ಯಡ್ರಾಮಿ: ಸ್ವಾತಂತ್ರ ಪೂರ್ವದಲ್ಲಿ ಮಹಿಳೆಯರ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಗಳನ್ನು ತೆರೆಸಿ ಅವುಗಳಿಗೆ ಸಹಾಯಧನ ನೀಡುವ ಮೂಲಕ ಸ್ತ್ರೀ ಶಿಕ್ಷಣದ ನೀತಿ ಜಾರಿಗೆ ತಂದ ಕೀರ್ತಿ ತ್ಯಾಗವೀರ ಲಿಂ. ಲಿಂಗರಾಜ ದೇಸಾಯಿಗೆ ಸಲ್ಲುತ್ತದೆ ಎಂದು ವಿರಕ್ತಮಠದ ಶ್ರೀ ಸಿದ್ಧಲಿಂಗ ಮಹಾ ಸ್ವಾಮೀಜಿ ನುಡಿದರು.
ತಾಲೂಕಿನ ಮಳ್ಳಿ ಗ್ರಾಮದಲ್ಲಿ ತ್ಯಾಗವೀರ ಶಿರಸಂಗಿ ಶ್ರೀ ಲಿಂಗರಾಜ ದೇಸಾಯಿ ವಿವಿದೋದ್ದೇಶ ಗ್ರಾಮೀಣ ಸೇವಾ ಟ್ರಸ್ಟ್ ಉದ್ಘಾಟನೆ ಹಾಗೂ ಲಿಂ. ಲಿಂಗರಾಜ ದೇಸಾಯಿ ಅವರ 161ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ವೀರಶೈವ ಲಿಂಗಾಯಿತ ಸಮುದಾಯದ ಲಕ್ಷಾಂತರ ಮಕ್ಕಳಿಗಾಗಿ ತಮ್ಮ ಇಡೀ ಆಸ್ತಿ ದಾನ ಮಾಡಿ ದಾನವೀರ ಎನಿಸಿದರು. ತಮ್ಮ ಬದುಕಿನುದ್ದಕ್ಕೂ ಸಮಾಜದ ಏಳಿಗೆ ಕನಸು ಕಂಡು ಆ ಮೂಲಕ ವೀರಶೈವ ಲಿಂಗಾಯಿತ ಸಮಾಜದ ಪ್ರಗತಿಗಾಗಿ ತಮ್ಮ ಇಡೀ ಜೀವನ ಮುಡಿಪಾಗಿಟ್ಟು ತ್ಯಾಗವೀರ ಎನಿಸಿಕೊಂಡವರು ಮಹಾನ್ ಚೇತನ ಲಿಂಗರಾಜರು.
ಅಲ್ಲದೇ 63 ಪುರಾತನ ಶರಣರ ಸಾಲಿನಲ್ಲಿ 64ನೇ ಶರಣರೆನಿಸಿಕೊಂಡ ಲಿಂಗರಾಜರು ಎಲ್ಲರಿಗೂ ಆದರ್ಶಪ್ರಾಯರು ಎಂದರು. ಇದಕ್ಕೂ ಮುನ್ನ ಕಡಕೋಳ, ಆಲೂರಿನ ಪೂಜ್ಯರು ಮಾತನಾಡಿದರು. ಪತ್ರಕರ್ತ ಸಂತೋಷ ನವಲಗುಂದ ಮಾತನಾಡಿ, ಸಮುದಾಯದ ಏಳಿಗೆಗಾಗಿ ಪ್ರತಿಯೊಬ್ಬರೂ ನಿಸ್ವಾರ್ಥ, ಪ್ರಾಮಾಣಿಕವಾಗಿ ದುಡಿದಾಗ ಮಾತ್ರ ಜಯಂತಿ ಆಚರಣೆಗೆ ಅರ್ಥ ಬಂದಾಂತಾಗುತ್ತದೆ ಎಂದರು.
ಮಳ್ಳಿ ಹಿರೇಮಠದ ಪೂಜ್ಯ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಮಾಗಣಗೇರಿಯ ಪೂಜ್ಯ ಡಾ| ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಆಲೂರಿನ ಪೂಜ್ಯ ಕೆಂಚವೃಷಭೇಂದ್ರ ಶಿವಾಚಾರ್ಯ ಸ್ವಾಮೀಜಿ, ಕಡಕೋಳದ ಪೂಜ್ಯ ಡಾ| ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಬಸನಗೌಡ ಮಾಲಿಪಾಟೀಲ ನೇತೃತ್ವ, ರುದ್ರಗೌಡ ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಮುಖಂಡರಾದ ಗೊಲ್ಲಾಳಪ್ಪಗೌಡ ಪೊಲೀಸ್ ಪಾಟೀಲ, ಬೋಳನಗೌಡ ಪೊಲೀಸ್ ಪಾಟೀಲ, ಗ್ರಾಪಂ ಅಧ್ಯಕ್ಷೆ ಸರೋಜಿನಿ ಸಂತೋಷ ಯಾದಗೀರ, ಶಾಂತಗೌಡ ಮಾಲಿಪಾಟೀಲ, ಪ್ರಾಣೇಶರಾವ್ ಕುಲಕರ್ಣಿ, ನಿಂಗನಗೌಡ ಎಸ್.ಪೊಲೀಸ್ ಪಾಟಿಲ, ಮಲರೆಡ್ಡಿ ಕೊಂಗಂಡಿ, ದಯಾನಂದ ಹಿರೇಮಠ, ಸಂಗನಬಸಯ್ಯ ಚಿಕ್ಕಮಠ, ಗುರುರಾಜ ದೇಸಾಯಿ, ಹಳ್ಳೆಪ್ಪ ನಾಟೀಕಾರ, ಓಂಪ್ರಕಾಶ ಸಾಹು ದುದ್ದಗಿ, ರಮೇಶ ಸಾಹು ಸೂಗೂರ, ಸಂತೋಷ ಎಂ.ಯಾದಗೀರ, ಈರಣ್ಣ ಕುಂಬಾರ, ಮಹಿಬೂಬ ಖಾಜಿ, ಶಿವಶರಣಪ್ಪ ಮೇಲಿನಮನಿ, ಅಶೋಕ ಗೌಂಡಿ ಹಾಗೂ ಕುಡು ಒಕ್ಕಲಿಗ ಸಮಾಜ ಬಾಂಧವರಿದ್ದರು. ಬಸವರಾಜ ಬಳಬಟ್ಟಿ ಸ್ವಾಗತಿಸಿದರು. ನಿಂಗನಗೌಡ ನಿರೂಪಿಸಿ, ವಂದಿಸಿದರು.