Advertisement

ED Raid: ಎಂಟು ಬ್ಯಾಂಕ್‌ಗಳಲ್ಲಿ 883 ಕೋಟಿ ರೂ. ಸಾಲ ಪಡೆದಿದ್ದ ಮಹಿಳೆ ಮನೆ ಮೇಲೆ ಇಡಿ ದಾಳಿ

01:18 PM Oct 18, 2023 | Team Udayavani |

ಬೆಂಗಳೂರು:  ಬ್ಯಾಂಕ್‌ನಿಂದ ಸಾಲ ಪಡೆದು ವಂಚಿಸಿದ ಆರೋಪದ ಮೇಲೆ ಮಂಗಳವಾರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬೆಂಗಳೂರಿನ ಮಹಿಳಾ ಉದ್ಯಮಿ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

Advertisement

ಕಸವನಹಳ್ಳಿ ಬಳಿಯಿ ರುವ ಮಹಿಳಾ ಉದ್ಯಮಿ ಉಷಾ ಎಂಬುವರ ಮನೆ ಮತ್ತು ಕಚೇರಿಗಳ ಮೇಲೆ ಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆ ಸಿದ ಇ.ಡಿ. ಅಧಿಕಾರಿಗಳು ಸಂಜೆವ ರೆಗೂ ಶೋಧ ನಡೆಸಿದ್ದಾರೆ. ಆಪ್ಟ್ ಸರ್ಕ್ನೂಟ್‌ ಇಂಡಿಯಾ ಲಿವಿಟೆಡ್‌ ಕಂಪನಿ ಸೇರಿ ಎರಡು ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕ‌ ರಾಗಿರುವ ಉಷಾ, ಕಂಪನಿಯ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ರಾಷ್ಟ್ರೀಕೃತ ಸೇರಿ ಎಂಟು ಬ್ಯಾಂಕ್‌ಗಳಲ್ಲಿ 883.03 ಕೋಟಿ ರೂ. ಸಾಲ ಪಡೆದು ಕೊಂಡಿದ್ದರು. ಆದರೆ, ಸಾಲ ಮರು ಪಾವತಿ ಮಾಡದೆ ವಂಚಿಸಿದ್ದಾರೆ.

ಈ ಸಂಬಂಧ ಸಿಬಿಐನಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಅಕ್ರಮ ವ್ಯವಹಾರ ಕಂಡು ಬಂದ ಹಿನ್ನೆಲೆಯಲ್ಲಿ ಇಡಿಗೆ ಪ್ರಕರಣ ವರ್ಗಾವಣೆಯಾಗಿತ್ತು. ಈ ವೇಳೆ ಬ್ಯಾಂಕ್‌ಗಳಲ್ಲಿ ಪಡೆದುಕೊಂಡಿದ್ದ ಸಾಲವನ್ನು ಉಷಾ, ಭಾರತ ಮತ್ತು  ವಿದೇಶದಲ್ಲಿ ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಅದರಿಂದ ಬ್ಯಾಂಕ್‌ಗೆ ಭಾರೀ ನಷ್ಟ ಉಂಟಾಗಿದೆ. ಹೀಗಾಗಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಉಷಾ, ವಂಚಿಸಿದ ಹಣದಲ್ಲಿ ಚರಾಸ್ತಿ  ಮತ್ತು ಸ್ಥಿರಾಸ್ತಿಗಳು, ವಿದೇಶದಲ್ಲಿರುವ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವ ದಾಖಲೆಗಳು, ವಿದೇಶಿ ಕರೆನ್ಸಿಗಳು ಪತ್ತೆಯಾಗಿವೆ ಎಂದು ಜಾರಿ ನಿರ್ದೇಶನಾಲಯ (ಇಡಿ) ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next