Advertisement

ಶಿರ್ವದ ಬಾಲಪ್ರತಿಭೆ : ಏಡನ್‌ ಕ್ರಿಸ್‌ ದಾಂತಿ ಅವರಿಗೆ ಜ. 26ರಂದು ದಿಲ್ಲಿಯಲ್ಲಿ ಸಮ್ಮಾನ

11:42 PM Jan 12, 2023 | Team Udayavani |

ಶಿರ್ವ: ಇಲ್ಲಿನ ಡಾನ್‌ ಬೊಸ್ಕೊ ಆಂಗ್ಲಮಾಧ್ಯಮ ಶಾಲೆಯ 5ನೇ ತರಗತಿಯ ಏಡನ್‌ ಕ್ರಿಸ್‌ ದಾಂತಿ ಈ ವರ್ಷದ ಗಣರಾಜ್ಯೋತ್ಸವ ದಿನದ ಪರೇಡ್‌ನ‌ಲ್ಲಿ ದೇಶದ ರಕ್ಷಣ ಸಚಿವ ರಾಜ್‌ನಾಥ ಸಿಂಗ್‌ ಅವರ ವಿಶೇಷ ಅತಿಥಿಯಾಗಿ ಭಾಗವಹಿಸಿ ಪುರಸ್ಕಾರ ಪಡೆಯಲಿದ್ದಾರೆ.

Advertisement

ರಕ್ಷಣ ಸಚಿವಾಲಯವು ನ. 22ರಂದು ವೀರ್‌ಗಾಥಾ -2.0 ಎಂಬ ಕಾರ್ಯಕ್ರಮವನ್ನು ದೇಶಾದ್ಯಂತ ಹಮ್ಮಿಕೊಂಡಿತ್ತು. ವಿದ್ಯಾರ್ಥಿಗಳು ದೇಶದ ರಕ್ಷಣೆ ಮಾಡುವ ವೀರ ಯೋಧರ ಜೀವನದ ಬಗ್ಗೆ ಅವರಿಂದ ವಿದ್ಯಾರ್ಥಿಗಳಿಗೆ ಸಿಗುವ ಸ್ಫೂರ್ತಿಯ ಬಗ್ಗೆ ಕಥೆ, ಕವನ, ಪ್ರಬಂಧ, ಚಿತ್ರಕಲೆ ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಏಡನ್‌ ಕ್ರಿಸ್‌ ದಾಂತಿ ವೀರ ಯೋಧ ಪರಮ್‌ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ವಿಕ್ರಮ್‌ ಭಾತ್ರಾ ಅವರ ಜೀವನದ ಬಗ್ಗೆ ಹಿಂದಿ ಕವನ ರಚಿಸಿದ್ದರು. ಜ. 3ರಂದು ಇದರ ಫಲಿತಾಂಶ ಪ್ರಕಟಗೊಂಡಿದ್ದು, ದೇಶದ ಸರ್ವಶೇಷ್ಠ 25 ವಿದ್ಯಾರ್ಥಿಗಳಲ್ಲಿ ಏಡನ್‌ ಕ್ರಿಸ್‌ ಒಬ್ಬರಾಗಿ ಆಯ್ಕೆಗೊಂಡಿದ್ದಾರೆ.

ಶಿರ್ವಸಂತ ಮೇರಿ ಹಾಗೂ ಡಾನ್‌ ಬೊಸ್ಕೊ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ| ಡಾ| ಲೆಸ್ಲಿ ಡಿ’ಸೋಜಾ, ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲ ವಂ| ರೋಲ್ವಿನ್‌ ಅರಾನ್ಹ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next