Advertisement

ಐವರು ನಟಿಯರ ವಿಚಾರಣೆಗೆ ಇ.ಡಿ.ನಿರ್ಧಾರ

11:22 AM Dec 26, 2021 | Team Udayavani |

ಮುಂಬೈ: ಬೆಂಗಳೂರು ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌ ಜತೆಗೆ ನಿಕಟ ಸಂಪರ್ಕ ಹೊಂದಿದ್ದ ಐದು ಮಂದಿ ಬಾಲಿವುಡ್‌ ನಟಿಯರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಈ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ಮೂಲಗಳು ತಿಳಿಸಿವೆ.

Advertisement

ಅವರೆಲ್ಲರೂ ವಂಚಕನಿಂದ ಉಡುಗೊರೆ ಅಥವಾ ಪರೋಕ್ಷವಾಗಿ ಸಂಪರ್ಕ ಹೊಂದಿದ್ದಾರೆ. ಈ ಪೈಕಿ ನಟಿ ಜಾಕ್ವೆಲಿನ್‌ ಫ‌ರ್ನಾಂಡಿಸ್‌ ಅವರನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ. ಮತ್ತೂಬ್ಬ ನಟಿ ನೋರಾ ಫ‌ತೇ ಅವರ ಮೇಲೂ ಇ.ಡಿ.ನಿಗಾ ಇರಿಸಿದೆ. ಜಾಕ್ವೆಲಿನ್‌ ಮತ್ತು ನೋರಾ ವಂಚಕನಿಂದ ಪಡೆದುಕೊಂಡಿರುವ ಉಡುಗೊರೆಗಳನ್ನು ವಶಕ್ಕೆ ಪಡೆದು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧಿರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next