Advertisement

Jharkhand minister ಅಕ್ರಮ ಹಣ ಪತ್ತೆ: ನಾಳೆ ವಿಚಾರಣೆಗೆ ಬರುವಂತೆ ಆಲಂಗೆ ಇ.ಡಿ. ಸಮನ್ಸ್‌

11:58 PM May 12, 2024 | Team Udayavani |

ರಾಂಚಿ: ಆಪ್ತ ಸಹಾಯಕನ ಕೆಲಸದಾಳಿನ ನಿವಾಸದಲ್ಲಿ 32 ಕೋಟಿ ರೂ. ದಾಖಲೆ ಇಲ್ಲದ ಹಣ ಪತ್ತೆಯಾ ಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಝಾರ್ಖಂಡ್‌ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್‌ ಆಲಂಗೆ ಮೇ 14ರಂದು ವಿಚಾರಣೆಗೆ ಹಾಜ ರಾಗುವಂತೆ ಇ.ಡಿ. ಸಮನ್ಸ್‌ ನೀಡಿದೆ. ಅಕ್ರಮ ಹಣಕ್ಕೆ ಸಂಬಂಧಿಸಿದಂತೆ ಆಲಂ ಸಹಾ ಯಕ ಸಂಜೀವ್‌ ಲಾಲ್‌ ಹಾಗೂ ಆತನ ಮನೆಕೆಲಸದ ವ್ಯಕ್ತಿಯನ್ನು ಈಗಾಗಲೇ ಬಂಧಿಸಲಾಗಿದೆ.

Advertisement

ಆಲಂ ಅವರನ್ನು ರಾಂಚಿಯಲ್ಲಿ ಇರುವ ಇ.ಡಿ. ಕಚೇರಿಗೆ ಆಗಮಿಸಿ ಪ್ರಶ್ನೆಗಳಿಗೆ ಉತ್ತರಿಸುವಂತೆ ಸೂಚಿಸಲಾಗಿದೆ. ಅಕ್ರಮ ಹಣಕ್ಕೂ ತನಗೂ ಸಂಬಂಧ ಇಲ್ಲವೆಂದು ಆಲಂ ಈಗಾಗಲೇ ದೂರ ಸರಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next