್ಕ ಪಟ್ಟಿ ನೀಡಲಾಗಿದೆ. ಕೋವಿಡ್ ಆರಂಭಕ್ಕೂ ಮುಂಚಿತವಾಗಿಯೇ ಈ ಶುಲ್ಕ ಪಟ್ಟಿ ತಯಾರಾಗಿತ್ತು. ಆದರೆ ಆಗ ಕೋವಿಡ್ ಸಂಕಷ್ಟವಿದ್ದ ಹಿನ್ನೆಲೆಯಲ್ಲಿ ಆಗಿನ ಬಿಜೆಪಿ ಸರಕಾರ ಶುಲ್ಕ ಏರಿಕೆಯನ್ನು ತಡೆ ಹಿಡಿದಿತ್ತು.
ಈಗ ವಿಶ್ವವಿದ್ಯಾಲಯಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂಬ ನೆಪವೊಡ್ಡಿ ಶುಲ್ಕ ಏರಿಕೆಗೆ ರಾಜ್ಯ ಸರಕಾರ ಅವಕಾಶ ನೀಡಿದೆ. ಇದರಿಂದಾಗಿ ಎಂಬಿಎ, ಎಂಸಿಎ, ಎಂಟೆಕ್, ಎಂಎಸ್ಸಿಯಂತಹ ಸ್ನಾತಕೋತ್ತರ ಪದವಿ, ಹಾಗೆಯೇ ಬಿಎ, ಬಿಕಾಂ, ಬಿಎಸ್ಸಿ ಮುಂತಾದ ಪದವಿ ಕೋರ್ಸ್‌ಗಳ ಶುಲ್ಕ ಹೆಚ್ಚಳಗೊಳ್ಳಲಿದೆ.