Advertisement

ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ನಡೆಸುವುದು ಕಷ್ಟ

01:03 PM May 22, 2017 | Team Udayavani |

ಹುಣಸೂರು: ತಾಲೂಕಿನ ಚಿಲ್ಕುಂದ ಬಳಿ ಎಸ್‌.ಕೆ ಕಾಳೆಗೌಡ ಕುಟುಂಬದವರು ಸ್ಥಾಪಿಸಿರುವ ಐಕಾನ್‌ ಇಂಟರ್‌ನ್ಯಾಷನಲ್‌ ಶಾಲೆಯನ್ನು ಭಾನುವಾರ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಉದ್ಘಾಟಿಸಿದರು.

Advertisement

ಶಾಲಾ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆ ನಡೆಸುವುದು ತುಂಬ ಕಷ್ಟಕರವಾಗಿದ್ದು, ಇದನ್ನು ತಿಳಿದಿದ್ದರು ಸ್‌.ಕೆ.ರವಿಗೌಡ ಅವರ ಕುಟುಂಬದವರು ಹಳ್ಳಿಯಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿರುವುದು ಅಭಿನಂದನಾರ್ಹವಾಗಿದೆ. ಇದೇ ಸಂಸ್ಥೆ ಬೆಂಗಳೂರಿನಲ್ಲಿ  ಶಿಕ್ಷಣ ಸಂಸ್ಥೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡುವ ನಿಟ್ಟಿನಲ್ಲಿ ಶಾಲೆ ನಡೆಸಿರೆಂದು ಸಲಹೆ ನೀಡಿದ ಅವರು ಈ ಶಾಲಾ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಮತ್ತೂಮ್ಮೆ ಇಲ್ಲಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.

ಬೆಟ್ಟದಪುರ ವಿರಕ್ತ ಮಠದ ಶ್ರೀ ಚಿಕ್ಕವೀರದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ಪಠ್ಯದೊಂದಿಗೆ ಈ ದೇಶದ ಶ್ರೀಮಂತ ಸಂಸ್ಕೃತಿ, ಸಂಸ್ಕಾರ ಕಲಿಸುವ, ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿಗೂ ಪ್ರಾಧಾನ್ಯತೆ ನೀಡುವ ಮೂಲಕ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಈ ಸಂಸ್ಥೆ ಪೂರಕವಾಗಿ ಕಾರ್ಯ ನಿರ್ವಹಿಸಲಿ ಎಂದು ಆಶಿಸಿದರು.

ವೇದಿಕೆ ಕಾರ್ಯಕ್ರಮವನ್ನು ಎಚ್‌.ಡಿ.ದೇವೇಗೌಡರು ಜ್ಯೋತಿ ಬೆಳಗಿಸಿ ಉದ್ಘಾಟಿಸಲು ಬಂದಾಗ ಪುತ್ರ ರೇವಣ್ಣ ಆಗಮನವಾಯಿತು, ಆಗ ದೇವೇಗೌ ಡರು ಮಗನಿಂದ ಉದ್ಘಾಟಿಸುವ ಸಲುವಾಗಿ ಹೊತ್ತಿಸಿದ್ದ ಮೊಂಬತ್ತಿ ಹಿಡಿದಿದ್ದ ಅವರು ದೀಪ ಹಚ್ಚದೆ, ಮಾತನಾಡಲು ಫೋಡಿಯಂ ಬಳಿ ತೆರಳಿದ್ದರಿಂದ ಜೊತೆಯಲ್ಲಿದ್ದವರು ಆಶ್ವರ್ಯಚಕಿತರಾದರು, ಕೊನೆಗೆ ವೇದಿಕೆ ಹತ್ತಿದ ರೇವಣ್ಣ ಜ್ಯೋತಿ ಬೆಳಗಿಸಿದರು.

Advertisement

ಅಧ್ಯಕ್ಷತೆ ಶಾಸಕ ಎಚ್‌.ಪಿ.ಮಂಜುನಾಥ್‌ ವಹಿಸಿದ್ದರು, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಜಿಪಂ ಮಾಜಿ ಸದಸ್ಯರಾದ ಸಿ.ಟಿ.ರಾಜಣ್ಣ, ತೊಂಡಾಳುರಾಮಕಷ್ಣೇಗೌಡ, ವರ್ಜೀನಿಯಾ ತಂಬಾಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ವಿ.ಜವರೇಗೌಡ, ಜೆಡಿಎಸ್‌ ನಗರ ಅಧ್ಯಕ್ಷ ಹರೀಶ್‌ಗೌಡ, ಪಿರಿಯಾಪಟ್ಟಣ ಜೆಡಿಎಸ್‌ ಅಧ್ಯಕ್ಷ ಕೆ.ಮಹದೇವ್‌, ಸಂಸ್ಥೆಯ ಸಂಸ್ಥಾಪಕ ಎಸ್‌.ಕೆ.ಕಾಳೇಗೌಡ, ಅಧ್ಯಕ್ಷ ಎಸ್‌.ಕೆ.ರವಿಗೌಡ, ಕಾರ್ಯದರ್ಶಿ ಎಸ್‌.ಕೆ.ರಾಮಚಂದ್ರ  ಉಪಸ್ಥಿತರಿದ್ದರು.

ಶಾಸಕರು-ಸಂಸದರು ಗೈರು: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಮೆಸೂರು ಜಿಲ್ಲೆಯ ಯಾವುದೇ ಸಮಾರಂಭಕ್ಕೆ ಆಗಮಿಸಿದರೂ ತಪ್ಪದೆ ಭಾಗ ವಹಿಸುತ್ತಿದ್ದ ಶಾಸಕರಾದ ಚಿಕ್ಕಮಾದು, ಸಾ.ರಾ.ಮಹೇಶ್‌, ಜಿ.ಟಿ.ದೇವೇಗೌಡ ಸೇರಿದಂತೆ ಪಿರಿಯಾಪಟ್ಟಣ ತಾಲೂಕಿನ ಶಾಸಕ ವೆಂಕಟೇಶ್‌ ಹಾಗೂ  ಸಂಸದ ಪ್ರತಾಪಸಿಂಹ, ಮಾಜಿ ಸಂಸದ ವಿಶ್ವನಾಥ್‌ ಸಹ ಗೈರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next