Advertisement

ಶಿಕ್ಷಣದಷ್ಟೇ ಕ್ರೀಡೆಗಳಿಗೂ ಪ್ರಮುಖ್ಯತೆ ನೀಡಿ

11:22 AM Jul 28, 2017 | |

ಪಿರಿಯಾಪಟ್ಟಣ: ಶಿಕ್ಷಣದಷ್ಟೇ ಕ್ರೀಡೆಗಳಿಗೂ ಪ್ರಮುಖ್ಯತೆ ನೀಡಿ ಶಾಲಾ ಮಕ್ಕಳು ಉತ್ತಮ ಕ್ರೀಡಾಪಟುವಾಗಲು ಸರ್ಕಾರ ಯೋಜನೆಗಳನ್ನು ರೂಪಿಸ ಬೇಕು ಎಂದು ಜಿಪಂ ಸದಸ್ಯ ಜಯಕುಮಾರ್‌ ಹೇಳಿದರು.

Advertisement

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕಂದೇಗಾಲ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಆಯೋಜಿಸಿದ್ದ 2ನೇ ವೃತ್ತದ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿಯೂ ಅನೇಕ ಪ್ರತಿಭೆಗಳು ಅಡಗಿದ್ದು ಇವು ಹೊರಹೊಮ್ಮಲು ಇಂತಹ ಕ್ರೀಡಾಕೂಟಗಳು ಸಹಕಾರಿ. ಶಾಲಾ ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಪ್ರತಿಭೆ ಹೊರತರಲು ಪೂರಕವಾಗಿ ಅವರಿಗೆ ಒಳ್ಳೆಯ ಕ್ರೀಡಾ ಚಟುವಟಿಕೆಗಳನ್ನು ಕಲಿಸಬೇಕು ಎಂದರು.

ಎಂಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕ ಚಂದ್ರಶೇಖರಯ್ಯ ಮಾತನಾಡಿ, ಇಂದಿನ ಶಿಕ್ಷಣ ಖಾಸಗಿ ಶಿಕ್ಷಣ ಸಂಸ್ಥೆಗಳಿಗಿಂತ ಸರ್ಕಾರಿ ಶಾಲೆಗಳೆ ಉತ್ತಮವಾಗಿದ್ದು ಸರ್ಕಾರ ಕೂಡ ಮಕ್ಕಳಿಗಾಗಿ ಶಿಕ್ಷಣಕ್ಕೆ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿದ್ದು ಅನೇಕ ಯೋಜನೆಗಳನ್ನು ರೂಪಿಸಿದೆ. ಇಂತಹ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲಿಯೂ ತಮ್ಮ ಪ್ರತಿಭೆ ಹೊರಹೊಮ್ಮಬೇಕು ಎಂದು ತಿಳಿಸಿದರು.

 ಕಂದೇಗಾಲ ಗ್ರಾಮದ ರಾಷ್ಟ್ರೀಯ ಕ್ರೀಡಾಪಟು ಕೌಶಿಕ್‌, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಕೆ.ಎಸ್‌.ಮಹದೇವಪ್ಪ, ಗ್ರಾಪಂ ಸದಸ್ಯೆ ನಾಗಮಂಜು,  ಮುಖಂಡರಾದ ಯತಿರಾಜೇಗೌಡ, ಸಿಪಿ ರವಿ, ಶಿವಣ್ಣ, ಪ್ರಾಶಾಶಿ ಸಂಘದ ಅಧ್ಯಕ್ಷ ದೇವರಾಜೇಗೌಡ, ದೈಹಿಕ ಶಿಕ್ಷಕ ಪಂಚಾಕ್ಷರಿ, ಮುಖ್ಯ ಶಿಕ್ಷಕ ಕಾಂತರಾಜು, ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್‌ ಇತರರು ಇದ್ದರು. ಕ್ರೀಡಾಕೂಟದಲ್ಲಿ 17 ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next