ಮಂಗಳೂರು: ಅರಣ್ಯಾಧಿಕಾರಿ ರಾಘವ ಪಾಟಾಳಿ, ಅವರ ಪತ್ನಿ ಮತ್ತು ಪುತ್ರಿಯ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣವನ್ನು ವಜಾಗೊಳಿಸಿ ನ್ಯಾಯಾಲಯ ಆದೇಶ ನೀಡಿದೆ.
2016ರಲ್ಲಿ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯಾಗಿದ್ದ ರಾಘವ ಪಾಟಾಳಿ ಅವರ ಮನೆಯ ಮೇಲೆ ಇಡಿ ದಾಳಿ ನಡೆಸಿ ಅವರ ಹಾಗೂ ಅವರ ಪತ್ನಿ, ಪುತ್ರಿಯ ವಿರುದ್ಧ ಪ್ರಕರಣ ದಾಖಲಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನಗರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶೆ ಹಾಗೂ ವಿಶೇಷ ನ್ಯಾಯಾಧೀಶೆ ಸಂಧ್ಯಾ ಅವರು ಪ್ರಕರಣವನ್ನು ಸಾಬೀತುಪಡಿಸವಲ್ಲಿ ಜಾರಿ ನಿರ್ದೇಶನಾಲಯ ವಿಫಲವಾಗಿದೆಯೆಂದು ಪ್ರಕರಣವನ್ನು ವಜಾಗೊಳಿಸಿ ಆರೋಪಿಗಳನ್ನು ಬಿಡುಗಡೆಗೊಳಿಸಿ ಅದೇಶಿಸಿದ್ದಾರೆ ಹಾಗೂ ಜಪ್ತಿಪಡಿಸಿಕೊಂಡ ನಗದು ಮತ್ತು ಮುಟ್ಟುಗೊಲು ಮಾಡಿದ್ದ ಕಟ್ಟಡಗಳನ್ನು ರಾಘವ ಪಾಟಾಳಿ ಹಾಗೂ ಕುಟುಂಬದವರಿಗೆ ಹಸ್ತಾಂತರ ಮಾಡುವಂತೆ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶನ ನೀಡಿದ್ದಾರೆ.
ರಾಘವ ಪಾಟಾಳಿ ಹಾಗೂ ಇತರರ ಪರವಾಗಿ ಬೆಂಗಳೂರಿನ ನ್ಯಾಯವಾದಿ ಶಂಕರ್ ಪಿ. ಹೆಗ್ಡೆ ಹಾಗೂ ಮಂಗಳೂರಿನ ನ್ಯಾಯಾವಾದಿ ಜಲಜಾಕ್ಷಿ ಎಂ. ಎಂ. ವಾದಿಸಿದ್ದರು.