ಪಿರಿಯಾಪಟ್ಟಣ: ಅಕ್ಷರ ಮತ್ತು ಆರೋಗ್ಯ ಪ್ರಗತಿಯ ಸಂಕೇತವಾಗಿದ್ದು, ಪ್ರತಿಯೊಬ್ಬ ನಾಗರಿಕನಿಗೂ ಇವುಗಳನ್ನು ಕಲ್ಪಿಸುವುದು ಸರ್ಕಾರದ ಆಧ್ಯ ಕರ್ತವ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಾಜಿ ಸಂಸದ ಅಡಗೂರು ವಿಶ್ವನಾಥ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹಿಟ್ನೆಹೆಬ್ಬಾಗಿಲು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ರಂಗಮಂಟಪವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಪ್ರತಿಯೊಬ್ಬರ ಶಕ್ತಿ ಮತ್ತು ಸಂಪತ್ತು, ಅಕ್ಷರ ಸಂಸ್ಕೃತಿಗೆ ನನ್ನ ಕುಟುಂಬಲ್ಲಿ ನಾನೇ ಮೊದಲಿಗ, ಕುಟುಂಬಕ್ಕೆ ಅಕ್ಷರದ ಪರಿಚಯ ಇರಲಿಲ್ಲ ಗ್ರಾಮದ ಶಾನುಭೋಗರ, ಆಕ್ಷರಸ್ಥರ ಮನೆಯ ಬಾಗಿಲಿಗೆ ಹೋಗಿ ನಿಲ್ಲಬೇಕಿತ್ತು, ಅದಕ್ಕಾಗಿ ನಾನು 2002 ರಲ್ಲಿ ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ಬಸಿಯೂಟ ಯೋಜನೆಯನ್ನು ಆರಂಭಿದೆ. ಇಂದು ಈ ಯೋಜನೆಡಿ 85 ಲಕ್ಷ ಮಕ್ಕಳು ಮದ್ಯಾಹ್ನದ ಊಟ ಮಾಡುತ್ತಿದ್ದಾರೆ, ಇದರ ಹಿಂದಿನ ಪ್ರೇರಣೆ ಗುಲ್ಬರ್ಗದ ಒಬ್ಬ ಮಹಿಳೆ, ಆಕೆ ತನ್ನ ಮಗಳನ್ನು ಶಾಲೆಗೆ ಸೇರಿಸಿ ಮಗಳ ಊಟಕ್ಕಾಗಿ ಬೆರೊಬ್ಬರ ಮನೆಯಲ್ಲಿ ಕೂಲಿ ಕೆಲಸ ಮಾಡಬೇಕಾಗಿತ್ತು, ಈ ವಿಚಾರವನ್ನು ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣರವರಲ್ಲಿ ಪ್ರಸ್ತಾಪಸಿ ಬಹುತೇಕ ಮಕ್ಕಳು ಶಾಲೆಯಿಂದ ಹೊರ ಉಳಿಯುತ್ತಿರಲು ಆಹಾರ ಸಮಸ್ಯೆ ಪ್ರಮುಖವಾಗಿದ್ದು ಮಕ್ಕಳಿಗೆ ಶಾಲೆಯಲ್ಲಿಯೇ ಹಸಿವು ನೀಗಿಸುವ ಕೆಲಸ ಮಾಡಿದರೆ ಶಾಲಾ ಹಾಜರಾತಿ ಹೆಚ್ಚಿಸಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದಾಗ ಎಸ್.ಎಂ.ಕೃಷ್ಣ ಸಹಕಾರ ನೀಡಿದರು ಅಂಧಿನಿಂದ ಇಂದಿನ ವರೆಗೂ ಈ ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆ ಮಕ್ಕಳ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಈ ಯೋಜನೆ ಸಹಕಾರಿಯಾಗಿದ್ದು, ನಾನು ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ಬಸಿಯೂಟ ಯೋಜನೆ, ಉತ್ತರ ಕರ್ನಾಟಕಕ್ಕೆ 100 ಹೊಸ ಶಾಲೆಗಳ ಸ್ಥಾಪನೆ ಹಾಗೂ 8 ಸಾವಿರ ಶಿಕ್ಷಕರನ್ನು ನೇಮಕ ಮಾಡುವ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡಿದ್ದೇನೆ ಎಂದರು.
ಶಾಸಕ ಕೆ.ಮಹದೇವ್ ಮಾತನಾಡಿ ಹಿಟ್ನೆಹೆಬ್ಬಾಗಿಲು ಗ್ರಾಮಕ್ಕೆ ಈಗಾಗಲೇ ಎಸ್ಆರ್ಇಜಿ ಯೋಜನೆಯಡಿಯಲ್ಲಿ 2 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ ಹಾಗೂ ಕೆರೆಗಳ ಊಳೆತ್ತುವುದು ಶಾಲೆಗೆ ನೂತನ ಕೊಠಡಿಗಳನ್ನು ನಿರ್ಮಿಸಿಲಾಗಿದ್ದು, ಈಗ ಶಾಲೆಯ ಅಭಿವೃದ್ದಿಗಾಗಿ 70 ಲಕ್ಷ ಅನುದಾನವನ್ನು ಮೀಸಲಿಡಲಾಗಿದ್ದು ಕೂಡಲೇ ಕಾಮಗಾರಿ ಆರಂಭಿಸಿಲು ಆದೇಶ ನೀಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಪಿಯುಸಿ ತರಗತಿ ತೆರೆಯಲು ಹಾಗೂ ಶಾಲೆಗೆ ಕಂಪ್ಯೂಟರ್ ನೀಡುವಂತೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಪಡಿಒ ದೇವರಾಜೇಗೌಡ, ನಾಗೇಂದ್ರ, ಅಧ್ಯಕ್ಷೆ ಛಾಯ ಮಹದೇವ್, ಉಪಾಧ್ಯಕ್ಷ ಮಂಜುನಾಯ್ಕ, ಸದಸ್ಯರಾದ ಅನಿಲ್ ಕುಮಾರ್, ಕಾಮರಾಜ್, ಹೆಚ್.ಸಿ.ಮಹದೇವ್, ಯಶೋಧಮ್ಮ, ಭಾಗ್ಯ, ರವಿ, ಮುಖಂಡರಾದ ಅಣ್ಣಯ್ಯಶೆಟ್ಟಿ, ಸಿ.ಎನ್.ರವಿ, ಜಯಶಂಕರ್, ಹಿಟ್ನಳ್ಳಿ ಪರಮೇಶ್, ವಿನೋದ್, ಆಯತನಹಳ್ಳಿ ಮಹದೇವ್, ನೇರಲೆಕುಪ್ಪೆ ನವೀನ್ , ಶಿವಪ್ರಕಾಶ್, ರಂಗಸ್ವಾಮಿ, ಕುಮಾರ್, ಸೇರಿದಂತೆ ಮತ್ತಿತರರು ಹಾಜರಿದ್ದರು.