Advertisement

ಯೋಗ, ಧ್ಯಾನ ಜತೆಗೆ ಶಿಕ್ಷಣ

11:42 PM Jan 28, 2020 | mahesh |

ಶಿಕ್ಷಣದಲ್ಲಿ ಇಂದು ಹಲವಾರು ಹೊಸತನಗಳು ಬಂದಿವೆ. ಕಲಿಯುವ, ಕಲಿಸುವ ಜವಾಬ್ದಾರಿಗಳು ಹೆಚ್ಚುತ್ತಾ ಹೋಗುತ್ತವೆ. ಕೆಲವೊಂದು ಕಡೆ ಶಿಕ್ಷಣ ಪದ್ಧತಿಗಳು ವಿದ್ಯಾರ್ಥಿಗಳಿಗೆ ಒತ್ತಡವನ್ನು ಹೆಚ್ಚಿಸುತ್ತಾ ಹೋಗುತ್ತವೆ. ಇದನ್ನು ನಿವಾರಿಸಲೆಂದೇ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಯೋಗ, ಧ್ಯಾನ ತರಗತಿಗಳನ್ನು ಆರಂಭಿಸಿವೆ. ಕಾಲೇಜು ವಿದ್ಯಾರ್ಥಿಗಳ ಬಿಂದಾಸ್‌ ಜೀವನದ ನಡುವೆಯೂ ಒಂದೆರಡು ಗಂಟೆಗಳು ಯೋಗ, ಧ್ಯಾನವನ್ನು ಮಾಡುವುದರಿಂದ ನೆಮ್ಮದಿ ಲಭಿಸುತ್ತದೆ. ಇದರ ಪ್ರಯೋಜನಗಳು ಹಲವಾರು. ಕೇವಲ ಯೋಗ, ಧ್ಯಾನಗಳ ಪರಿಚಯ ಮಾಡಲು ಮಾತ್ರವಲ್ಲ ವಿದ್ಯಾರ್ಥಿಗಳ ಆರೋಗ್ಯದ ನಿಟ್ಟಿನಲ್ಲೂ ಹೆಚ್ಚು ಕೆಲಸ ಮಾಡುತ್ತದೆ.

Advertisement

ಸ್ವನಿಯಂತ್ರಣಕ್ಕೆ ಸಹಕಾರಿ
ಕಾಲೇಜು ವಿದ್ಯಾರ್ಥಿಗಳಲ್ಲಿ ಮಾನಸಿಕ ಸಂಘರ್ಷ, ಹಠಾತ್‌ ಕೋಪ, ದುಡುಕು ಸ್ವಭಾವಗಳು ಅಧಿಕವಾಗಿರುತ್ತವೆ. ಇದರಿಂದ ಹೆಚ್ಚಿನ ಸಮಯಗಳಲ್ಲಿ ಮಾನಸಿಕ ನೆಮ್ಮದಿ ಹಾಳಾಗಿಬಿಡುತ್ತವೆ. ಯೋಗ, ಧ್ಯಾನಗಳು ಇಂತಹ ದುರ್ಬಲ ಮನಸ್ಸಿನ ಚಟುವಟಿಕೆಗಳನ್ನು ನಿಯಂತ್ರಿಸಲು ಸಹಕಾರಿ. ಸ್ವನಿಯಂತ್ರಣ ಹೊಂದಿರುವ ವಿದ್ಯಾರ್ಥಿಗಳು ಪರಿಪೂರ್ಣರಾಗಿರುತ್ತಾರೆ.

ಕ್ರೀಡೆಗೂ ಸಹಕಾರಿ
ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವವರಿಗೂ ಯೋಗದಿಂದ ಸಹಾಯವಾಗುತ್ತದೆ. ಹೆಚ್ಚಾಗಿ ನೃತ್ಯ, ಕ್ರೀಡೆಗಳಲ್ಲಿ ಭಾಗವಹಿಸುವವರಿಗೆ ದೇಹ ಆರೋಗ್ಯವಾಗಿರುವುದು ಮುಖ್ಯವಾಗುತ್ತದೆ. ಫ್ಲೆಕ್ಸಿಬಲ್‌ ದೇಹ ರಚನೆಗೆ ಯೋಗ ಸಹಾಯ ಮಾಡುತ್ತದೆ. ಮನಸ್ಸಿನ ಏಕಾಗ್ರತೆಯೂ ಪಠ್ಯೇತರ ಚಟುವಟಿಕೆಗಳಿಗೆ ತುಂಬಾ ಮುಖ್ಯ. ಇವುಗಳನ್ನೆಲ್ಲ ಸರಿದೂಗಿಸಲು ಯೋಗ ಸಹಾಯ ಮಾಡುತ್ತದೆ.

ಆತ್ಮವಿಶ್ವಾಸ ಹೆಚ್ಚಳ
ಮನಸ್ಸಿನ ತನ್ಮಯತೆ ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚು ಮಾಡುತ್ತದೆ. ಯಾವುದೇ ಸಂದರ್ಶನಗಳಿಗೆ ತೆರಳಿದಾಗ ಇಂದು ವ್ಯಕ್ತಿಯ ಆತ್ಮವಿಶ್ವಾಸವನ್ನು ನೋಡುತ್ತಾರೆ. ಯೋಗ, ಧ್ಯಾನ ಆತ್ಮವಿಶ್ವಾಸ ಹೆಚ್ಚಳಕ್ಕೆ ಸಹಕಾರಿ. ವಿದ್ಯಾಭ್ಯಾಸದ ಒಂದು ಭಾಗವಾಗಿ ಯೋಗ, ಧ್ಯಾನಗಳು ಗುರುತಿಸಲ್ಪಡುತ್ತದೆ. ಕಾಲೇಜಿನಲ್ಲಿ ಈ ತರಗತಿಗಳು ಇಲ್ಲದಿದ್ದರೆ ತರಬೇತಿಗೆ ತೆರಳಿಯಾದರೂ ಇವುಗಳನ್ನು ಅಭ್ಯಾಸ ಮಾಡುವುದರಿಂದ ಮಾನಸಿಕ ಸ್ವಾಸ್ಥ್ಯ ಲಭಿಸುತ್ತದೆ.

ಒತ್ತಡ ನಿವಾರಣೆಗೆ
ಯೋಗ, ಧ್ಯಾನಗಳು ಒತ್ತಡ ನಿವಾರಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ. ವಿದ್ಯಾರ್ಥಿಗಳು ಶಿಕ್ಷಣದ ಒತ್ತಡದ ಜತೆಗೆ ಯೋಗವನ್ನು ಮಾಡುವುದರಿಂದ ನೆಮ್ಮದಿ ಲಭಿಸುತ್ತದೆ. ಎಲ್ಲ ವಿಷಯಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳಲು ಹಾಗೂ ಸಿಟ್ಟು ತಡೆಯಲು ಇದು ಸಹಾಯ ಮಾಡುತ್ತದೆ.

Advertisement

ಗಮನ ಕೇಂದ್ರೀಕರಣಕ್ಕೆ ಸಹಕಾರಿ
ಮನಸ್ಸನ್ನು ಏಕಾಗ್ರತೆಗೊಳಿಸಿ, ಚಿತ್ತವನ್ನು ಒಂದೇ ಕಡೆ ನಿಲ್ಲಿಸುವುದರಿಂದ ನೆನಪಿನ ಶಕ್ತಿ ಅಧಿಕಗೊಳ್ಳುತ್ತದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕಲಿಯಲು ಹಾಗೂ ಇತರ ಚಟುವಟಿಕೆಗಳ ಕಡೆಗೆ ಗಮನ ಕೇಂದ್ರೀಕರಿಸಲು ಯೋಗ ಸಹಾಯ ಮಾಡುತ್ತದೆ. ಶ್ರದ್ಧೆ ಕೊರತೆ ಇರುವವರಿಗೆ ಅದನ್ನು ನೀಗಿಸಲು ಧ್ಯಾನ ಸಹಾಯ ಮಾಡುತ್ತದೆ.

- ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

Advertisement

Udayavani is now on Telegram. Click here to join our channel and stay updated with the latest news.

Next