Advertisement
ಖಾಸಗಿ ಶಾಲೆಗಳಲ್ಲಿ ಕೆಲವು ಸರ್ಕಾರದಿಂದ ಅಧಿಕೃತ ಸೂಚಿನೆ ಬರುವ ಮೊದಲೇಪರೀಕ್ಷೆಗಳನ್ನು ನಡೆಸುತ್ತಿವೆ. ಇನ್ನು ಕೆಲವುಶಾಲೆಗಳು ಪರೀಕ್ಷಾ ವೇಳಾಪಟ್ಟಿಸಿದ್ಧಪಡಿಸಿ ಆನ್‌ಲೈನ್ ವ್ಯವಸ್ಥೆಯಲ್ಲಿಪರೀಕ್ಷೆಗೆ ಮುಂದಾಗಿವೆ. ಸರ್ಕಾರಿಶಾಲಾ ಮಕ್ಕಳಿಗೆ ಇದ್ಯಾವುದೂಆಗುತ್ತಿಲ್ಲ. ಒಟ್ಟಿನಲ್ಲಿ ಪ್ರಾಥಮಿಕಹಾಗೂ ಪ್ರೌಢಶಾಲಾ ಮಕ್ಕಳ ಪಾಲಕ, ಪೋಷಕರಲ್ಲಿ ಪರೀಕ್ಷೆ ಹಾಗೂಮೌಲ್ಯಾಂಕದನ ಗೊಂದಲ, ಆತಂಕ ಆರಂಭವಾಗಿದೆ.
Related Articles
Advertisement
ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಭವಿಷ್ಯಮನದಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆಪರೀಕ್ಷೆ ನಡೆಸಬೇಕು. ಖಾಸಗಿ ಶಾಲೆಗಳಲ್ಲಿ ಪರೀಕ್ಷೆನಡೆಸುವ ಬಗ್ಗೆ ಸಿದ್ಧತೆ ಕೈಗೊಳ್ಳಲಾಗಿದೆ. ಹಲವುಶಾಲೆಗಳಲ್ಲಿ ಪರೀಕ್ಷೆ ನಡೆಯುತ್ತಿವೆ. ಈಸಂದರ್ಭದಲ್ಲಿ ಸರ್ಕಾರಿ ಶಾಲೆ ಮಕ್ಕಳ ಪರೀಕ್ಷೆ ಬಗ್ಗೆ ಸರ್ಕಾರ ಉತ್ತಮ ನಿರ್ಧಾರ ಪ್ರಕಟಿಸಬೇಕು. ●ಖಲೀಲ್, ಪೋಷಕ, ರುಕ್ಮಿಣಿ ನಗರ
ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಯ ಮಕ್ಕಳಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಖಾಸಗಿ ಶಿಕ್ಷಣಸಂಸ್ಥೆಯಲ್ಲಿ ಕಲಿಯುವ ಮಕ್ಕಳಿಗೆ ಸಮಾನ ಆದೇಶನೀಡಬಾರದು. ಖಾಸಗಿ ಶಿಕ್ಷಣ ಸಂಸ್ಥೆಗಳಗೆಪ್ರತ್ಯೇಕವಾಗಿ ಎಲ್ಲ ಸುರಕ್ಷತೆಯಡಿ ಮೌಲ್ಯಾಂಕನಹಾಗೂ ಇತರೆ ಪರೀಕ್ಷೆ ನಡೆಸಲು ಅನುಮತಿ ನೀಡಬೇಕು. ●ಡಿ.ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ, ಕ್ಯಾಮ್
ಕೋವಿಡ್ ತಡೆಗಟ್ಟಲು ಸರ್ಕಾರ ಕೈಗೊಂಡಿರುವ ನಿಯಮಗಳು ಸ್ವಾಗತಾರ್ಹ. ಆದರೆ, ಇದರಿಂದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಬಾರದು. ಈಗಾಗಲೇ ಶಾಲೆಗಳಿಗೆ ಶುಲ್ಕಪಾವತಿಸಲಾಗಿದೆ. ತರಗತಿಗಳು ನಡೆಯುವುದೇ ಅನುಮಾನವಾಗಿರುವಾಗ ಪರೀಕ್ಷೆಗಳು ನಡೆಯುತ್ತದೆಯೇ? ಎಂಬ ಗೊಂದಲ ಸೃಷ್ಟಿಯಾಗಿದೆ. ●ಪಿ.ಟಿ.ರಂಗನಾಥ್, ಪೋಷಕ