Advertisement

ಸಂವಿಧಾನದ ಪ್ರತಿಫ‌ಲದಿಂದ ಶೈಕ್ಷಣಿಕ ಅಭಿವೃದ್ಧಿ

04:24 PM Jan 29, 2018 | Team Udayavani |

ಚನ್ನಪಟ್ಟಣ: ಸಂವಿಧಾನದ ಪ್ರತಿಫ‌ಲದಿಂದಾಗಿ ಇಂದು ಸಮಾಜದಲ್ಲಿನ ಎಲ್ಲ ವರ್ಗದವರು ರಾಜಕೀಯವಾಗಿ, ಆರ್ಥಿಕವಾಗಿ, ಶೆ„ಕ್ಷಣಿಕವಾಗಿ ಅಭಿವೃದ್ಧಿಯಾಗಲು ಸಾಧ್ಯವಾಗಿದೆ ಎಂದು  ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ಗಂಗಾಧರ್‌ ಅಭಿಪ್ರಾಯಿಸಿದರು.

Advertisement

ಪಟ್ಟಣದ ಪೊಲೀಸ್‌ ಠಾಣೆ ಮುಂಭಾಗದ ಅಂಬೇಡ್ಕರ್‌ ಪುತ್ಥಳಿ ಆವರಣದಲ್ಲಿ 69ನೇ ಗಣರಾಜ್ಯೋತ್ಸವ ಪ್ರಯುಕ್ತ ತಾಲೂಕು ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ ಪ್ರಜಾತಂತ್ರ ಸಂರಕ್ಷಣಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಂಬೇಡ್ಕರ್‌ ಅವರು ತಮ್ಮ ಬಾಲ್ಯದಲ್ಲಿ  ಹಲವಾರು ಸಮಸ್ಯೆಗಳನ್ನು ಅನುಭವಿಸಿದ್ದರು. ಅವರಂತೆ ಬೇರೆ ಯಾವ ಸಮುದಾಯದವರು ಕಷ್ಟ ಅನುಭವಿಸಬಾರದು ಎಂಬ ಚಿಂತನೆಯಿಂದ  ಛಲದಿಂದ ಅತ್ಯುನ್ನತ ಶಿಕ್ಷಣವನ್ನು  ಪಡೆದು ಸಂವಿಧಾನದ ರಚನೆಗೆ ಮುಂದಾದರು ಎಂದರು.

ದಲಿತ ಮುಖಂಡ ಎಸ್‌.ಸಿ.ಶೇಖರ್‌ ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಪ್ರತಿಮೆಯ ನಿರ್ಮಾಣಕ್ಕಾಗಿ ಹಲವಾರು ಅಭಿಮಾನಿಗಳು ಕೈಜೋಡಿಸಿ ಇಂದು ರಸ್ತೆಯ ಪ್ರಯಾಣಿಕರು ಶಿಲ್ಪಿಗೆ ಕೈಮುಗಿಯುವಂತಾಗಿದೆ.  ಅಂಬೇಡ್ಕರ್‌ ಅವರ ಜನ್ಮ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸುವುದಾಗಿ ತಿಳಿಸಿದರು.

ನಿವೃತ್ತ ಅಭಿಯಂತರ ರವಿಕುಮಾರ್‌ ಮಾತನಾಡಿ, ಇಂದು ಎಲ್ಲಾ ವರ್ಗದವರು ಸಮಾನವಾಗಿ ಎಲ್ಲಾ ವರ್ಗದಲ್ಲಿ ತಮ್ಮನ್ನು ತಾವು ಗುರ್ತಿಸಿಕೊಳ್ಳಲು ಅಂಬೇಡ್ಕರ್‌ ಅವರ ಸಂವಿಧಾನವೇ ಕಾರಣ. ಆದರೆ ಇಂದು ಅಂಬೇಡ್ಕರ್‌ ಅವರ ವ್ಯಕ್ತಿತ್ವವನ್ನು ಅಭ್ಯಾಸ ಮಾಡದವರು ಅವರ ಬರವಣಿಗೆಯನ್ನು ಅಪಮಾನ ಮಾಡಲು ಯತ್ನಿಸಿದ್ದಾರೆ ಎಂದು ವಿಷಾದಿಸಿದರು.

Advertisement

ಈ ಸಂದರ್ಭದಲ್ಲಿ ಕರ್ನಾಟಕ ಕಸ್ತೂರಿ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ, ಪ್ರಜಾ ಪರಿವರ್ತನಾ ಪಾರ್ಟಿ ರಾಜ್ಯ ಕಾರ್ಯದರ್ಶಿ, ಗ.ಚಂದ್ರಶೇಖರ್‌, ಅಭಿಯಂತರ ಎಂ.ಎಲ್‌.ಶಂಕರಪ್ಪ, ಎಸ್‌ಸಿ, ಎಸ್‌ಟಿ ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಮತ್ತೀಕೆರೆ ಹನುಮಂತಯ್ಯ, ಕೇಶವಮೂರ್ತಿ,

ಮಂಗಳವಾರಪೇಟೆ ನಾರಾಯಣಸ್ವಾಮಿ, ದಸಂಸ ಜಿಲ್ಲಾ ಸಂಚಾಲಕ ಕುಮಾರ್‌, ತಾಲೂಕು ಸಂಚಾಲಕ ವೆಂಕಟೇಶ್‌, ಜೆಡಿಎಸ್‌ ಮುಖಂಡ ಕೋಟೆ ಶ್ರೀನಿವಾಸ್‌, ಕೋಟೆ ಸಿದ್ದರಾಮಯ್ಯ, ಪ್ರಜಾ ಪರಿವರ್ತನಾ ಪಾರ್ಟಿ ಜಿಲ್ಲಾ ಕಾರ್ಯದರ್ಶಿ ನೀಲಸಂದ್ರ ಸಿದ್ದರಾಮು, ಸೇರಿದಂತೆ ಹಲವಾರು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next