Advertisement
ವಾಲ್ಮೀಕಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂಪಾಯಿ ಅವ್ಯವಹಾರದ ತನಿಖೆ ವೇಳೆ ED ಅಕ್ರಮ ಎಸಗಿಗುತ್ತಿದೆ ಎಂದು ಆರೋಪಿಸಿ ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಶಾಸಕರು ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈ ಆರೋಪ ಮಾಡಿದ್ದಾರೆ.ಇಡಿ ಯು ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಬಿ. ಕಲ್ಲೇಶ್ ಅವರನ್ನು ತನಿಖೆಗೆ ಕರೆಸಿದೆ ಮತ್ತು ಮುಖ್ಯಮಂತ್ರಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಲಿಖಿತವಾಗಿ ನೀಡುವಂತೆ ಅವರ ಮೇಲೆ ಒತ್ತಡ ಹೇರಿದೆ ಎಂದು ಹೇಳಿದರು.
Related Articles
Advertisement
“ನಮಗೂ ಹಗರಣಕ್ಕೂ(Karnataka Maharshi Valmiki Scheduled Tribes Development Corporation scam) ಯಾವುದೇ ಸಂಬಂಧವಿಲ್ಲ. ಅದರಲ್ಲಿ ನನ್ನದಾಗಲೀ, ಹಣಕಾಸು ಇಲಾಖೆಯದ್ದಾಗಲೀ ಯಾವುದೇ ಪಾತ್ರವಿಲ್ಲ. ಇಡಿ ನನ್ನ ಹೆಸರನ್ನು ಅಕ್ರಮವಾಗಿ ಸಿಲುಕಿಸಲು ಬಯಸಿ ಕಲ್ಲೇಶ್ ಅವರಿಗೆ ಬೆದರಿಕೆ ಮತ್ತು ನಿಂದನೆ ಮಾಡಲಾಗಿದೆ. ಕಲ್ಲೇಶ್ ನೀಡಿದ ದೂರಿನ ಮೇರೆಗೆ ಇಡಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ”ಎಂದರು.
ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು, ನನ್ನನ್ನು ಗುರಿಯಾಗಿಸಲು, ನನ್ನ ಇಮೇಜ್ ಹಾಳು ಮಾಡಲು ಮತ್ತು ನಾವು SC/ST ವಿರುದ್ಧ ರಾಜ್ಯದ ಜನರಲ್ಲಿ ಭಾವನೆ ಮೂಡಿಸಲು ಕೇಂದ್ರ ಸರಕಾರ ಬಯಸಿದೆ. ಕಾಂಗ್ರೆಸ್ ಯಾವಾಗಲೂ SC/ST ಮತ್ತು ದುರ್ಬಲ ವರ್ಗ, ರೈತರು ಮತ್ತು ಕಾರ್ಮಿಕರ ಪರವಾಗಿದೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.