Advertisement

ಕಾರ್ತಿ ಕಂಪನಿಗೆ 1.60 ಕೋಟಿ ಲಂಚ

06:00 AM Jun 14, 2018 | Team Udayavani |

ನವದೆಹಲಿ: ಏರ್‌ಸೆಲ್‌-ಮ್ಯಾಕ್ಸಿಸ್‌ ಹಗರಣದಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ನೇತೃತ್ವದ ಕಂಪನಿ ಒಟ್ಟು 1.6 ಕೋಟಿ ರೂ. ಲಂಚ ಪಡೆದಿದೆ ಎಂದು ಜಾರಿ ನಿರ್ದೇಶನಾಲಯವು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖೀಸಿದೆ.

Advertisement

2ಜಿ ಹಗರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ ಶೀಟ್‌ ಸಲ್ಲಿಸಲಾಗಿದೆ. ಅಡ್ವಾಂಟೇಜ್‌ ಸ್ಟ್ರಾಟಜಿಕ್‌ ಕನ್ಸಲ್ಟಿಂಗ್‌ (ಎಎಸ್‌ಸಿಪಿಎಲ್‌) ಹಾಗೂ ಚೆಸ್‌ ಮ್ಯಾನೇಜ್‌ಮೆಂಟ್‌ ಸವೀಸಸ್‌ (ಸಿಎಂಎಸ್‌ಪಿಎಲ್‌) ಕಂಪನಿ ತಲಾ 26 ಲಕ್ಷ ರೂ. ಹಾಗೂ 90 ಲಕ್ಷ ರೂ.ವನ್ನು ಏರ್‌ಸೆಲ್‌ ಹಾಗೂ ಮ್ಯಾಕ್ಸಿಸ್‌ ಕಂಪನಿಗಳಿಂದ ಲಂಚ ಪಡೆದಿದೆ. ಈ ಎರಡೂ ಸಂಸ್ಥೆಗಳ ಸಂಪೂರ್ಣ ನಿಯಂತ್ರಣ ಕಾರ್ತಿ ಹೊಂದಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ.

ಎಎಸ್‌ಸಿಪಿಎಲ್‌ ಅನ್ನು ಕಾರ್ತಿ ನಿರ್ದೇಶ ನಲ್ಲಿ ಸ್ಥಾಪಿಸಲಾಗಿತ್ತು. ಕಂಪನಿ ಸ್ಥಾಪನೆಗೆ ಕಾರ್ತಿಯೇ ಹಣದ ವ್ಯವಸ್ಥೆಯನ್ನೂ ಮಾಡಿ ದ್ದರು. ಕಂಪನಿಯ ಆಂತರಿಕ ಇಮೇಲ್‌ಗ‌ಳ ಪ್ರಕಾರ ಕಾರ್ತಿ ಪ್ರತಿ ಅಂಶವನ್ನೂ ನಿರ್ವಹಿಸು ತ್ತಿದ್ದರು. ಎಫ್ಡಿಎಐಗೆ ಅನುಮತಿ ಸ್ವೀಕರಿಸುತ್ತಿ ದ್ದಂ ತೆಯೇ ಲಂಚದ ಹಣ ನೀಡಲಾಗಿದೆ.

ಸಾಫ್ಟ್ವೇರ್‌ ಕತೆ: ಇನ್ನು ಸಿಎಂಪಿಎಲ್‌ ಕಂಪನಿಯು ಮ್ಯಾಕ್ಸಿಸ್‌ ಹಾಗೂ ಮಲೇಷ್ಯಾದಲ್ಲಿನ ಅದರ ಅಂಗಸಂಸ್ಥೆಗಳಿಂದ ಸಾಫ್ಟ್ವೇರ್‌ 90 ಲಕ್ಷ ರೂ. ಹಣ ಪಡೆದಿದೆ. ಸಾಫ್ಟ್ವೇರ್‌ ಸೇವೆಗಳಿಗಾಗಿ ಹಣ ಪಾವತಿ ಮಾಡಲಾಗಿದೆ ಎಂದು ಉಲ್ಲೇಖೀಸಲಾಗಿದೆ. ಆದರೆ ಮಾರಾಟ ಮಾಡಿದ ಸಾಫ್ಟ್ವೇರ್‌ ಮಲೇಷ್ಯಾದ ಕಂಪನಿಗೆ ಯಾವ ಉಪಯೋಜನಕ್ಕೂ ಬರದಂತಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ.

ಚಿದಂಬರಂ ವಿರುದ್ಧ ಆರೋಪ ಸದ್ಯಕ್ಕಿಲ್ಲ: ಚಾರ್ಜ್‌ಶೀಟ್‌ನಲ್ಲಿ ಪಿ.ಚಿದಂಬರಂ ಹೆಸರನ್ನೂ ಉಲ್ಲೇಖೀಸಲಾಗಿದ್ದರೂ, ಆರೋಪಿ ಎಂಬುದಾಗಿ ನಮೂದಿಸಿಲ್ಲ. ಆದರೆ ಜುಲೈ 4 ರಂದು ನಡೆಯಲಿರುವ ವಿಚಾರಣೆ ವೇಳೆ ಆರೋಪಿ ಎಮದು ಪರಿಗಣಿಸುವ ಸಾಧ್ಯತೆಯಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಸುವ ಸಾಧ್ಯತೆಯಿದ್ದು, ಇನ್ನಷ್ಟು ವ್ಯಕ್ತಿಗಳನ್ನೂ ಆರೋಪಿಗಳನ್ನಾಗಿ ಉಲ್ಲೇಖೀಸಬಹುದಾಗಿದೆ.

Advertisement

ಡೀಲ್‌ ಮೊತ್ತ ಸುಳ್ಳು
ಮ್ಯಾಕ್ಸಿಸ್‌ ಕಂಪನಿಯು 3565.91 ಕೋಟಿ ರೂ. ಅನ್ನು ಏರ್‌ಸೆಲ್‌ ಸಂಸ್ಥೆಯಲ್ಲಿ ವಿದೇಶಿ ನೇರ ಬಂಡವಾಳದ ರೂಪದಲ್ಲಿ ಹೂಡಿಕೆ ಮಾಡಿದೆ. ಆದರೆ ಆಗ ಹಣಕಾಸು ಸಚಿವಾಲ ಯ ಕೇವಲ 600 ಕೋಟಿ ರೂ.ವರೆಗಿನ ವಿದೇಶಿ ಹೂಡಿಕೆಗೆ ಮಾತ್ರ ಅನುಮತಿ ನೀಡ ಬಹುದಾಗಿತ್ತು. ಒಪ್ಪಂದದ ಮೊತ್ತ 180 ಕೋಟಿ ರೂ. ಎಂದು ಉಲ್ಲೇಖೀಸಿ ಅನುಮೋ ದನೆ ನೀಡಲಾಗಿದೆ. ಆದರೆ ವಾಸ್ತವವಾಗಿ 3565.91 ಕೋಟಿ ರೂ. ಹೂಡಿಕೆ ಮಾಡಲಾಗಿದೆ.

ಕಾರ್ತಿಯ ಎರಡು ಸಂಸ್ಥೆಗಳಿಗೆ ಮ್ಯಾಕ್ಸಿಸ್‌ ಕಂಪನಿಯಿಂದ ಲಂಚ 
ಎರಡೂ ಸಂಸ್ಥೆ ಗಳ ಮಾಲೀ ಕತ್ವ ಹೊಂದಿದ್ದ ಕಾರ್ತಿ ಚಿದಂಬರಂ

Advertisement

Udayavani is now on Telegram. Click here to join our channel and stay updated with the latest news.

Next