Advertisement

JEE ಮತ್ತು NEET ಪರೀಕ್ಷೆಗಳನ್ನು ಮುಂದೂಡುವ ಯೋಚನೆ ಇಲ್ಲವೆಂದ ಶಿಕ್ಷಣ ಸಚಿವಾಲಯ

03:39 PM Aug 27, 2020 | Hari Prasad |

ಹೊಸದಿಲ್ಲಿ: ದೇಶದಲ್ಲಿ JEE ಮತ್ತು NEET ಪರೀಕ್ಷೆಗಳನ್ನು ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಶಿಕ್ಷಣ ಸಚಿವಾಲಯ ಕಾರ್ಯದರ್ಶಿಯವರು ಮಾಹಿತಿ ನೀಡಿದ್ದಾರೆ.

Advertisement

ಪ್ರಧಾನ ಮಂತ್ರಿ ಕಛೇರಿಯಲ್ಲಿ ನಡೆದ ಸಭೆಯ ಬಳಿಕ ಈ ಎರಡು ಪರೀಕ್ಷೆಗಳನ್ನು ಮುಂದೂಡದಿರುವ ಕೇಂದ್ರ ಸರಕಾರದ ತೀರ್ಮಾನ ಅಬಾಧಿತವಾಗಿರಲಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ದೇಶದಲ್ಲಿ ಕೋವಿಡ್ 19 ಸೋಂಕು ಪ್ರಕರಣ ಇನ್ನೂ ನಿಯಂತ್ರಣಕ್ಕೆ ಬರದಿರುವ ಹಿನ್ನಲೆಯಲ್ಲಿ ಈ ಪರೀಕ್ಷೆಗಳನ್ನು ನಡೆಸಬಾರದು ಎಂದು ದೇಶಾದ್ಯಂತ ಕೂಗೆದ್ದಿತ್ತು.

ಮತ್ತು ಹಲವು ರಾಜಕಾರಣಿಗಳು, ಚಿತ್ರ ತಾರೆಯರು ಈ ಸಂದರ್ಭಲದಲ್ಲಿ JEE ಮತ್ತು NEET ಪರೀಕ್ಷೆಗಳನ್ನು ನಡೆಸುವ ಕುರಿತು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದರು. ಇಷ್ಟು ಮಾತ್ರವಲ್ಲದೇ ಸ್ವೀಡನ್ ದೇಶದ ಪರಿಸವಾದಿ ಗ್ರೇಟಾ ಥನ್ ಬರ್ಗ್ ಸಹ ಈ ವಿಷಯದ ಕುರಿತಾಗಿ ತನ್ನ ಕಳವಳವನ್ನು ವ್ಯಕ್ತಪಡಿಸಿದ್ದರು.

ಇನ್ನೊಂದೆಡೆ, ಜಿಜೆಪಿ ಆಡಳಿತ ರಹಿತ ಏಳು ರಾಜ್ಯಗಳ ಮುಖ್ಯಮಂತ್ರಿಗಳು ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನ ಮೊರೆ ಹೋಗಲು ನಿರ್ಧರಿಸಿದ್ದಾರೆ.

Advertisement

ದೇಶಾದ್ಯಂತ 16 ಲಕ್ಷ ವಿದ್ಯಾರ್ಥಿಗಳು ಈಗಾಗಲೇ JEE ಮತ್ತು NEET ಪರೀಕ್ಷೆಯ ದಾಖಲು ಪತ್ರವನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next