Advertisement

ದಿಲ್ಲಿಯ ಹಲವು ಸಿಎ, ತೆರಿಗೆ ವೃತ್ತಿಪರರ ಕಚೇರಿಗಳ ಮೇಲೆ ಇಡಿ ದಾಳಿ

03:23 PM Apr 13, 2017 | udayavani editorial |

ಹೊಸದಿಲ್ಲಿ : ಜಾರಿ ನಿರ್ದೇಶನಾಲಯ ಇಂದು ದಿಲ್ಲಿಯಲ್ಲಿ ಹಲವಾರು ಚಾರ್ಟರ್ಡ್‌ ಅಕೌಂಟೆಂಟ್‌ಗಳು ಹಾಗೂ ತೆರಿಗೆ ವೃತ್ತಿಪರರ ಕಚೇರಿಗಳ ಮೇಲೆ ದಾಳಿ ನಡೆಸಿ ಕೋಟಿಗಟ್ಟಲೆ ಕಪ್ಪುಹಣ ಸೃಷ್ಟಿಸುವ 500ಕ್ಕೂ ಹೆಚ್ಚು  ಶೆಲ್‌ (ನಕಲಿ) ಕಂಪೆನಿಗಳ ಸೃಷ್ಟಿಕರ್ತರ ಕಾರಸ್ಥಾನಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತು.

Advertisement

ದಿಲ್ಲಿಯ ಕರೋಲ್‌ ಬಾಗ್‌, ಲಕ್ಷ್ಮೀ ನಗರ, ಮಾಡೆಲ್‌ ಟೌನ್‌, ಆಜಾದ್‌ ಪುರ, ದಿಲ್‌ಷಾದ್‌ ಗಾರ್ಡನ್‌ ಮತ್ತು ಇತರ ಕೆಲವು ಕಡೆಗಳಲ್ಲಿನ ತೆರಿಗೆ ವೃತ್ತಿಪರರರ ಕಾರ್ಯಾಲಯಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧಿಸಿದರು. ಸುಮಾರು 500ಕ್ಕೂ ಹೆಚ್ಚು ಶೆಲ್‌ ಕಂಪೆನಿಗಳಿಂದ ಲಕ್ಷ ಗಟ್ಟಲೆ ಕೋಟಿ ರೂ.ಕಪ್ಪುಹಣ ಸೃಷ್ಟಿಗೊಳ್ಳುವುದಕ್ಕೆ ಈ ತೆರಿಗೆ ವೃತ್ತಿಪರರು ಉದ್ಯಮಿಗಳೊಂದಿಗೆ ಕೈಜೋಡಿಸಿರುವುದು ಶೋಧ ಕಾರ್ಯಾಚರಣೆಗೆ ಕಾರಣವಾಗಿದೆ. 

ಬ್ಯಾಂಕಿಂಗ್‌ ಚ್ಯಾನೆಲ್‌ಗ‌ಳನ್ನು ಬಳಸಿಕೊಂಡು ಈ ಶೆಲ್‌ ಕಂಪೆನಿಗಳು ತೆರಿಗೆ ವೃತ್ತಿಪರರ ಪರಿಣತ ಮಾರ್ಗದರ್ಶನ ಹಾಗೂ ನೆರವಿನಿಂದ ಲಕ್ಷಗಟ್ಟಲೆ ಕೋಟಿ ಕಪ್ಪು ಹಣ ಸೃಷ್ಟಿಸಿ ವಿದೇಶಗಳಿಗೆ ವರ್ಗಾಯಿಸಿ ಮರಳಿ ದೇಶದೊಳಕ್ಕೆ ಬಿಳಿ ಹಣವನ್ನಾಗಿ ತರಿಸುವ ಕುಟಿಲೋಪಾಯಗಳನ್ನು ಅನುಸರಿಸುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 

ಭಾರೀ ಪ್ರಮಾಣದ ನಗದನ್ನು ವಶಪಡಿಸಿಕೊಂಡು ಇಬ್ಬರು ಸಹೋದರರನ್ನು ಈ ಸಂಬಂಧ ಬಂಧಿಸಲಾಗಿದೆ ಎಂದು ಇಡಿ ಅಧಿಕಾರಿಗಳು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next