Advertisement
ವಿದೇಶಕ್ಕೆ ಹೋಗಿ ಶಿಕ್ಷಣ ಪಡೆಯುವುದು ಬಹುಶಃ ಪ್ರತಿಯೊಬ್ಬರ ಕನಸು. ಆದರೆ ಈ ಕನಸು ಈಡೇರಿಸಿಕೊಳ್ಳಲು ಎಲ್ಲರಿಂದ ಸಾಧ್ಯವಾಗುವುದಿಲ್ಲ. ಎಷ್ಟೇ ಶ್ರೀಮಂತರಾದರೂ ವಿದೇಶಿ ಶಿಕ್ಷಣ ಎಂಬುದು ಕೈಗೆಟುಕದ ದ್ರಾಕ್ಷಿಯೇ ಸರಿ. ಕಾರಣ ಶಿಕ್ಷಣ ಪಡೆಯುವಲ್ಲಿ ಅಡ್ಡಿಯಾಗುವ ಕೆಲವೊಂದು ನೀತಿ ನಿಯಮಗಳು, ಅರ್ಹತೆ ಇಲ್ಲದಿರುವಿಕೆ ಇತ್ಯಾದಿ.
Related Articles
ಹಣ ಇದೆ ಎಂದ ಮಾತ್ರಕ್ಕೋ, ಹೆಚ್ಚು ಅಂಕ ಇದೆ ಎಂಬ ಕಾರ ಣ ಕ್ಕೋ ವಿದೇಶದಲ್ಲಿ ಸುಲಭವಾಗಿ ಶಿಕ್ಷಣಕ್ಕೆ ಆಯ್ಕೆಯಾಗಬಹುದು ಎಂದಂದುಕೊಂಡರೆ ತಪ್ಪು. ಯಾವುದೇ ಶಿಕ್ಷಣ ಸಂಸ್ಥೆಯ ಪ್ರವೇಶಕ್ಕೆ ಮುನ್ನ ಪ್ರವೇಶ ಪರೀಕ್ಷೆ ಬರೆಯುವುದು ಕಡ್ಡಾಯವಾಗಿರುತ್ತದೆ. ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡುವಿರಾದರೆ ಜಿಮಾಟ್, ಕಾನೂನು ಪದವಿ ಪಡೆಯಲು ಎಲ್‌ಸಾಟ್, ವೈದ್ಯಕೀಯ ಶಿಕ್ಷಣಕ್ಕೆ ಎಂಸಾಟ್, ಎಂಜಿನಿಯರಿಂಗ್ ಗೆ ಜಿಆರ್‌ಇ ಮುಂತಾದ ಪ್ರವೇಶ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಕೆಲವೊಂದು ದೇಶದಲ್ಲಿನ ಕಾನೂನಿಗೆ ಅನುಗುಣವಾಗಿ ಈ ಪ್ರವೇಶ ಪರೀಕ್ಷೆಗಳು ಬದಲಾಗುವುದರಿಂದ ಸೂಕ್ತ ಮಾಹಿತಿ ಪಡೆದೇ ಮುಂದಿನ ಹೆಜ್ಜೆ ಇಡಬೇಕು. ಪ್ರವೇಶಕ್ಕೆ ಮುನ್ನ ವಿದ್ಯಾರ್ಥಿಯ ಸಂಪೂರ್ಣ ವ್ಯಕ್ತಿ ಪರಿಚಯ, ಅಂಕಪಟ್ಟಿ, ಶಿಫಾರಸ್ಸು ಪತ್ರ ಮುಂತಾದವುಗಳನ್ನು ಜತೆಗಿಡಬೇಕಾಗುತ್ತದೆ. ಗಳಿಸಿದ ಅಂಕ, ಇಂಗ್ಲಿಷ್‌ನಲ್ಲಿ ಗಳಿಸಿದ ಗ್ರೇಡ್ ಮುಂತಾದವು ಈ ಸಂದರ್ಭದ ಲ್ಲಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಎಲ್ಲವೂ ಓಕೆ ಆದರೆ ಮುಂದೆ ಸಂದರ್ಶನವನ್ನೂ ಎದುರಿಸಬೇಕಾಗುತ್ತದೆ.
Advertisement
ಇವೆಲ್ಲಇರಲಿವಿದೇಶಿ ಶಿಕ್ಷಣ ಎಲ್ಲರಿಗೂ ಕೈಗೆಟಕುವಂತದ್ದಲ್ಲ. ಏಕೆಂದರೆ ಆರ್ಥಿಕತೆ, ಕೌಶಲ ಎಲ್ಲವೂ ಇದ್ದರೂ, ವೀಸಾ ಸಿಕ್ಕೇ ಸಿಗುತ್ತದೆ ಎಂದು ಹೇಳಲಾಗದು. ಹೀಗಾಗಿ ವೀಸಾ ಸಂದರ್ಶನಕ್ಕೂ ಮೊದಲೇ ತಯಾರಾಗಿ ಹೋಗಬೇಕು. ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್, ಟ್ರಾವೆಲ್ ಚೆಕ್ ರೂಪದಲ್ಲಿ ಹಣ ಅವಶ್ಯವಾಗಿ ಬೇಕಾಗುತ್ತದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿ ಕಾರ್ಡ್ ಹೊಂದಿದ್ದರೆ ಅನೇಕ ಡಿಸ್ಕೌಂಟ್, ಸೌಲಭ್ಯಗಳು ಸಿಗುತ್ತವೆ. ಪಾಸ್‌ಪೋರ್ಟ್, ವೀಸಾ, ಪ್ರವೇಶ ಪತ್ರ, ಇತರ ದಾಖಲೆಗಳನ್ನು ಮೂಲ ಪ್ರತಿಯೊಂದಿಗೆ, ಸ್ಕ್ಯಾನ್ ಮಾಡಿದ ಕಾಪಿಯನ್ನು ಲ್ಯಾಪ್‌ಟಾಪ್‌ನಲ್ಲಿ ಸೇವ್ ಮಾಡುವುದೂ ಉತ್ತಮ. ಸಾಲ ಸೌಲಭ್ಯವೂ ಇದೆ
ವಿದೇಶದಲ್ಲಿ ವ್ಯಾಸಂಗ ಮಾಡಲು ರಾಜ್ಯ ಸರಕಾರವು ಹಿಂದುಳಿದ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಇಲಾಖೆ ಮೂಲಕ 10 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡುತ್ತಿದೆ. ಆದರೆ ಇದಕ್ಕೆ ಆಯ್ಕೆ ಪ್ರಕ್ರಿಯೆಗಳಿದ್ದು, ಪಾಸಾದರೆ ಮಾತ್ರ ವಿದ್ಯಾರ್ಥಿ ವೇತನ ಗಳಿಸಬಹುದು. ಅಲ್ಲದೆ ಭಾರತದ ಸಾರ್ವಜನಿಕ ವಲಯ ಹಾಗೂ ಖಾಸಗಿ ವಲಯ ಬ್ಯಾಂಕ್‌ಗಳು ವಿದ್ಯಾರ್ಥಿಗಳಿಗೆ ವಿದೇಶಿ ವ್ಯಾಸಂಗಕ್ಕೆಂದೇ ಶಿಕ್ಷಣ ಸಾಲ ನೀಡುತ್ತವೆ. ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿವೆ. ಮುಖ್ಯವಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಭಾರತೀಯನಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕಕ್ಕೆ 18 ವರ್ಷಕ್ಕಿಂತ ಮೇಲ್ಪಟ್ಟವನಾಗಿದ್ದು, 30 ವರ್ಷದೊಳಗಿರಬೇಕು. ಯಾವುದೇ ಮಾನ್ಯತೆ ಪಡೆದ ವೃತ್ತಿಪರ ಮತ್ತು ತಾಂತ್ರಿಕ ಕೋರ್ಸ್‌ಗಳಿಗೆ, ಸಿಇಎಂಎ- ಲಂಡನ್, ಅಮೆರಿಕಾದಲ್ಲಿ ಸಿಪಿಎ ಇತ್ಯಾದಿಗಳ ಮೂಲಕ ನಡೆಸಲಾಗುವ ಕೋರ್ಸ್‌ಗಳಿಗೆ ಸಾಲ ಸೌಲಭ್ಯ ದೊರಕುತ್ತದೆ. ಗರಿಷ್ಠ 20 ಲಕ್ಷ ರೂ. ವರೆಗೆ ಸಾಲ ದೊರೆಯುತ್ತದೆ. ವಿದ್ಯಾರ್ಥಿಗಳು ಸಾಲ ಪಡೆಯುವ ಬಗ್ಗೆ ಬ್ಯಾಂಕಿಗೆ ಬಂದು ಸಾಲ- ಸೌಲಭ್ಯಗಳ ಬಗ್ಗೆ ವಿಚಾರಿಸಿ, ಮುಂದುವರಿಯಬಹುದು ಎನ್ನುತ್ತಾರೆ ಬ್ಯಾಂಕ್ ಉದ್ಯೋಗಿ ರಮೇಶ್ ನಾಯ್ಕ. ಮಾಹಿತಿ ಪಡೆದುಕೊಳ್ಳಿ
ಅರ್ಜಿ ಸಲ್ಲಿಸುವ ಮುನ್ನ ಮತ್ತು ಆಯ್ಕೆಯಾದ ಅನಂತರವೂ ನೀವು ಸೇರಲಿಚ್ಚಿಸಿದ ವಿಶ್ವ ವಿದ್ಯಾನಿಲಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕು. ಆ ಊರು, ಸ್ಥಳ ಪರಿಚಯ, ಜನವಾಸ, ವಿದ್ಯಾರ್ಥಿಗಳು, ಶಿಕ್ಷಕರು ಸಹಿತ ಸಮಗ್ರ ಮಾಹಿತಿ ಕಲೆಹಾಕಿ ಅನಂತರವಷ್ಟೇ ಹೋಗುವುದು ಉತ್ತಮ. ಜತೆಗೆ ಹಾಸ್ಟೆಲ್, ವಸತಿ ಸೌಕರ್ಯದ ಬಗ್ಗೆಯೂ ವಿಚಾರಿಸುವು ದೊಳಿತು. ಏಕೆಂದರೆ ನಮ್ಮ ದೇಶದಿಂದ ಇನ್ನೊಂದು ದೇಶಕ್ಕೆ ಹೋಗಿ ವರ್ಷಗಳ ಕಾಲ ಬದುಕು ಸಾಗಿಸುವುದೆಂದರೆ ಸುಲಭವಲ್ಲ. ಪ್ರಾಮುಖ್ಯವಾಗಿ ಅಲ್ಲಿನ ವಾತಾವರಣ ಮತ್ತು ಜನಜೀವನ ವಿಭಿನ್ನವಾಗಿದ್ದು, ಹೊಂದಿಕೊಳ್ಳುವುದೂ ಕೆಲವೊಮ್ಮೆ. ಧನ್ಯಾ ಬಾಳೆಕಜೆ