Advertisement

ಶೈಕ್ಷಣಿಕ ಸಾಲ ಬಡ್ಡಿ ಮನ್ನಾ ಭರವಸೆ

10:54 AM Aug 09, 2018 | Team Udayavani |

ಕಲಬುರಗಿ: ಉನ್ನತ ವ್ಯಾಸಂಗಕ್ಕಾಗಿ ಶೈಕ್ಷಣಿಕ ಸಾಲದ ಬಡ್ಡಿ ತುಂಬುವುದಾಗಿ ಕೇಂದ್ರ ಸಚಿವರಾದ ಸದಾನಂದಗೌಡ,
ಅನಂತಕುಮಾರ, ಪ್ರಕಾಶ ಜಾವಡೇಕರ ಈಶಾನ್ಯ ಕರ್ನಾಟಕ ಶಿಕ್ಷಕರ ವೇದಿಕೆಯ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

Advertisement

ವಾರ್ಷಿಕ ಆದಾಯ 4ರಿಂದ 5 ಲಕ್ಷ ರೂ.ಗೂ ಕಡಿಮೆಯಿರುವರ ಮಕ್ಕಳು ಉನ್ನತ ವ್ಯಾಸಾಂಗಕ್ಕಾಗಿ ಪಡೆದ ಶೈಕ್ಷಣಿಕ ಸಾಲದ ಬಡ್ಡಿ ತುಂಬುವುದಾಗಿ ಕೇಂದ್ರ ಸರ್ಕಾರ 2009 ಹಾಗೂ 2014ರಲ್ಲಿ ಆದೇಶ ನೀಡಿದೆ. ಆದರೆ ಕೇಂದ್ರ ಸರ್ಕಾರ ಬಡ್ಡಿಯ ಹಣ ತುಂಬದ ಕಾರಣ ಬ್ಯಾಂಕ್‌ಗಳು ಅತ್ಯಂತ ದುಬಾರಿ ಶೇ.13ರಿಂದ ಶೇ.10 ರಷ್ಟು ಬಡ್ಡಿ ಬಾಕಿ ಹಣ ವಸೂಲಿ ಮಾಡುತ್ತಿವೆ. ಇದರಿಂದ ದ್ಯೋಗವಿಲ್ಲದೇ ಪರದಾಡುವ ನಿರುದ್ಯೋಗಿ ಪದವೀಧರರು ಹಣ ತುಂಬಲಾಗದಿರುವುದರಿಂದ ಬ್ಯಾಂಕ್‌ ಅಧಿಕಾರಿಗಳು ಪಾಲಕರಿಗೆ ನೋಟಿಸ್‌ ನೀಡುವ ಮೂಲಕ ಆಸ್ತಿ ಪಾಸ್ತಿ ಮುಟ್ಟುಗೋಲು ಹಾಕುವ ಜೊತೆ ವಸೂಲಾತಿಗೆ ವಿವಿಧ ರೀತಿಯ ಕಿರುಕುಳ ನೀಡುತ್ತಿದ್ದಾರೆ. 

ಇದರಿಂದ ಸಾಲ ಪಡೆದ ಪಾಲಕರು ಆತಂಕಕ್ಕೊಳಗಾಗಿದ್ದಾರೆ ಎಂದು ನಿಯೋಗ ವಿವರಿಸಿತು. ಈ ಕುರಿತು ಅನೇಕ ಬಾರಿ ಕೇಂದ್ರ ಸಚಿವರು, ಸಂಸದರಿಗೆ ಮನವಿ ಮಾಡಲಾಗಿದ್ದು, ಕೇವಲ ಭರವಸೆ ಮಾತ್ರ ನೀಡಲಾಗುತ್ತಿದೆ. ವೇದಿಕೆಯು
ಕಳೆದ ನಾಲ್ಕು ವರ್ಷದಿಂದ ಸತತ ಪ್ರಯತ್ನ ಮಾಡುತ್ತಿದೆ ಎಂದು ವೇದಿಕೆ ಅಧ್ಯಕ್ಷ ಎಂ.ಬಿ.ಅಂಬಲಗಿ ಮನವಿ ಮಾಡಿದರು.

ಈರೇಶ ಯಲ್ಲೂರ ಸಿಂಧನೂರ, ಸಂಗಣ್ಣ ಈಜೇರಿ, ವೀರಣ್ಣ ಭಂಡಾರಿ, ಮಹೇಶ್ವರ ಸ್ವಾಮಿ ಬಳ್ಳಾರಿ, ಬಸವರಾಜ
ರಾಜಾಪುರ, ವಿಜಯಕುಮಾರ ಬೀದರ, ನವೀನ ಪಾಟೀಲ ಹರಪನಳ್ಳಿ, ದಾಲರೆಡ್ಡಿ ಬೀದರ, ಸೂರ್ಯಕಾಂತ
ಜೀವಣಗಿ ಹಾಗೂ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next