Advertisement

ಜುಲೈಯಿಂದ ಶೈಕ್ಷಣಿಕ ವರ್ಷ ಆರಂಭ ಕುರಿತು ಚಿಂತನೆ : ಸಚಿವ ಸುರೇಶ್‌ ಕುಮಾರ್

01:05 AM Mar 18, 2021 | Team Udayavani |

ತುಮಕೂರು : ರಾಜ್ಯ ಸರಕಾರ ಮಕ್ಕಳ ಹಿತ ಮತ್ತು ಶೈಕ್ಷಣಿಕ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಶೈಕ್ಷಣಿಕ ವರ್ಷವನ್ನು ಜುಲೈಯಿಂದ ಆರಂಭಿಸುವ ಕುರಿತು ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ತಿಳಿಸಿದರು.

Advertisement

ಶ್ರೀ ಸಿದ್ಧಗಂಗಾ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಎಲ್ಲ ತರಗತಿಗಳಲ್ಲೂ ಬಹುತೇಕ ಪಾಠ ಪ್ರವಚನವನ್ನು ಮಾಡಲಾಗಿತ್ತು. ಆದರೆ ಈ ಬಾರಿ ಆನ್‌ಲೈನ್‌ ತರಗತಿಗಳೇ ಹೆಚ್ಚು ನಡೆದಿರುವುದರಿಂದ ಕಳೆದ ಬಾರಿ ಒಂದು ರೀತಿಯ ಸವಾಲು ಎದುರಾಗಿದ್ದರೆ, ಈ ಬಾರಿ ಮತ್ತೂಂದು ರೀತಿಯ ಸವಾಲು ಎದುರಾಗಿದೆ ಎಂದರು.

ಯಾವುದೇ ಸವಾಲು ಎದುರಾದರೂ ಮಕ್ಕಳ ಹಿತ ಮತ್ತು ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಜಾಗರೂಕತೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಮಾಲೋಚನೆ ಬಳಿಕ ತೀರ್ಮಾನ
ಕೋವಿಡ್‌ 2ನೇ ಅಲೆ ಆರಂಭವಾಗುವ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಯೋಗಕ್ಷೇಮ, ಭವಿಷ್ಯ ವನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಇಲಾಖೆ ಜತೆ ಸಮಾಲೋಚನೆ ನಡೆಸಲಾಗುತ್ತಿದೆ. ತರಗತಿಗಳ ವಿಚಾರದಲ್ಲಿ ಆರೋಗ್ಯ ಇಲಾಖೆಯ ಜತೆ ಸಮಾಲೋಚನೆ ನಡೆಸದೆ ಶಿಕ್ಷಣ ಇಲಾಖೆ ನಿರ್ಧಾರ ಕೈಗೊಳ್ಳುವುದಿಲ್ಲ ಎಂದರು.

ಮಕ್ಕಳ ಯೋಗಕ್ಷೇಮದ ಹಿನ್ನೆಲೆಯಲ್ಲಿ ಯಾವುದೇ ಶಾಲೆ ಸರಕಾರದ ನಿರ್ದೇಶನ, ನಿಯಮವನ್ನು ಉಲ್ಲಂ ಸುವುದು ಒಳಿತಲ್ಲ. ಈ ಸಂಬಂಧ ಈಗಾಗಲೇ ಎಲ್ಲ ಶಾಲೆಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ, 6ರಿಂದ 12ನೇ ತರಗತಿವರೆಗೆ ತರಗತಿಗಳು ಆರಂಭವಾಗಿವೆ. 1ರಿಂದ 5ನೇ ತರಗತಿ ವರೆಗೆ ತರಗತಿ ಆರಂಭಿಸಿಲ್ಲ, ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಶಾಲೆ ಆರಂಭಿಸಬೇಕು ಎಂದು ಒತ್ತಡ ಇದೆ; ಆದರೆ ಕೊರೊನಾ ಅಲೆ ಇರುವುದರಿಂದ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

Advertisement

1ರಿಂದ 5ರ ತನಕ ಪರ್ಯಾಯ ತರಗತಿ
ಆದರೆ ಮಕ್ಕಳಿಗೆ ತೊಂದರೆ ಆಗದಂತೆ 1ರಿಂದ 5ನೇ ತರಗತಿ ವರೆಗೆ ಪರ್ಯಾಯವಾಗಿ ತರಗತಿ ನಡೆಸಲಾಗುತ್ತಿದೆ. ಚಂದನ ವಾಹಿನಿ, ಆಕಾಶವಾಣಿ ಮೂಲಕ ಮತ್ತು ಆನ್‌ಲೈನ್‌ ತರಗತಿ ಮಾಡಲಾಗುತ್ತಿದೆ. ಅಲ್ಲದೆ ಮಕ್ಕಳಿಗೆ ಪಠ್ಯಪುಸ್ತಕ ಗಳನ್ನು ವಿತರಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next