Advertisement
ಪಿಯುಸಿ, ಎಂಜಿನಿಯರಿಂಗ್, ವೈದ್ಯಕೀಯ, ನರ್ಸಿಂಗ್ ಶಿಕ್ಷಣಕ್ಕೆ ಹೆಸರು ಪಡೆದಿದ್ದು, ಜತೆಗೆ ಶಾಲಾ ಶಿಕ್ಷಣ (ಎಸೆಸೆಲ್ಸಿ)ದಲ್ಲೂ ಕರಾವಳಿ ಪ್ರದೇಶ ರಾಜ್ಯದಲ್ಲಿ ಉತ್ತಮ ಸಾಧನೆ ತೋರಿಸುತ್ತಿದೆ. ಈ ಕಾರಣಕ್ಕಾಗಿ ತಮ್ಮ ಮಕ್ಕಳನ್ನು ಇಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಸೇರಿಸಲು ಹೊರ ಜಿಲ್ಲೆಗಳ, ರಾಜ್ಯಗಳ ಮಂದಿ ಪ್ರತಿವರ್ಷ ಮಂಗಳೂರು, ಉಡುಪಿ, ಮೂಡುಬಿದಿರೆ, ಪುತ್ತೂರು ಮೊದಲಾದೆಡೆಗೆ ಬರುತ್ತಾರೆ. ಅದೇ ರೀತಿ ಈ ಬಾರಿಯೂ ಚುನಾವಣೆಯ ಬಿಸಿಯ ನಡುವೆಯೂ ಶಾಲಾ ಕಾಲೇಜುಗಳ ದಾಖಲಾತಿ ನಡೆಯುತ್ತಿದ್ದು ಎಸೆಸೆಲ್ಸಿ ಫಲಿತಾಂಶ ಪ್ರಕಟವಾದ ತತ್‌ಕ್ಷಣ ಎಜು ಟೂರಿಸಂಗೆ ಇನ್ನಷ್ಟು ಬೂಸ್ಟ್ ದೊರೆಯುವ ನಿರೀಕ್ಷೆಯಿದೆ.
ಶಿಕ್ಷಣದ ಉದ್ದೇಶಕ್ಕಾಗಿ ಬರುವವರು ಕೇವಲ ಶಿಕ್ಷಣ ಸಂಸ್ಥೆ ಭೇಟಿಗೆಂದೇ ಬರುವುದಿಲ್ಲ. ಜತೆಗೆ ದೇವಸ್ಥಾನ – ಬೀಚ್, ಪ್ರವಾಸಿ ತಾಣಗಳಿಗೂ ಭೇಟಿ ನೀಡುತ್ತಾರೆ. ಉಳಿದುಕೊಳ್ಳಲು, ಲಾಡ್ಜ್,
ಊಟ ತಿಂಡಿಗೆ ಹೊಟೇಲ್, ಓಡಾಟಕ್ಕೆ ಬಾಡಿಗೆ ವಾಹನಗಳು ಹೀಗೆ ಒಟ್ಟು ಪ್ರವಾಸೋದ್ಯಮ ಕ್ಷೇತ್ರವೇ ಇದರಿಂದ ಚುರುಕು ಪಡೆಯುತ್ತದೆ. ಉರಿ ಬೇಸಗೆಯ ಕಾರಣಕ್ಕಾಗಿ ಸ್ವಲ್ಪ ಮಂಕಾಗಿದ್ದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಚುನಾವಣೆಯ ನಡುವೆಯೂ ಗರಿಗೆದರಿದೆ ಎನ್ನುತ್ತಾರೆ ಆತಿಥ್ಯ ಕ್ಷೇತ್ರದಲ್ಲಿ ಹೆಸರು ಪಡೆದಿರುವ ನಗರದ ಹೊಟೇಲೊಂದರ ಪ್ರಮುಖರು. ಪ್ರವಾಸಿ ತಾಣಗಳಲ್ಲಿ ರಷ್
ಮಕ್ಕಳ ದಾಖಲಾತಿಗೆ ಬರುವವರು ಕುಟುಂಬ ಸಮೇತರಾಗಿ ಬರುವುದರಿಂದ ಇಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡೇ ಹೋಗುತ್ತಿದ್ದಾರೆ. ಜತೆಗೆ ಶಾಲೆಗಳಿಗೆ ರಜೆ ಇರುವುದರಿಂದ ಪ್ರವಾಸಿಗರ ಸಂಖ್ಯೆಯೂ ಕರಾವಳಿಯಲ್ಲಿ ಹೆಚ್ಚಾಗಿದೆ. ಪ್ರವಾಸಿ ಸ್ಥಳಗಳಲ್ಲಿ ಕಂಡು ಬರುವ ಪ್ರತಿ 10 ವಾಹನಗಳ ಪೈಕಿ ಆರು ವಾಹನಗಳು ಹೊರ ಜಿಲ್ಲೆಗಳ ಪ್ರವಾಸಿಗರದ್ದಾಗಿರುತ್ತದೆ. ವಾರಾಂತ್ಯಗಳಂತೂ ಈ ಪ್ರಮಾಣ ಹೆಚ್ಚಾಗುತ್ತದೆ. ಸದ್ಯ ಧಾರ್ಮಿಕ ಕೇಂದ್ರಗಳು, ಬೀಚ್, ಪ್ರೇಕ್ಷಣೀಯ ಸ್ಥಳಗಳಲ್ಲಿ ಹೆಚ್ಚಾಗಿದೆ ಎನ್ನುತ್ತಾರೆ ಪ್ರವಾಸೋದ್ಯಮ ಸಂಸ್ಥೆಯೊಂದರ ಮುಖ್ಯಸ್ಥರು.
Related Articles
– ಮಾಣಿಕ್ಯ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರು, ದ.ಕ
Advertisement
– ಭರತ್ ಶೆಟ್ಟಿಗಾರ್