Advertisement

ಬದುಕು ಎದುರಿಸುವ ಶಿಕ್ಷಣ ಅಗತ್ಯ: ಸೇಡಂ

12:39 PM Jul 18, 2022 | Team Udayavani |

ಚಿತ್ತಾಪುರ: ಮಕ್ಕಳಿಗೆ ಬದುಕು ಎದುರಿಸುವ ಶಿಕ್ಷಣ ಅಗತ್ಯವಾಗಿದೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಹಾಗೂ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹೇಳಿದರು.

Advertisement

ಪಟ್ಟಣದ ಬಜಾಜ್‌ ಕಲ್ಯಾಣ ಮಂಟಪದಲ್ಲಿ ಸೇಡಂನ ವಿದ್ಯಾಭಾರತಿ ಕರ್ನಾಟಕ, ಬಸವೇಶ್ವರ ವಿದ್ಯಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಹಮಿಲನ 2022ನೇ ಸಾಲಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು. ಮಕ್ಕಳಲ್ಲಿದ್ದ ಉತ್ತಮ ಗುಣಗಳನ್ನು ಪ್ರೋತ್ಸಾಹಿಸಬೇಕು. ಎಲ್ಲ ಶಿಕ್ಷಕರು ಪಂಚತಂತ್ರ ಕಥೆಗಳನ್ನು ಓದಿ ದಿನಕ್ಕೊಂದು ಕಥೆ ಹೇಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಬದುಕು ಎದುರಿಸುವ ಶಕ್ತಿ ಬರುತ್ತದೆ. ಅದಕ್ಕಾಗಿ ಶಿಕ್ಷಕರು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಅನೇಕ ಪಾಲಕರು ಅಂಕದ ವ್ಯಾಮೋಹಕ್ಕೆ ಸಿಲುಕಿದ್ದಾರೆ. ಇದರಿಂದ ಮುಂದೊಂದು ದಿನ ಪಾಲಕರು ದುರಂತ ಎದುರಿಸಬೇಕಾಗುತ್ತದೆ. ಬದುಕು ಎದುರಿಸುವ ಸಾಮಾನ್ಯ ಜ್ಞಾನವನ್ನು ತಂದೆ-ತಾಯಿಗಳು ಮಕ್ಕಳಿಗೆ ಕಲಿಸಬೇಕಾಗಿದೆ. ನಿರುದ್ಯೋಗ ಸಮಸ್ಯೆ ದೇಶದಲ್ಲಿ ಹೆಚ್ಚಾಗುತ್ತಿದೆ. ಅದನ್ನು ನಿವಾರಿಸಲು ತಂದೆ-ತಾಯಿಗಳು ಮಕ್ಕಳಿಗೆ ಸಣ್ಣ ಉದೋಗ್ಯದ ಬಗ್ಗೆ ಮಾಹಿತಿ ನೀಡಿ ಸ್ವಾವಲಂಬನೆ ಬದುಕು ನಡೆಸುವಂತೆ ಚಿಕ್ಕಂದಿನಲ್ಲೇ ಉತ್ತಮ ಸಲಹೆ ನೀಡಬೇಕು ಎಂದು ಹೇಳಿದರು.

ವಿದ್ಯಾಭಾರತಿ ದಕ್ಷಿಣ ಮಧ್ಯಕ್ಷೇತ್ರ ಕ್ಷೇತ್ರೀ¿å ಸಹ ಸಂಘಟನಾ ಕಾರ್ಯದರ್ಶಿ ಜಿ.ಆರ್‌.ಜಗದೀಶ ಮಾತನಾಡಿ, ಶಿಕ್ಷಕರು ಪಠ್ಯದಿಂದ ಹೊರಬಂದು ಮಕ್ಕಳಲ್ಲಿ ಆತ್ಮ ವಿಶ್ವಾಸ, ಸ್ವಾಭಿಮಾನ, ದೇಶಭಕ್ತಿ, ವ್ಯಕ್ತಿತ್ವ ವಿಕಾಸವಾಗುವ ಶಕ್ತಿ, ಸಾಮರ್ಥ್ಯ ಬೆಳೆಸಬೇಕು ಎಂದರು.

Advertisement

ವಿದ್ಯಾಭಾರತಿ ಜಿಲ್ಲಾಧ್ಯಕ್ಷ ಚೆನ್ನವೀರಪ್ಪ ಸಲಗರ ಮಾತನಾಡಿ, ವಿದ್ಯಾಭಾರತಿಯಿಂದ ಶಿಕ್ಷಕರಿಗೆ ತರಬೇತಿ, ವಿಜ್ಞಾನ ಮೇಳ, ವಸ್ತು ಪ್ರದರ್ಶನ, ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ಹಾಗೂ ಹೊಸ ಶಿಕ್ಷಣ ನೀತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಧ್ಯಾಭಾರತಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ದಂಡೋತಿ ಬಸವೇಶ್ವರ ಶಾಲೆ ಅಧ್ಯಕ್ಷ ರಾಜಶೇಖರ ತಿಮ್ಮನಾಯಕ ಮಾತನಾಡಿದರು.

ಸೇಡಂ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕ ರಾಜಶೇಖರ ವನಕೇರಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಕುರಿತು ಉಪನ್ಯಾಸ ನೀಡಿದರು. ಬಸವೇಶ್ವರ ವಿದ್ಯಾ ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾ ಧಿಕಾರಿ ಮಲ್ಲಿಕಾರ್ಜುನ ಸೇಡಂ, ಮಹಿಪಾಲರೆಡ್ಡಿ ಪಾಟೀಲ, ವಿದ್ಯಾಭಾರತಿ ಗೌರವಾಧ್ಯಕ್ಷ ಚೆನ್ನವೀರಪ್ಪ ಗುಡ್ಡಾ, ಉಪಾಧ್ಯಕ್ಷ ನಾಗೇಶ ಮೆಂಗಜಿ, ಗುಂಡಪ್ಪ ಕರೆಮನೋರ, ಪಿ. ಭೀಮರಡ್ಡಿ, ಬಸವೇಶ್ವರ ಶಾಲೆ ಕಾರ್ಯದರ್ಶಿ ಚಂದ್ರಶೇಖರ ಅವಂಟಿ, ಡಾ| ಪ್ರಭುರಾಜ ಕಾಂತಾ, ಶರಣಬಸಪ್ಪ ಬೊಮ್ಮನಹಳ್ಳಿ, ಚಿದಾನಂದ ಬಳ್ಳೂರಗಿ, ಶಿವಾನಂದ, ಬಸವರಾಜ ಬಾಳಿ, ಸಾಯಬಣ್ಣ ನಾಟಿಕಾರ, ಜಗದೀಶ ದಿಗ್ಗಾಂವಕರ್‌, ಬಾಲಾಜಿ ಬುರುಬುರೆ ಇದ್ದರು. ನರಸಪ್ಪ ಚಿನ್ನಕಟ್ಟಿ ನಿರೂಪಿಸಿದರು, ಗುಂಡಪ್ಪ ಕರಮನೋರ ಸ್ವಾಗತಿಸಿದರು, ದೇವಿಂದ್ರಪ್ಪ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next