Advertisement

“ಶಿಕ್ಷಣವೆಂದರೆ ಕೇವಲ ಪಠ್ಯವಲ್ಲ, ಬದುಕಿನ ಮಾರ್ಗದರ್ಶನ’

08:37 PM Jun 15, 2019 | Team Udayavani |

ಮಹಾನಗರ: ಶಿಕ್ಷಣ ಎಂದರೆ ಕೇವಲ ಪಠ್ಯವಲ್ಲ, ಬದುಕಿನ ಮಾರ್ಗ ದರ್ಶನ ಎಂದು ನಗರದ ಹಂಪನಕಟ್ಟೆ ವಿವಿ ಕಾಲೇಜು ಪ್ರಾಂಶುಪಾಲ ಡಾ| ಉದಯ ಕುಮಾರ್‌ ಹೇಳಿದರು.

Advertisement

ವಿವಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಓಪನ್‌ ಹೌಸ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಳ್ಳೆಯ ಅವಕಾಶವಿದೆ ಎಂದು ಉದ್ದೇಶಕ್ಕೆ ವಿದ್ಯಾರ್ಥಿಗಳು ಆಯ್ದ ಕೋರ್ಸ್‌ ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ಸ ರಿಯಲ್ಲ. ತನ್ನ ಸಾಮರ್ಥ್ಯ, ಅಭಿರುಚಿ ನೋಡಿಕೊಂಡು ವಿಷಯಗಳನ್ನು ಆಯ್ಕೆ ಮಾಡಬೇಕು ಎಂದರು.

ಸಮಾಜಕ್ಕೆ ಬೆಳಕು
ಶಿಕ್ಷಣದ ಉದ್ದೇಶ ಅಂದರೆ ಜ್ಞಾನದ ಮೂಲಕ ಸಮಾಜಕ್ಕೆ ಬೆಳಕು ನೀಡು ವುದಾಗಿದೆ. ಎಲ್ಲ ವರ್ಗದ ಮಂದಿಗೆ ಜ್ಞಾನದ ಕೇಂದ್ರವಾಗುವುದು ಈ ಶಿಕ್ಷಣ ಸಂಸ್ಥೆಯ ಧ್ಯೇಯ. ವಿದ್ಯಾರ್ಥಿಗಳು ವಿಜ್ಞಾನ ಮೇಲು, ಕಲಾವಿಭಾಗ ಕೀಳು ಎಂಬ ಮನೋಭಾವ ಬೆಳೆಸಿಕೊಳ್ಳಬಾರದು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ದ.ಕ. ಜಿಲ್ಲಾ ವಾರ್ತಾಧಿಕಾರಿ ಖಾದರ್‌ ಶಾ ಮಾತ ನಾಡಿ, ವಿದ್ಯಾರ್ಥಿಗಳು ತಾವು ಕಲಿಯುವ ವಿಷಯವನ್ನು ಆಯ್ದುಕೊಂಡ ಮೇಲೆ ಗೊಂದಲಕ್ಕೀಡಾಗುವುದಕ್ಕಿಂತ ಕಾಲೇಜು ಸೇರುವ ಮೊದಲೇ ಓಪನ್‌ ಹೌಸ್‌ ಮೂಲಕ ಮಾರ್ಗದರ್ಶನ ಪಡೆಯುವುದು ಉತ್ತಮ ಎಂದರು. ಓಪನ್‌ ಹೌಸ್‌ ಸಂಯೋಜಕ ಪ್ರೊ| ಪಿ.ಎಲ್‌. ಧರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಧ್ಯಾ ಕಾಲೇಜು ಪ್ರಾಂಶುಪಾಲ ರಾಮಕೃಷ್ಣ ಎಂ., ಉಪನ್ಯಾಸಕ ಜಯವಂತ ನಾಯಕ್‌ ಉಪಸ್ಥಿತರಿದ್ದರು.

ಶಿಕ್ಷಣ ಸ್ಪರ್ಧೆಯಾಗದಿರಲಿ
ಶಿಕ್ಷಣ ಎಂದಿಗೂ ಸ್ಪರ್ಧೆಯಾಗಬಾರರು. ಆದರೆ, ಇಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಸ್ಪರ್ಧೆ ಕಾಣುತ್ತಿದೆ. ಒತ್ತಡದಿಂದ ಕಲಿಕೆ ಸಾಧ್ಯವಿಲ್ಲ. ಜ್ಞಾನ ಸಿದ್ಧಿಯಾಗಲು ಮುಕ್ತವಾತಾವರಣ ಬೇಕು ಎಂದು ಡಾ| ಉದಯ ಕುಮಾರ್‌ ಅವರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next