Advertisement
ಕವಿತಾ ಬಂಧನದ ಬಳಿಕ ಮೊದಲ ಬಾರಿ ಹೇಳಿಕೆ ನೀಡಿರುವ ಇ.ಡಿ., ಸಿಎಂ ಕೇಜ್ರಿವಾಲ್ ಹಾಗೂ ಮನೀಶ್ ಅವ ರನ್ನು ಕವಿತಾ ಸಂಚಿನಲ್ಲಿ ಭಾಗಿ ಮಾಡಿ ದ್ದರು. ಈ ಮೂಲಕ ತಮಗೆ ಬೇಕಾ ದವರಿಗೆ ಮದ್ಯ ಮಾರಾಟದ ಪರ ವಾನಿಗೆ ಕೊಡಿಸಿದ್ದಲ್ಲದೆ ಇದಕ್ಕೆ ಪ್ರತಿ ಯಾಗಿ ದಿಲ್ಲಿ ಸರಕಾರಕ್ಕೆ ನೀಡಲಾದ 100 ಕೋಟಿ ರೂ. ಲಂಚದಲ್ಲಿ ನೇರ ವಾಗಿ ಪಾತ್ರ ವಹಿಸಿದ್ದರು ಎಂದಿದೆ. ಈ ಮೊದಲು ಮಾತನಾಡಿದ್ದ ಕವಿತಾ, ನಾನು ತಪ್ಪು ಮಾಡಿಲ್ಲ ಎಂದಿದ್ದರು.
ದಿಲ್ಲಿ ಅಬಕಾರಿ ನೀತಿ ಪ್ರಕರಣ ದಲ್ಲಿ ತಮ್ಮ ಬಂಧನವನ್ನು ಪ್ರಶ್ನಿಸಿ ಕವಿತಾ ಸುಪ್ರೀಂ ಮೆಟ್ಟಿ ರೇಲಿದ್ದಾರೆ. ಸೋದರ ಕೆ.ಟಿ. ರಾಮ ರಾವ್‌ರನ್ನು ಭೇಟಿ ಮಾಡಿದ ಬಳಿಕ ಈ ಬೆಳವಣಿಗೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿತಾರನ್ನು ಶುಕ್ರವಾರ ಬಂಧಿಸಲಾಗಿತ್ತು.