ಅಜೆಕಾರು: ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಭವಿಷ್ಯ ರೂಪಿಸುವ ಕೇಂದ್ರ ಗಳಾಗಿ ವಿದ್ಯಾರ್ಥಿಗಳ ಜೀವನಕ್ಕೆ ಬೆಳಕಾಗಬೇಕು. ಈ ನಿಟ್ಟಿನಲ್ಲಿ ಜ್ಞಾನ ಸುಧಾ ಕಾಲೇಜು ದಿಟ್ಟ ಹೆಜ್ಜೆಯನ್ನಿಟ್ಟಿದ್ದು ಇತರ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿ ರೂಪುಗೊಂಡಿದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಬದುಕಿಗೆ ಲೌಕಿಕ ಶಿಕ್ಷಣದ ಜತೆಗೆ ಅಧ್ಯಾತ್ಮ ಶಿಕ್ಷಣವೂ ಅಗತ್ಯ, ಇದನ್ನು ಮನಗಂಡ ಡಾ| ಸುಧಾಕರ ಶೆಟ್ಟಿ ಅವರು ಶಿಕ್ಷಣ ಸಂಸ್ಥೆಯ ವಠಾರದಲ್ಲಿಯೇ ದೇವಸ್ಥಾನ ನಿರ್ಮಿಸಿ ಮಕ್ಕಳಿಗೆ ಸಂಸ್ಕಾರದ ಅರಿವು ಮೂಡಿಸುವ ಕಾರ್ಯ ಮಾಡಿದ್ದಾರೆ. ಹೆತ್ತವರೂ ಸಹ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಆಗ ವಿದ್ಯಾರ್ಥಿಯು ರಾಷ್ಟ್ರೀಯ ಸಂಪತ್ತಾಗುತ್ತಾನೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್‌ನ ಸದಸ್ಯ ಗಣಪತಿ ಪೈ ಅವರು ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಬೇಕೆಂಬ ಉದ್ದೇಶ ದಿಂದ ಈ ಸಂಸ್ಥೆ ನಿರ್ಮಾಣಗೊಂಡಿದೆ ಎಂದರು.
ಮುಖ್ಯ ಅತಿಥಿ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಮಾತನಾಡಿ ಶಿಕ್ಷಣದ ಜತೆಗೆಮಾನವೀಯ ಮೌಲ್ಯ ಬೆಳೆಸುವ ಕಾರ್ಯವನ್ನು ಈ ಶಿಕ್ಷಣ ಸಂಸ್ಥೆ ಮಾಡುತ್ತಿರು ವುದು ಹೆಮ್ಮೆಯ ವಿಷಯ ಎಂದರು.
Advertisement
ಅಜೆಕಾರು ಪದ್ಮಗೋಪಾಲ ಎಜುಕೇಶನ್ ಟ್ರಸ್ಟ್ ಮತ್ತು ಕಾರ್ಕಳ ಗಣಿತನಗರ ಜ್ಞಾನಸುಧಾ ಸಂಸ್ಥೆಗಳಆಶ್ರಯದಲ್ಲಿ ಸಂಸ್ಥೆಯ ಸಭಾಂಗಣ ದಲ್ಲಿ ನಡೆದ ಶ್ರೀ ಮಹಾಗಣಪತಿ ದೇವಸ್ಥಾನದ 6ನೇ ಪ್ರತಿಷ್ಠಾ ಮಹೋತ್ಸವ ಮತ್ತು ಜ್ಞಾನಸುಧಾ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
Related Articles
Advertisement
ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರು, ಜ್ಞಾನಸುಧಾ ಕಾಲೇಜಿನ ಸಂಸ್ಥಾಪಕ ಡಾ| ಸುಧಾಕರ್ ಶೆಟ್ಟಿ ಪ್ರಸ್ತಾವಿಸಿದರು. ಟ್ರಸ್ಟಿಗಳಾದ ಕರುಣಾಕರ ಶೆಟ್ಟಿ, ಪ್ರಕಾಶ್ ಶೆಣೈ, ವಿದ್ಯಾ ಎಸ್. ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಅನಿಲ್ ಕುಮಾರ್ ಜೈನ್ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರದ ಪಟ್ಟಿಯನ್ನು ಶಿಕ್ಷಕರಾದ ಶಿಲ್ಪಾ, ರವಿ, ಸಂದೀಪ್, ಪ್ರಜ್ವಲ್ ಕುಲಾಲ್ ವಾಚಿಸಿದರು. ಡಾ| ಸುಧಾಕರ ಶೆಟ್ಟಿ ಸ್ವಾಗತಿಸಿದರು. ಸಂಗೀತ ಕುಲಾಲ್ ನಿರೂಪಿಸಿದರು. ಸಂಸ್ಥೆಯ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಭಂಡಿ ವಂದಿಸಿದರು.
ಸಂಸ್ಥೆಯ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ವಿಭಾಗದಲ್ಲಿ ವಿಷಯವಾರು ಶೇ. 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳ ಸಾಧನೆಗೆ ಕಾರಣರಾದ ಶಿಕ್ಷಕರಿಗೆ ಸುಮಾರು 44 ಲಕ್ಷ ರೂ. ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಎಸ್‌ಎಸ್‌ಎಲ್ಸಿಯಲ್ಲಿ 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಸಂಸ್ಥೆಯ ವಿದ್ಯಾರ್ಥಿ ಮನ್ವಿತ್ ಪ್ರಭು, ಬ್ಯಾಡ್‌ಮಿಂಟನ್‌ನಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿದ ನಿಯತಿ ಕೆ. ಶೆಟ್ಟಿ, ಪಿಎಚ್‌ಡಿ ಪದವಿ ಪಡೆದ ಡಾ| ಮಹಾದೇವ ಗೌಡ, ಕೋಚ್ ಸುಭಾಶ್ ಜೈನ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕಿ ಸೌಜನ್ಯಾ ಹೆಗ್ಡೆ, ಸಿಇಟಿಯಲ್ಲಿ ಉತ್ತಮ ರ್‍ಯಾಂಕ್ ಪಡೆದವರನ್ನು ಗೌರವಿಸಲಾಯಿತು.