ಆಲಮೇಲ: ಮಕ್ಕಳಿಗೆ ಶಿಕ್ಷಣವೆ ಮುಖ್ಯವೆಂದು ಪರಿಗಣಿಸಬಾರದು. ಶಿಕ್ಷಣದ ಜೊತೆಗೆ ಸಂಸ್ಕಾರ ನಿತಿ ಪಾಠವು ಬೋಧಿಸಬೇಕು ಎಂದು ಎಂಜನಿಯರ್ ಶ್ರೀಶೈಲ ಮಠಪತಿ ಹೇಳಿದರು.
ಪಟ್ಟಣದ ನಿರ್ಮಲಾಲಯ ಸಂಸ್ಥೆಯ ಆಂಗ್ಲ ಮಾದ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳಿಗೆ ಸಂಸ್ಕರಾದ ಬೋಧನೆ ಅತ್ಯಶ್ಯಕವಾಗಿದೆ. ಸಂಸ್ಕಾರವಿಲ್ಲದಿದ್ದರೆ ಎಷ್ಟೇ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆದರು ವ್ಯರ್ಥ. ಅದಕ್ಕೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳಿರುವ ಸಂಸ್ಕಾರ ಮುಖ್ಯ ಆದ್ಯತೆ ನೀಡಿ. ಉದ್ಯೋಗಕ್ಕಾಗಿ ಮಕ್ಕಳಿಗೆ ಶಿಕ್ಷಣ ಕುಡಿಸುವ ಅವಲಂಬನೆಯನ್ನು ಬಿಟ್ಟು ಅವರ ಜ್ಞಾನಕ್ಕಾಗಿ ಶಿಕ್ಷಣ ಕೂಡಿಸಬೇಕು. ಉನ್ನತ ಹುದ್ದೆ ಪ್ರತಿಷ್ಠೆಗಾಗಿ ಶಿಕ್ಷಣ ಪಡೆದರೆ ಅದರಿಂದ ಯಾವುದೆ ಪ್ರಯೋಜನವಿಲ್ಲ. ಬದಲಿಗೆ ಜ್ಞಾನಕ್ಕಾಗಿ ಸಮಾಜದ ಬದಲಾವಣೆಗೆ ಈ ಶಿಕ್ಷಣ ಅವಶ್ಯಕತೆ ಇದೆ ಎಂದು ಹೇಳಿದರು.
ಸಂಸ್ಥೆ ಮುಖ್ಯಸ್ಥೆ ಸಿಸ್ಟರ್ ಓಲಿವಾ, ಮುಖ್ಯ ಶಿಕ್ಷಕಿ ಸಿಸ್ಟರ್ ಸಿಸಿಲಿಯಾ ಮಾತನಾಡಿ, ಶಿಕ್ಷಣದಿಂದ ಸಮಾಜದ ಅಂಕುಡೊಂಕುಗಳನ್ನು ಸರಿಮಾಡಲು ಬಹು ಮುಖ್ಯವಾಗಿದೆ. ಶಿಕ್ಷಣದ ಮಹತ್ವ ಶಕ್ತಿ ಎಲ್ಲಕಿಂತಲೂ ಹೆಚ್ಚಿದೆ. ಎಂದು ಎಲ್ಲರಿಗೂ ಮನವರಿಕೆಯಾಗಿದೆ. ಅದಕ್ಕೆ ಎಲ್ಲರಿಗೂ ಶಿಕ್ಷಣ ಮೊದಲ ಆದ್ಯತೆ ನೀಡುತ್ತಿದ್ದಾರೆ. ಇಂದಿನ ಶಿಕ್ಷಣ ವ್ಯವಸ್ಥೆ ಸ್ಪರ್ಧೆಯಂತಾಗಿದೆ. ಶಿಕ್ಷಣ ಸಂಸ್ಥೆಗಳು ನೀಡುವ ಗುಣಮಟ್ಟದ ಶಿಕ್ಷಣ ಹಾಗೆ ವಿದ್ಯಾರ್ಥಿಗಳು ಸ್ಪರ್ಧೆಯೊಂದಿಗೆ ಉನ್ನತ ಶಿಕ್ಷಣ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಫಲ ಸಿಕ್ಕೆ ಸಿಗಲಿದೆ ಅದಕ್ಕೆ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.