Advertisement

ಲಾಲು ಕುಟುಂಬದವರ ನಿರ್ಮಾಣ ಹಂತದ ಮಾಲ್‌ ಇಡಿ ವಶಕ್ಕೆ

07:35 PM Jun 12, 2018 | Team Udayavani |

ಪಟ್ನಾ : ಬಹುಕೋಟಿ ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಆರ್‌ಜೆಡಿ ಮುಖ್ಯಸ್ಥ, ಮಾಜಿ ಬಿಹಾರ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಅವರ ಕುಟುಂಬದವರಿಗೆ ಸೇರಿದ, ನಿರ್ಮಾಣ ಹಂತದಲ್ಲಿರುವ ಮಾಲ್‌ ಕಟ್ಟಡವೊಂದನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ತಮ್ಮ ವಶಕ್ಕೆ ತೆಗೆದುಕೊಂಡಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

Advertisement

ಲಾಲು ಮತ್ತು ಅವರ ಕುಟುಂಬದವರಿಗೆ ಸೇರಿದ ಬೇನಾಮಿ ಆಸ್ತಿ ಇದಾಗಿದ್ದು ಇದರ ನಿರ್ಮಾಣ ಕಾರ್ಯವನ್ನು ನಿಲ್ಲಿಸುವಂತೆ ಕೇಂದ್ರ ಸರಕಾರ ವರ್ಷದ ಹಿಂದೆ ಬಿಹಾರ ಸರಕಾರಕ್ಕೆ ನೊಟೀಸ್‌ ಜಾರಿ ಮಾಡಿತ್ತು. 

ಲಾಲು ಪುತ್ರ ಹಾಗೂ ಆರ್‌ಜೆಡಿ ನಾಯಕನಾಗಿರುವ ತೇಜಸ್ವಿ ಯಾದವ್‌ ಮಾಲ್‌ ಉದ್ದೇಶದ ಈ ಕಟ್ಟಡದ ನೀಲಿ ನಕ್ಷೆಗೆ ಸಂಬಂಧಿಸಿದ ಇಲಾಖೆಯಿಂದ ಅನುಮತಿ ಕೂಡ ಪಡೆದುಕೊಂಡಿಲ್ಲ ಎಂದು ಉಪ ಮುಖ್ಯಮಂತ್ರಿಯಾಗಿರುವ ಬಿಜೆಪಿಯ ಸುಶೀಲ್‌ ಕುಮಾರ್‌ ಮೋದಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next