Advertisement

ಮಕ್ಕಳ ಬಾಲ್ಯ ಶಿಕ್ಷಣದಲ್ಲೇ ಸಾಹಿತ್ಯಾಸಕ್ತಿ ಮೂಡಿಸಿ

01:09 PM Nov 24, 2017 | Team Udayavani |

ಪಿರಿಯಾಪಟ್ಟಣ: ವಿದ್ಯಾರ್ಥಿಗಳ ಬಾಲ್ಯ ಶಿಕ್ಷಣದಿಂದಲೇ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುಸುವ ಬಗ್ಗೆ ಪೋಷಕರು ಹಾಗೂ ಶಿಕ್ಷಕರು ಗಮನಹರಿಸಬೇಕಿದೆ ಎಂದು ಮನೆ ಮನೆ ಕವಿಗೋಷ್ಠಿ ಬಳಗದ ಅಧ್ಯಕ್ಷ ಕಂಪ್ಲಾಪುರ ಮೋಹನ್‌ ತಿಳಿಸಿದರು.

Advertisement

ಪಟ್ಟಣದ ಪೇಟೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 213ನೇ ಮನೆಮನೆ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಮಕ್ಕಳಿಗೆ ಕಥೆ ಕವನ ರಚಿಸಲು ಸೂಕ್ತ ಮಾರ್ಗದರ್ಶನ ನೀಡಿದಲ್ಲಿ ಅವರಲ್ಲಿರುವ ಪ್ರತಿಭೆಯನ್ನು ಹೊರತರಲು ಸಹಕಾರಿಯಾಗಲಿದ್ದು, ಸಾಹಿತ್ಯ ಅಭಿರುಚಿ ಮೈಗೂಡಿಸಿಕೊಳ್ಳಲಿದ್ದಾರೆ.

ಕವನಗಳನ್ನು ಬರೆಯುವ ಹವ್ಯಾಸ ಮತ್ತು ವಾಚಿಸುವ ಹವ್ಯಾಸದಿಂದ ಪ್ರತಿಯೊಬ್ಬರು ಮಾನಸಿಕವಾಗಿ ಸದೃಢಗೊಳ್ಳಬಹುದು ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣಗಳ ಹಾವಳಿಯಿಂದಾಗಿ ಕಥೆ, ಕಾದಂಬರಿ, ಕವನಗಳನ್ನು ಓದುವುದು ಹಾಗೂ ರಚಿಸುವವರ ಸಂಖ್ಯೆ ಕ್ಷೀಣಿಸುತ್ತಿರುವುದು ವಿಷಾದನೀಯ ಎಂದರು.

30ಕ್ಕೂ ಹೆಚ್ಚು ವಿದ್ಯಾರ್ಥಿಗಳು  ಕವನ ವಾಚಿಸುವುದರ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭ ಶಿಕ್ಷಕರಾದ ಸುಶೀಲ, ಸರ್ವಮಂಗಳ, ಕೋಮಲ, ಸುಜಾತ, ಗೀತಾ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next