Advertisement

ಆಪ್‌ ಬಂಡಾಯ ಶಾಸಕ ಸುಖಪಾಲ್‌ ಸಿಂಗ್‌ ಖೈರಾ ನಿವಾಸದ ಮೇಲಿ ಇಡಿ ದಾಳಿ

09:48 PM Mar 09, 2021 | Team Udayavani |

ನವದೆಹಲಿ/ಚಂಡೀಗಢ: ಆಮ್‌ ಆದ್ಮಿ ಪಕ್ಷದ ಬಂಡಾಯ ಶಾಸಕ, ಪಂಜಾಬ್‌ನ ಸುಖಪಾಲ್‌ ಸಿಂಗ್‌ ಖೈರಾ ಅವರಿಗೆ ಸಂಬಂಧಿಸಿದ ವಿವಿಧ ನೆಲೆಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಿಢೀರ್‌ ದಾಳಿ ನಡೆಸಿದೆ.

Advertisement

ದೆಹಲಿಯ ಎರಡು ಕಡೆ, ಪಂಜಾಬ್‌ನ 9 ಕಡೆ ದಾಳಿ ನಡೆಸಲಾಗಿದೆ. ಅಲ್ಲದೇ ಖೈರಾ ಕುಟುಂಬವರ್ಗ, ಕೆಲವು ಬಂಧಿತ ಅಪರಾಧಿಗಳ ನಿವಾಸಗಳ ಮೇಲೂ ದಾಳಿ ಮಾಡಲಾಗಿದೆ. 2015ರ ಮಾದಕದ್ರವ್ಯ ಸಾಗಣೆ, ನಕಲಿ ಪಾಸ್‌ಪೋರ್ಟ್‌ ದಂಧೆ ಪ್ರಕರಣದಲ್ಲಿ ಸಂಬಂಧ ಈ ದಾಳಿ ನಡೆಸಲಾಗಿದೆ.

ದಂಧೆಕೋರರೊಂದಿಗೆ ಪಂಜಾಬ್‌ನ ಕಪುರ್ತಲ ಜಿಲ್ಲೆಯ ಬೋಲಥ್‌ ಕ್ಷೇತ್ರದ ಶಾಸಕರಾಗಿರುವ ಸುಖಪಾಲ್‌ಸಿಂಗ್‌ಗೆ (56) ನಿಕಟ ಸಂಬಂಧವಿದೆ ಎಂದು ಆರೋಪಿಸಲಾಗಿದೆ. 2017ರಲ್ಲಿ ಆಪ್‌ ಶಾಸಕಾಗಿದ್ದ ಸುಖಪಾಲ್‌ರಾಗಿದ್ದ ಅವರು; ಮುಂದೆ ಪಕ್ಷ ತ್ಯಜಿಸಿ 2019ರಲ್ಲಿ ಪಂಜಾಬ್‌ ಏಕ್ತಾ ಪಾರ್ಟಿ ಸ್ಥಾಪಿಸಿದ್ದಾರೆ.

ಇದನ್ನೂ ಓದಿ :ಭಾರತದ ಕೊವ್ಯಾಕ್ಸಿನ್‌ ಲಸಿಕೆ ಸುರಕ್ಷಿತ : ಲ್ಯಾನ್ಸೆಟ್‌ ವರದಿ

Advertisement

Udayavani is now on Telegram. Click here to join our channel and stay updated with the latest news.

Next