ಹೊಸದಿಲ್ಲಿ: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ, ಎನ್‌ಆರ್‌ಐ ಉದ್ಯಮಿ, 50ರ ಹರೆಯದ ರಾಬರ್ಟ್ ವಾದ್ರಾ ಅವರ ಲಂಡನ್ ಅಕ್ರಮ ಆಸ್ತಿಪಾಸ್ತಿ ವಿರುದ್ದದ ತನಿಖೆಯ ವ್ಯಾಪ್ತಿಯನ್ನು ಜಾರಿ ನಿರ್ದೇಶನಾಲಯ (ED) ಇನ್ನಷ್ಟು ವಿಸ್ತರಿಸಿದೆ. ಜತೆಗೆ ವಾದ್ರಾಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ವಾದ್ರಾಗೆ ಸಂಬಂಧಿಸಿರುವ ಲಂಡನ್‌ನಲ್ಲಿನ ಆರಕ್ಕೂ ಅಧಿಕ ಸ್ಥಿರಾಸ್ತಿಗಳ ಒಡೆತನದ ವಿವರಗಳು ಮತ್ತು ಅವುಗಳನ್ನು ಖರೀದಿಸಲು ಹರಿದು ಬಂದ ಹಣಕಾಸಿನ ವಿವರಗಳನ್ನು ಹಂಚಿಕೊಳ್ಳುವಂತೆ ಜಾರಿ ನಿರ್ದೇಶನಾಲಯ ಬ್ರಿಟನ್ ನ ತನಿಖಾ ಸಂಸ್ಥೆಗಳನ್ನು ಕೇಳಿಕೊಂಡಿದೆ.
ವಾದ್ರಾ ಅವರು ಲಂಡನ್ ನಲ್ಲಿನ ಈ ಆಸ್ತಿಪಾಸ್ತಿಗಳನ್ನು ಹಣಕಾಸು ಅಕ್ರಮಗಳ ಮೂಲಕ ಖರೀದಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ವಾದ್ರಾ ಅವರ ಲಂಡನ್ ಹಾಗೂ ಆಜೂಬಾಜು ಪ್ರದೇಶದಲ್ಲಿನ ಸ್ಥಿರಾಸ್ತಿಗಳನ್ನು ಪಿಎಂಎಲ್‌ಎ ಕಾಯಿದೆಯಡಿ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಯ ಈಗ ನೀಲನಕ್ಷೆಯನ್ನು ಸಿದ್ಧಪಡಿಸಿದೆ.