ವಾಷಿಂಗ್ಟನ್ ಡಿಸಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಅಮೆರಿಕ ಅಧಿಕೃತ ಭೇಟಿಯಲ್ಲಿ ಶನಿವಾರ ವಾಷಿಂಗ್ಟನ್ ಡಿಸಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಜಾರಿ ನಿರ್ದೇಶನಾಲಯ (ಇಡಿ) ಸಂಪೂರ್ಣವಾಗಿ ಸ್ವತಂತ್ರವಾಗಿದೆ ಎಂದು ಹೇಳಿದರು.
ನಾಗರಿಕರನ್ನು ಹಿಂಬಾಲಿಸಲು ತನಿಖಾ ಸಂಸ್ಥೆಯನ್ನು ಬಳಸಲಾಗಿದೆಯೇ ಎಂಬ ಪ್ರಶ್ನೆಗೆ ಹಣಕಾಸು ಸಚಿವರು ಇಡಿಯನ್ನು “ಸೂಕ್ಷ್ಮ ಅಪರಾಧಗಳನ್ನು ಹಿಂಬಲಿಸುವ ಸಂಸ್ಥೆ” ಎಂದು ಕರೆದರು. “ಅದು ಮಾಡುವಲ್ಲಿ ಸಂಪೂರ್ಣವಾಗಿ ಸ್ವತಂತ್ರವಾಗಿದೆ. ಇದು ಮುನ್ಸೂಚನೆಯ ಅಪರಾಧಗಳನ್ನು ಫಾಲೋ ಮಾಡುವ ಸಂಸ್ಥೆಯಾಗಿದೆ. ಒಂದು ವೇಳೆ ಇಡಿ ಹಾಗೆ ಮಾಡಿದರೆ, ಅದು ಅವರ ಕೈಯಲ್ಲಿರುವ ಕೆಲವು ಪ್ರಾಥಮಿಕ ಸಾಕ್ಷ್ಯಗಳ ಕಾರಣದಿಂದಲೇ ಇರುತ್ತದೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ, ಹಣಕಾಸು ಸಚಿವರು ಜಿ 20 ಮತ್ತು ಅದರ ಆದ್ಯತೆಗಳ ಬಗ್ಗೆ ಮಾತನಾಡಿದರು. “ನಾವು ಅನೇಕ ಜಿ20 ಸದಸ್ಯರೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಿದ್ದೇವೆ. ಸಾಕಷ್ಟು ಸವಾಲುಗಳಿರುವ ಸಮಯದಲ್ಲಿ ನಾವು ಅಧ್ಯಕ್ಷ ಸ್ಥಾನವನ್ನು ತೆಗೆದುಕೊಳ್ಳುತ್ತಿದ್ದೇವೆ. ನಾವು ಇಡೀ ವಿಷಯವನ್ನು ಹೇಗೆ ಉತ್ತಮವಾಗಿ ಮುನ್ನಡೆಸಬಹುದು ಎಂಬುದನ್ನು ನೋಡಲು ನಾವು ಸದಸ್ಯರೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದ” ಎಂದರು.
ಇದನ್ನೂ ಓದಿ:ಶಿಕ್ಷಣದಲ್ಲಿ ಹಿಂದಿ ಹೇರಿಕೆ ಮಾಡುವ ಉದ್ದೇಶ ಕೇಂದ್ರ ಸರಕಾರ ಹೊಂದಿಲ್ಲ: ಧರ್ಮೇಂದ್ರ ಪ್ರಧಾನ್
ಡಾಲರ್ ವಿರುದ್ಧ ಭಾರತೀಯ ರೂಪಾಯಿ ಮೌಲ್ಯ ಕುಸಿಯುತ್ತಿದೆ. ಇದನ್ನು ನಿಭಾಯಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕೇಳಿದಾಗ, ವಿತ್ತ ಸಚಿವರು ಭೌಗೋಳಿಕ-ರಾಜಕೀಯ ಉದ್ವಿಗ್ನತೆಯ ಹೆಚ್ಚಳದಿಂದಾಗಿ ಇದು ಸಂಭವಿಸಿದೆ ಎಂದು ಹೇಳಿದರು. ಈ ಸಮಸ್ಯೆಯನ್ನು ಎದುರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ಹೇಳಿದರು.