Advertisement

ಮಕ್ಕಳ ಭವಿಷ್ಯಕ್ಕೆ ಶಿಕ್ಷಣವೇ ಬೆಳಕು

04:38 PM Jun 13, 2018 | Team Udayavani |

ಧಾರವಾಡ: ಮಕ್ಕಳಿಗೆ ನೀಡುವ ಶಿಕ್ಷಣ ಅವರ ಭವಿಷ್ಯವನ್ನು ಬೆಳಕಾಗಿಸಬಲ್ಲದು ಎಂದು ಪ್ರಭಾರ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಹೊಸಮನಿ ಸಿದ್ದಪ್ಪ ಹೇಳಿದರು.

Advertisement

ಇಲ್ಲಿನ ಲಕ್ಷ್ಮೀ ನಗರದ ಸರಸಗಂಗಾ ದೊಡವಾಡ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ  ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಮಗು ಶಾಲೆ ತೊರೆದು ಬಾಲ ಕಾರ್ಮಿಕನಾಗಿ ದುಡಿಯುವಂತಾಗಬಾರದು. ಶಿಕ್ಷಣವು ಮಕ್ಕಳ ಹಕ್ಕಾಗಿದ್ದು, ಈ ಹಕ್ಕಿಗೆ ಯಾವ ಕಾರಣಕ್ಕೂ ಧಕ್ಕೆ ಬಾರದಂತೆ ನೋಡಿಕೊಳ್ಳುವಲ್ಲಿ ಪ್ರತಿಯೊಬ್ಬ ಪ್ರಜ್ಞಾವಂತರ ಪಾತ್ರವಿದೆ ಎಂದರು. ಕಾರ್ಮಿಕ ಅಧಿಕಾರಿ ತರನುಮ್‌ ಬೆಂಗಾಲಿ ಮಾತನಾಡಿದರು. ಜಿಪಂ ಸಿಇಒ ಸ್ನೇಹಲ್‌ ರಾಯಮಾನೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್‌.ಎಸ್‌. ಚಿಣ್ಣನ್ನವರ್‌ ಪ್ರತಿಜ್ಞಾವಿಧಿ ಬೋಧಿಸಿದರು.

ಬಾಲವಿಕಾಸ ಅಕಾಡೆಮಿ ಯೋಜನಾಧಿಕಾರಿ ಬಿ.ಎಸ್‌. ಕಲಾದಗಿ, ಡಿಡಿಪಿಐ ಎನ್‌.ಎಚ್‌. ನಾಗೂರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣಾ ಸಂಗಳದ ಇದ್ದರು. ಹರ್ಲಾಪುರದ ಸಿವೈಸಿಡಿ ಕಲಾತಂಡದ ಎಸ್‌.ಎಸ್‌. ಹಿರೇಮಠ ಸಂಗಡಿಗರಿಂದ ಬಾಲಕಾರ್ಮಿಕ ಪದ್ಧತಿ ನಿಷೇಧದ ಕುರಿತು ಜಾಗೃತಿ ಗೀತೆ ಹಾಗೂ ನಾಟಕ ಪ್ರದರ್ಶನ ಜರುಗಿತು. ಇದಕ್ಕೂ ಮುನ್ನ ಜಾಥಾ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next