Advertisement

ಪುಣ್ಯ ಸಂಪಾದನೆ ಶ್ರೇಷ್ಠ: ಉಮೇಶ ಬಾಯರಿ

12:15 PM Feb 23, 2017 | Harsha Rao |

ಕೋಟ: ಮನುಷ್ಯನ ಜೀವನದಲ್ಲಿ ಪುಣ್ಯಕ್ಕಿಂತ ಶ್ರೇಷ್ಠವಾದ ಸಂಪಾದನೆ ಇನ್ನೊಂದಿಲ್ಲ. ನಾವು ಮಾಡುವ ದಾನ-ಧರ್ಮಗಳ ಮೂಲಕ ಶಾಶ್ವತವಾದ ಪುಣ್ಯ ಪ್ರಾಪ್ತಿಯಾಗುತ್ತದೆ. ಭೂಮಿಯಲ್ಲಿ ಯಾವುದೇ ವಸ್ತು ಮೌಲ್ಯ ಕಳೆದುಕೊಳ್ಳ
ಬಹುದು, ಆದರೆ ಪುಣ್ಯಕ್ಕೆ ಕ್ಷಯವಿಲ್ಲ ಎಂದು ತಂತ್ರಿಗಳಾದ ಉಮೇಶ ಬಾಯರಿ ಹೇಳಿದರು.

Advertisement

ಅವರು ಹಳ್ಳಾಡಿ ಹೆಗ್ಡೆಕೆರೆ ಸಪರಿವಾರ ಶ್ರೀ ನಂದಿಕೇಶ್ವರ ದೇವಸ್ಥಾನದಲ್ಲಿ ಬುಧವಾರ ಜರಗಿದ ನೂತನ ಹೆಬ್ಟಾಗಿಲು, ಮಹಾದ್ವಾರದ ಲೋಕಾರ್ಪಣೆ ಸಮಾರಂಭದಲ್ಲಿ ಧಾರ್ಮಿಕ ಪ್ರವಚನ ನೀಡಿದರು.

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ದಾನಿಗಳಿಗೆ ಸಮ್ಮಾನ
ದೇಗುಲದ ನೂತನ ರಾಜಗೋಪುರ, ಹೆಬ್ಟಾಗಿಲು ನಿರ್ಮಾಣದಲ್ಲಿ ಸಹಕಾರ ನೀಡಿದ ಗುತ್ತಿಗೆದಾರ ಮಾರ್ಕೋಡು ಸುಧೀರ್‌ ಕುಮಾರ್‌ ಶೆಟ್ಟಿ ಹಾಗೂ ಎಂಜಿನಿಯರ್‌ ಸತೀಶ್‌ ಅವರನ್ನು ಸಮ್ಮಾನಿಸಲಾಯಿತು ಹಾಗೂ ದಾನಿಗಳು ಮತ್ತು ಸಹಕರಿಸಿದವರನ್ನು ಗೌರವಿಸಲಾಯಿತು.

ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಜಿ. ಅನಂತಪದ್ಮನಾಭ ಅಡಿಗ, ಹೆಗ್ಡೆಕೆರೆ-ಹಳ್ಳಾಡಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಶ್ವಥ್‌ ಕುಮಾರ್‌ ಶೆಟ್ಟಿ, ದೇವಸ್ಥಾನದ ಪರ್ಯಾಯ ಅರ್ಚಕ ಶ್ರೀನಿವಾಸ ಕೆದ್ಲಾಯ, ಪಾತ್ರಿಗಳಾದ ಭಾಸ್ಕರ ಶೆಟ್ಟಿ, ಮುಕ್ಲಾಟಿಗಳಾದ ವಿಠಲ ಶೆಟ್ಟಿ ಉಪಸ್ಥಿತರಿದ್ದರು.

Advertisement

ರಾಮಚಂದ್ರ ಕೆದ್ಲಾಯ ಪ್ರಸ್ತಾವನೆಗೈದರು. ಟೆಂಪಲ್‌ ಟ್ರಸ್ಟ್‌ನ ಜಯರಾಮ ಆಚಾರ್ಯ ಸ್ವಾಗತಿಸಿದರು. ಎನ್‌.ಆರ್‌. ದಾಮೋದರ ಶರ್ಮ ಬಾಕೂìರು ನಿರೂಪಿಸಿ, ಶಂಭು ಮರಕಾಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next