Advertisement
ಇತ್ತೀಚೆಗಷ್ಟೇ ಬಿಟ್ ಕಾಯಿನ್ ಆಧಾರಿತ ಹೂಡಿಕೆ ವೆಬ್ ಸೈಟ್ ‘ಗೈನ್ ಬಿಟ್ ಕಾಯಿನ್’ನ ಸ್ಥಾಪಕ ಅಮಿತ್ ಭಾರದ್ವಾಜ್ ಹಾಗೂ ಇತರ 8 ಮಂದಿ ವಿರುದ್ಧ ಕೇಸು ದಾಖಲಿಸಲಾಗಿತ್ತು. ಈ ಯೋಜನೆಯಲ್ಲಿ ಹೂಡಿಕೆ ಮಾಡಿರುವ 8,000 ಮಂದಿ ಸುಮಾರು 2 ಸಾವಿರ ಕೋಟಿ ರೂ. ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಕುಂದ್ರಾರಿಗೆ ನಂಟಿರುವ ಅನುಮಾನದಲ್ಲಿ ಅವರನ್ನು ವಿಚಾರಣೆಗೊಳಪಡಿಸಿ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ನಟಿಯರಾದ ಶಿಲ್ಪಾ ಶೆಟ್ಟಿ, ಸನ್ನಿ ಲಿಯೋನ್, ನೇಹಾ ದೂಫಿಯಾರನ್ನೂ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಹಾರಾಷ್ಟ್ರದ ಥಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ 500 ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ವಹಿವಾಟಿನ ಹೊಸ ಜಾಲವನ್ನು ಬಯಲಿಗೆ ಎಳೆಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ. ‘ಮನಿ ಟ್ರೇಡ್ ಕಾಯಿನ್’ ಎಂಬ ಸಂಸ್ಥೆಯನ್ನು ವರ್ಷದ ಹಿಂದೆ ಸ್ಥಾಪಿಸಲಾಗಿತ್ತು. ಉತ್ತಮ ಲಾಭದ ಆಮಿಷ ತೋರಿಸಿ ಹಲವಾರು ಮಂದಿಯನ್ನು ಹೂಡಿಕೆ ಮಾಡುವಂತೆ ಪ್ರಚೋದಿಸಲಾಗಿತ್ತು. ಆರೋಪಿಗಳು ಹೀಗೆ ಒಟ್ಟು 500 ಕೋಟಿ ರೂ. ಹೂಡಿಕೆ ಮಾಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಹಾ ಖಝಿ ಎಂಬಾತನನ್ನು ಬಂಧಿಸಲಾಗಿದ್ದು, ಆತ ಈ ಜಾಲಕ್ಕೆ ತಾಂತ್ರಿಕ ಬೆಂಬಲ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.