Advertisement
ಶುಕ್ರವಾರ ಹುಣಸೂರಿನ ಕನಕ ಭವನದಲ್ಲಿ ಆಯೋಜಿಸಿದ್ದ ವಿಶ್ವಾಸಿಗಳ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಒಂದು ಉತ್ತಮ ಸರಕಾರ ಬರಲಿ ಎನ್ನುವ ಉದ್ದೇಶದಿಂದ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದೆ. ಆದರೆ ಬಿಜೆಪಿ ನನಗೆ ಅನ್ಯಾಯ ಮತ್ತು ಅಪಮಾನ ಮಾಡಿತು. ಬಿಜೆಪಿ ಒಂದು ಭ್ರಷ್ಟ ಸರಕಾರವಾಗಿದ್ದು, ರಾಜ್ಯದಲ್ಲಿ ಕೋಮುವಾದಿಗಳ ಕೈಗೆ ಸರಕಾರವನ್ನು ಕೊಟ್ಟು ಪರೋಕ್ಷವಾಗಿ ಅವರಿಂದ ಸರಕಾರವನ್ನು ನಡೆಸುತ್ತಿದ್ದಾರೆ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಎಂದರು.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸಾವಿರಾರು ಹೆಸರು ನಾಪತ್ತೆ ಪ್ರಕರಣದ ಬಗ್ಗೆ ಆಳುವ ಸರ್ಕಾರ ದಿಟ್ಟ ತೀರ್ಮಾನ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಪ್ರಜಾಪ್ರಭುತ್ವದಲ್ಲಿ ಮತದಾರರ ಹಕ್ಕನ್ನು ಕಸಿದುಕೊಳ್ಳುವ ಸಣ್ಣತನವನ್ನು ಬಿಜೆಪಿ ಜನಪ್ರತಿನಿಧಿಗಳು ಮಾಡಿರುವುದು ಅಕ್ಷಮ್ಯ ಅಪರಾಧ ಎಂದರು.
Related Articles
Advertisement
ನೀವು ಸ್ವತಂತ್ರರುನನ್ನ ಹಿತೈಷಿಗಳು ಮುಂದೆ ಯಾವುದೇ ತೀರ್ಮಾನ ಕೈಗೊಳ್ಳಲು ನೀವು ಸ್ವತಂತ್ರರಾಗಿದ್ದೀರಿ. ನಿಮ್ಮ ಮನಸ್ಸಿಗೆ ಏನು ಸರಿಯೇನಿಸುತ್ತದೆ ಅದನ್ನು ಮಾಡಿರಿ. ನೀವು ಎಲ್ಲೇ ಇದ್ದರೂ ನಿಮ್ಮ ವಿಶ್ವಾಸಿಗನಾಗಿರುತ್ತೇನೆ. ನಾನು ಮತ್ತೊಮ್ಮೆ ಸಭೆ ಮಾಡಿ ನನ್ನ ರಾಜಕೀಯ ನಿರ್ಣಯವನ್ನು ತಿಳಿಸುತ್ತೇನೆಂದರು. ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಗೀತಾನಿಂಗರಾಜ್, ಹುಡಾ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಶಿವಕುಮಾರ್, ದೊಡ್ಡಹೆಜ್ಜೂರು ಗ್ರಾಮ ಪಂಚಾಯತಿ ಅಧ್ಯಕ್ಷ ಮುದುಗನೂರುಸುಭಾಷ್, ನಗರಸಭಾ ಸದಸ್ಯರಾದ ಸತೀಶ್‌ಕುಮಾರ್, ಹರೀಶ್‌ಕುಮಾರ್, ದೊಡ್ಡಹೆಜ್ಜೂರುರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರುಕುಮಾರ್, ಹಳ್ಳಿಮನೆ ಸಂದೇಶ್ ಸ್ಯಾಂಡಿ, ಹಿತೈಶಿಗಳಾದ ಬಾಲಕೃಷ್ಣೇಗೌಡ, ಪ್ರಾಣೇಶ್‌ಶೆಟ್ಟಿ, ಹೊಸೂರುಅಣ್ಣಯ್ಯ, ಸುನಿತಾಜಯರಾಮೇಗೌಡ, ಮೊದೂರು ಬಸವಣ್ಣ, ವಾಸೇಗೌಡ, ಮಹದೇವ, ಅಶೋಕ್, ಉದಯ್, ಸತ್ಯಪ್ಪ, ದಲಿತ ಮುಖಂಡರಾದ ಬಸವಲಿಂಗಯ್ಯ, ನಿಂಗರಾಜಮಲ್ಲಾಡಿ, ಶಿವಶಂಕರ್, ಆಯಾಜ್, ರಫೀಕ್, ಅಬ್ಬಾಸ್, ಕಣಗಾಲುರಾಮೇಗೌಡ, ರಾಜೇಗೌಡ,ವಾರಂಚಿ ಜಗದೀಶ್, ರವೀಶ್, ಸೇರಿದಂತೆ ಅಭಿಮಾನಿಗಳು ಭಾಗವಹಿಸಿದ್ದರು.