Advertisement

ಭಾರತದ ವಿಶ್ವಮಟ್ಟದ ಸಾಧನೆಗೆ ಶಿಕ್ಷಣವೇ ಮೂಲ ಕಾರಣ

06:01 PM Sep 04, 2020 | Suhan S |

ಯಲಬುರ್ಗಾ: ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ಯಾವುದೇ ಕಾರಣಕ್ಕೂದುಡಿಮೆಗೆ ಕಳುಹಿಸಬಾರದು ಎಂದು ಯುಪಿಎಲ್‌ ಅಡ್ವಾಂಟಾ ಕಂಪನಿಯ ಆರ್‌ಜಿ ಎಂ. ಶ್ರೀಕಾಂತ ಕೆ.ಎಸ್‌. ಹೇಳಿದರು.

Advertisement

ತಾಲೂಕಿನ ಜಿ. ವೀರಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಯುಪಿಎಲ್‌ ಅಡ್ವಾಂಟಾ ಕಂಪನಿಯಿಂದ ವತಿಯಿಂದ ವಿದ್ಯಾರ್ಥಿಗಳ ಡೆಸ್ಕ್ ವಿತರಿಸಿ ಅವರು ಮಾತನಾಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಅತ್ಯಂತ ವೇಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದಕ್ಕೆ ಶಿಕ್ಷಣವೇ ಮೂಲ ಕಾರಣವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಮಾಡದೇ ಶಿಕ್ಷಣವಂತರನ್ನಾಗಿ ಮಾಡಿ. ನಮ್ಮ ಕಂಪನಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದು ರೈತರಿಗಾಗಿ ಹಲವಾರು ಯೊಜನೆಗಳ ಮುಖಾಂತರ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕ್ರಮವಹಿಸಲಾಗುತ್ತಿದೆ. ಪ್ರತಿವರ್ಷ ಇಂತಹ ಹಲವಾರು ಕಾರ್ಯಗಳನ್ನು ಮಾಡಲಾಗುತ್ತಿದೆ. ಶಾಲಾ ಮಕ್ಕಳಿಗೆ ಡಸ್ಕ್, ಸಮವಸ್ತ್ರ, ಕಂಪ್ಯೂಟರ್‌, ಪ್ರೋಜೆಕ್ಟರ್‌ ಸ್ಕ್ರೀನ್‌ ಸೇರಿದಂತೆ ವಿವಿಧ ಸಾಮಾಗ್ರಿಗಳನ್ನು ಹಲವಾರು ಶಾಲೆಗಳಿಗೆ ವಿತರಿಸಲಾಗಿದೆ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶರಣಮ್ಮ ಕಾರನೂರು ಮಾತನಾಡಿ, ಸಂಘ ಸಂಸ್ಥೆಯವರು ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ವಸ್ತು ದೇಣಿಗೆ ನೀಡುತ್ತಿದ್ದಾರೆ. ಇದರಿಂದ ಮಕ್ಕಳ ಕಲಿಕೆಗೆ ತುಂಬಾ ಅನುಕೂಲವಾಗುತ್ತದೆ. ಮಕ್ಕಳು ಸಾಮಾಗ್ರಿಗಳ ಪ್ರಯೋಜನ ಪಡೆದುಕೊಂಡು ಉತ್ತಮ ನಾಗರಿಕರಾಗಬೇಕು ಎಂದರು. ಗಿರೀಶ ಯಲಬುರ್ಗಾ, ಸುರೇಶ ಕುಷ್ಟಗಿ, ನಾಗರಾಜ ಸಾಲೇರ, ಕೋಟ್ರೇಶ ಹಿರೇಮಠ, ಉಮೇಶ ಹಡಪದ, ನಿಂಗರಾಜ ಬಿಸನಳ್ಳಿ, ವಿಜಯ ರಜಪೂತ, ಬಸು ಬಡಗಿ, ನಾಗರಾಜ ಹರಿಜನ, ಖಾದರಸಾಬ ನದಾಫ್‌, ಈಶಪ್ಪ ಹೋಳಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next