ಹೊಸದಿಲ್ಲಿ: ದೆಹಲಿ ಸರ್ಕಾರದ ಲಿಕ್ಕರ್ ಪಾಲಿಸಿ ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಜಾರಿ ನಿರ್ದೇಶನಾಲಯವು (ಇ.ಡಿ) ಇಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆಪ್ತ ಉದ್ಯಮಿ ಅಮಿತ್ ಅರೋರಾ ಅವರನ್ನು ಬಂಧಿಸಿದ್ದಾರೆ.
ಅರೋರಾ ಗುರುಗ್ರಾಮ್ ಮೂಲದ ಬಡ್ಡಿ ರಿಟೇಲ್ನ ನಿರ್ದೇಶಕರಾಗಿದ್ದಾರೆ.
ದೆಹಲಿ ಅಬಕಾರಿ ನೀತಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇದುವರೆಗೆ ಒಟ್ಟು ಐವರನ್ನು ಇ.ಡಿ ಬಂಧಿಸಿದೆ. ಉದ್ಯಮಿ ಸಮೀರ್ ಮಹಂದ್ರು ಅವರನ್ನು ಸೆಪ್ಟೆಂಬರ್ 27 ರಂದು ಇಡಿ ವಿಚಾರಣೆಯ ನಂತರ ಬಂಧಿಸಿತ್ತು.
ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರ ಶಿಫಾರಸಿನ ಮೇರೆಗೆ ಸಿಬಿಐ ಎಫ್ಐಆರ್ ದಾಖಲಿಸಿದ ನಂತರ ಜಾರಿ ನಿರ್ದೇಶನಾಲಯವು ಈ ಪ್ರಕರಣದಲ್ಲಿ 169 ಶೋಧ ಕಾರ್ಯಾಚರಣೆಗಳನ್ನು ಕೈಗೊಂಡಿದೆ.
Related Articles
ಇದನ್ನೂ ಓದಿ:ಯುವತಿ ಅರೆಪ್ರಜ್ಞೆ ಸ್ಥಿತಿಯಲ್ಲಿದ್ದಾಗ ದೈಹಿಕ ದೌರ್ಜನ್ಯ, ಆಸ್ಪತ್ರೆಗೆ ಹೋದಾಗಲೇ ವಿಷಯ ಗೊತ್ತಾಗಿದ್ದು!
ಅಮಿತ್ ಅರೋರಾ, ದಿನೇಶ್ ಅರೋರಾ ಮತ್ತು ಅರ್ಜುನ್ ಪಾಂಡೆ ಅವರನ್ನು ಪ್ರಮುಖ ಆರೋಪಿಗಳೆಂದಯ ಸಿಬಿಐ ಹೇಳಿತ್ತು. ಇವರುಗಳು “ಮದ್ಯ ಪರವಾನಗಿದಾರರಿಂದ ಸಂಗ್ರಹಿಸಿದ ಅನಗತ್ಯ ಹಣದ ಲಾಭವನ್ನು ನಿರ್ವಹಿಸುವಲ್ಲಿ ಮತ್ತು ಬೇರೆಡೆಗೆ ತಿರುಗಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ” ಎಂದು ಸಿಬಿಐ ಈ ಹಿಂದೆ ಆರೋಪಿಸಿತ್ತು.