Advertisement
ಹಿಂದಿನ ಗುರುಕುಲ ಪದ್ಧತಿಯಿಂದಹಿಡಿದು ಇಂದಿನ ಆಧುನಿಕತೆಗೆ ತಕ್ಕಂತೆಶಿಕ್ಷಣದಲ್ಲಿ ಅನೇಕ ಬದಲಾವಣೆಆಗಿರುವುದನ್ನು ನಾವು ನೋಡಿದ್ದೇವೆ.ಶಿಕ್ಷಣವನ್ನು ಸರ್ಕಾರ ಹಂತ ಹಂತವಾಗಿಡಿಜಿ ಟಲೀಕರಣ ಮಾಡುತ್ತಿರುವುದರಿಂದ ಮಕ್ಕಳು ಮನೆಯನ್ನೇ ಶಾಲೆಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆಎನ್ನುವುದರಲ್ಲಿ ಸಂಶಯವಿಲ್ಲ.ಎಸ್‌ಎಸ್‌ಎಲ್‌ಸಿ ಮುಗಿದ ನಂತರವಿದ್ಯಾರ್ಥಿಗಳು ಕೇಂದ್ರ ಸರ್ಕಾರಜಾರಿಗೆ ತಂದಿರುವ ದಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್‌ನಲ್ಲಿ (ಎನ್‌ಐಒಎಸ್) ಓದಿ ಸಾಧನೆಮಾಡುವ ಅವಕಾಶವನ್ನು ಸರ್ಕಾರನೀಡಿದೆ. ಈ ಯೋಜನೆ ಈಗಾಗಲೇಉತ್ತರ ಭಾರತದ ಹಲವು ರಾಜ್ಯಗಳಲ್ಲಿಯಶಸ್ಸು ಕಂಡಿದ್ದು, ಕರ್ನಾಟಕದಲ್ಲಿಈಗಷ್ಟೇ ಪರಿಚಯವಾಗುತ್ತಿದೆ.
Related Articles
Advertisement
ವಿಜ್ಞಾನದಲ್ಲಿ ಆಸಕ್ತಿ :
ಮಯಾಂಕ್, 10ನೇ ತರಗತಿ ಮುಗಿದನಂತರ ಖಾಸಗಿ ಕಾಲೇಜೊಂದರಲ್ಲಿವಿಜ್ಞಾನ ವಿಭಾಗಕ್ಕೆ ಅಡ್ಮಿಷನ್ ಪಡೆದಿದ್ದರು. ಕೋವಿಡ್ ಸೋಂಕಿನಿಂದಕಾಲೇಜು ಶುರುವಾಗದ ಕಾರಣ, ಪರಿಚಯ ದವರ ಸಲಹೆ ಮೇರೆಗೆ ಓಪನ್‌ಸ್ಕೂಲ್ ಆಯ್ದುಕೊಂಡರು.
ವಿದ್ಯಾರ್ಥಿಗಳಿಗೆ ಅನುಕೂಲ :
10ನೇ ತರಗತಿ ಮುಗಿದ ಮೇಲೆವಿಜ್ಞಾನದಲ್ಲಿ ಆಸಕ್ತಿ ಇರುವವಿದ್ಯಾರ್ಥಿಗಳು ಓಪನ್ ಸ್ಕೂಲ್ ಆಯ್ದು ಕೊಳ್ಳಬಹುದಾಗಿದ್ದು, ಕಾಲೇಜಿನಲ್ಲಿರುವ ಒತ್ತಡ ಇಂಟರ್ನಲ್, ಪ್ರಾಕ್ಟಿಕಲ್, ಹಾಜರಾತಿ ತಲೆಬಿಸಿ ಇರುವುದಿಲ್ಲ.ಓದಲು ಮುಕ್ತ ಅವಕಾಶವಿದ್ದು,ಯಾರು ಬೇಕಾದರೂ ಮನೆಯಲ್ಲೇ ಕುಳಿತು ಓದಬಹುದು.