ಸುಮಾರು 5 ದಶಕಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.
Advertisement
ರಾಜಕೀಯ ಜೀವನಕಾಂಗ್ರೆಸ್ ಕಟ್ಟಾ ಅಭಿಮಾನಿಯಾಗಿ ಗುರುತಿಸಿಕೊಂಡು 1978ರಲ್ಲಿ ಮೊದಲ ಬಾರಿಗೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಿಂದ ಶಾಸಕರಾಗಿದ್ದರು. 1980ರಲ್ಲಿ ಕಾಂಗ್ರೆಸ್ ವಿಭಜನೆಯಾ ದಾಗ ದೇವರಾಜ ಅರಸು ಜತೆ ಗುರುತಿಸಿಕೊಂಡು ಅವರು ನಿಧನಹೊಂದಿದ ಬಳಿಕ ಮತ್ತೆ ಕಾಂಗ್ರೆಸ್ ಸೇರಿದರು. 1983ರಲ್ಲಿ ಶಾಸಕರಾಗುವ ಅವಕಾಶ ತಪ್ಪಿದಾಗ ಬೇಸರಗೊಂಡರು.
Related Articles
ಶಿಕ್ಷಣ ಸಚಿವರಾದಾಗ ಶಿಕ್ಷಣಕ್ಕೆ ಒತ್ತು ಕೊಡುವುದು ಮೊದಲ ಗುರಿಯಾಗಬೇಕು ಎನ್ನುವ ಅವರ ವಾದವನ್ನು ತಿಳಿದುಕೊಂಡೇ ಬಹುಶಃ ಇಡೀ ಜಿÇÉೆ ಶಿಕ್ಷಣಮಯವಾಯಿತು. 1998- 99ರಲ್ಲಿ ಜಿÇÉೆಯಲ್ಲಿ ಕೋಮು ಗಲಭೆಯಾದಾಗ ಮೊಹಿದೀನ್ ಉಸ್ತುವಾರಿ ಸಚಿವರಾಗಿದ್ದರು. ಆಗ ಅವರು ಅವರು ಜಾತಿ, ಮತ ನೋಡದೆ ಕಾನೂನು ಕ್ರಮ ನಿರ್ವಹಿಸಲು ಅವಕಾಶ ಕೊಟ್ಟಿದ್ದರು. ಇದಕ್ಕೆ ಜೆ.ಎಚ್. ಪಟೇಲ್ ಅವರು ಸಿಎಂ ಆಗಿ¨ªಾಗ ಮೊಹಿದೀನ್ ಕುರಿತು ಆಡಿದ ಮಾತುಗಳೇ ಸಾಕ್ಷಿ.
Advertisement
ಗ್ರೇಟರ್ ಮಂಗಳೂರು ಕನಸು ಕಂಡಿದ್ದರು. ಮೂಲ್ಕಿ ತನಕ ನೋಟಿಫಿಕೇಷನ್ ಹೊರಡಿಸಿದ್ದರು. ಅದು ಸುರತ್ಕಲ್ ತನಕವಾಗಿ ಮಾತ್ರ ಮಾರ್ಪಾಡುಗೊಂಡಿತು. ಇದಕ್ಕೆ ಗ್ರೇಟರ್ ಮಂಗಳೂರು ಎನ್ನುವ ಪರಿಕಲ್ಪನೆ ಮೊಹಿದೀನ್ ಅವರ ಕಾಲದÇÉೇ ಪ್ರಸ್ತಾಪವಾಗಿತ್ತು, ಆದರೆ ಕಾಲ ಕೂಡಿಬರಲಿಲ್ಲ. ಈ ನೋವು ಅವರಿಗಿತ್ತು.
ಅವರ ಆತ್ಮಕತೆ “ನನ್ನೊಳಗಿನ ನಾನು’ವಿನಲ್ಲಿ ಮುಕ್ತವಾಗಿ ಹೇಳಿಕೊಳ್ಳಲು ಸಾಧ್ಯವಾಗದ ಮಾತುಗಳನ್ನು ಹೇಳಿಕೊಂಡಿ¨ªಾರೆ. ಅದು ಬಿಡುಗಡೆಯಾಗುವ ಮೊದಲೇ ಅವರು ಬಿಟ್ಟುಹೋದರು ಎನ್ನುವುದೇ ಈಗ ಉಳಿದಿರುವ ಸತ್ಯ. ಅವರು ಮುಚ್ಚಿಟ್ಟದ್ದು, ಬಚ್ಚಿಟ್ಟು ಕೊಂಡಿದ್ದುದೆಲ್ಲವೂ ಹೊರಗೆ ಬರುವುದು ಒಂದಾದರೆ ಹೀಗೂ ಇತ್ತೇ ಅವರ ಬದುಕು – ಬವಣೆ ಎನ್ನುವ ಸೋಜಿಗವನ್ನು ಹುಟ್ಟು ಹಾಕುತ್ತದೆ.
– ಚಿದಂಬರ ಬೈಕಂಪಾಡಿ