ಕಟಪಾಡಿ: ಸಾಧಕರನ್ನೇ ಒಳಗೊಂಡ ಕೀರ್ತಿಯು ಕೆ.ವಿ.ಎಸ್.ಎಂ. ಕಾಲೇಜಿಗೆ ಸಲ್ಲುತ್ತದೆ ಎಂದು ಇನ್ನಂಜೆ ಎಸ್.ವಿ.ಹೆಚ್. ಕಾರ್ಯದರ್ಶಿ ರತ್ನ ಕುಮಾರ್ ಹೇಳಿದ್ದಾರೆ.ಅವರು ಮಂಗಳವಾರ ಎಸ್. ವಿ.ಎಸ್. ಪದವಿ ಪೂರ್ವ ಕಾಲೇಜು ಅಡಿಟೋರಿಯಂನಲ್ಲಿ ನಡೆದ ಕಟಪಾಡಿ ಕೆ.ವಿ.ಎಸ್.ಎಂ. ಕಾಲೇಜು ಇದರ 11ನೇ ವಾರ್ಷಿಕೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ಸಂಸ್ಥೆಗಳನ್ನು ನಡೆಸುವುದು ಬಹಳಷ್ಟು ಪ್ರಯಾಸದಾಯಕ. ವಿದ್ಯಾ ಸಂಸ್ಥೆಗಳು ಬೆಳೆದು ನಿಂತಷ್ಟು ವಿದ್ಯಾರ್ಥಿಗಳಿಗೆ ಲಾಭದಾಯಕ.ಎಮದರು.ಮುಖ್ಯ ಅತಿಥಿಯಾಗಿದ್ದ ಉದ್ಯಾವರ ಸರಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಮಹೇಂದ್ರ ಎನ್. ಶರ್ಮ ಮಾತನಾಡಿ, ಗುಣಾತ್ಮಕ ಸ್ಪರ್ಧೆಯು ಜೀವನದ ಬಾಗಿಲು ತೆರೆದುಕೊಳ್ಳುವಲ್ಲಿ ಮಾಸ್ಟರ್ ಕೀ. ನಿಗದಿತ ಗುರಿಯೊಂದಿಗೆ ಸ್ಪರ್ಧೆಗಿಳಿದಲ್ಲಿ ಸತ್ವ ಬೆಳಕಿಗೆ ಬರಲು ಸಾಧ್ಯವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್.ವಿ.ಎಸ್. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಮಹೇಶ್ ಶೆಣೈ ವಹಿಸಿದ್ದರು.
ಹಿರಿಯ ಕೌÒರಿಕ ವಾಸು ಭಂಡಾರಿ, ಅಂತಾರಾಷ್ಟ್ರೀಯ ರಾಕ್‌ಬಾಲ್ ಆಟಗಾರ ಕಾಲೇಜಿನ ವಿದ್ಯಾರ್ಥಿ ವಿನೀತ್ ಜೆ. ಶೆಟ್ಟಿ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಕಾಲೇಜಿನ ಕ್ರೀಡಾ, ಕಲಿಕಾ ಸಾಧಕರನ್ನು ಗೌರವಿಸಿದರು. ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಪಿ.ಟಿ.ಎ. ಅಧ್ಯಕ್ಷ ವಿಟuಲ ಅಮೀನ್, ಕಾರ್ಯದರ್ಶಿ ಹರಿಣಿ, ಸ್ಟೂಡೆಂಟ್ಸ್ ಕೌನ್ಸಿಲ್ ಕೋ-ಆರ್ಡಿನೇಟರ್ ನಮಿತಾ ಆಚಾರ್ಯ, ಯು.ಜಿ. ಸ್ಟೂಡೆಂಟ್ಸ್ ಕೌನ್ಸಿಲ್ ಕಾರ್ಯದರ್ಶಿ ದೀಪ್ತಿ ಗೌರವ ಉಪಸ್ಥಿತರಿದ್ದರು.
ಯು.ಜಿ. ಸ್ಟೂಡೆಂಟ್ಸ್ ಕೌನ್ಸಿಲ್ ಅಧ್ಯಕ್ಷ ಲತೀಶ್‌ರಾಜ್ ಸ್ವಾಗತಿಸಿದರು. ಪ್ರಾಂಶುಪಾಲೆ ಪ್ರೊ| ಸತ್ಯರಂಜನಿ ಕಾಲೇಜಿನ ಶೈಕ್ಷಣಿಕ ಸಾಲಿನ ವರದಿ ನೀಡಿದರು. ರಾಮಕೃಷ್ಣ ನಾಯಕ್ ಸಮ್ಮಾನಿತರನ್ನು ಪರಿಚಯಿಸಿದರು. ಸುಕುಮಾರ್ ಶೆಟ್ಟಿಗಾರ್ ಬಹುಮಾನಿತ ರನ್ನು ಪರಿಚಯಿಸಿದರು. ಅಹನಾ, ಉಷಾ ಅತಿಥಿಗಳನ್ನು ಪರಿಚಯಿಸಿದರು. ದೀಪ್ತಿ ವಂದಿಸಿದರು. ಮಹೇಶ್ವರೀ ಕಾರ್ಯಕ್ರಮ ನಿರೂಪಿಸಿದರು.
ಅನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.