Advertisement

ತುಂಬಿ ಹೋಗಿವೆ ಗುವಾಕ್ವಿಲ್‌ ಸ್ಮಶಾನಗಳು !

01:06 PM May 09, 2020 | sudhir |

ಮಣಿಪಾಲ: ವಿಶ್ವದಲ್ಲಿ ಕೋವಿಡ್‌-19ತೀವ್ರ ಆತಂಕ ಸೃಷ್ಟಿಸುತ್ತಿದ್ದು ಶುಕ್ರವಾರ 16 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿಯವರೆಗೂ ವಿಶ್ವವ್ಯಾಪಿ 2.70 ಲಕ್ಷಕ್ಕೂ ಹೆಚ್ಚು ಮಂದಿ ಈ ಮಾರಣಾಂತಿಕ ಸೋಂಕಿಗೆ ಬಲಿಯಾಗಿದ್ದು, ಹಲವು ದೇಶಗಳಲ್ಲಿ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಸ್ಥಳದ ಅಭಾವ ಕಾಡತೊಡಗಿದೆ.

Advertisement

ಹಾಗಾಗಿ ಆಸ್ಪತ್ರೆಗಳಲ್ಲಿ ಶವಗಳು ತುಂಬಿ ತುಳುಕುವಂತಾಗಿದೆ. ಪರಿಣಾಮ ಕುಟಂಬ ವರ್ಗದವರು ತಮ್ಮ ಸಂಬಂಧಿಗಳ ಮೃತ ದೇಹಕ್ಕೆ ಪರದಾಡುವಂತಾಗಿದೆ. ಈಕ್ವೆಡಾರ್‌ನ ಗುವಾಕ್ವಿಲ್‌ ನಗರ ಇಂಥದ್ದೇ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ.

ಇಲ್ಲಿಯ ಆರೋಗ್ಯ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಿರುವ ಕೋವಿಡ್‌-19 ಸೋಂಕಿತರ ಕುಟುಂಬದವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಗುವಾಕ್ವಿಲ್‌ ನಗರದ ಮಧ್ಯ ವಯಸ್ಕನೊಬ್ಬ ತನ್ನ ತಂದೆಯ ಶವಕ್ಕಾಗಿ ಒಂದು ತಿಂಗಳಿನಿಂದ ಹುಡುಕಾಟ ನಡೆಸಿದ್ದು, ಆಸ್ಪತ್ರೆಯ ಸಿಬಂದಿ ಮೃತ ವ್ಯಕ್ತಿಯ ಶವ ಕಾಣೆಯಾಗಿದೆ ಎಂದು ಹೇಳುತ್ತಿದ್ದಾರೆ.

ಇದು ಒಬ್ಬರ ಕಥೆಯಲ್ಲ ; ಹಲವರು ತಮ್ಮ ಸಂಬಂಧಿಕರ ಮೃತ ದೇಹಕ್ಕಾಗಿ ಪರದಾಡುವಂತಾಗಿದೆ. ತನ್ನ ತಂದೆಯನ್ನು ಉಳಿಸಿಕೊಳ್ಳಲಾಗಲಿಲ್ಲ, ಕೊನೇ ಪಕ್ಷ ಅವರ ಮೃತ ದೇಹ ಕೊಟ್ಟರೆ ಅಂತಿಮ ನಮನ ಸಲ್ಲಿಸುತ್ತೇವೆ. ಆದರೆ ಅದಕ್ಕೂ ಅವಕಾಶವಿಲ್ಲದಂತಾಗಿದೆ. ಆಸ್ಪತ್ರೆ ಸಿಬಂದಿ ಇಲ್ಲ ಎನ್ನುತ್ತಿದ್ದಾರೆ ಎಂಬುದು ಆ ಮಧ್ಯ ವಯಸ್ಕ. ಈ ಬಗ್ಗೆ ಸಿಎನ್‌ಎನ್‌ ಸಹ ವರದಿ ಮಾಡಿದ್ದು, ಆ ನಗರದಲ್ಲಿನ ವಾಸ್ತವ ಸ್ಥಿತಿಯನ್ನು ವಿವರಿಸಿದೆ.

ಕೋವಿಡ್‌-19 ಬಿಕ್ಕಟ್ಟು ಆರಂಭವಾದಗಿನಿಂದ ಇಂತಹ ಹೃದಯ ವಿದ್ರವಾಕ ಘಟನೆಗಳಿಗೆ ಗುವಾಕ್ವಿಲ್‌ ನಗರ ಸಾಕ್ಷಿಯಾಗುತ್ತಿದೆ. ದುರ್ಬಲ ಆರೋಗ್ಯ ವ್ಯವಸ್ಥೆಯಿಂದ ಕಡು ಸಂಕಷ್ಟವನ್ನು ಎದುರಿಸುತ್ತಿರುವ ನಗರದಲ್ಲಿ ಸೋಂಕು ಪ್ರಸರಣ ಹೆಚ್ಚಾಗಿದೆ.
ಸುಮಾರು 3 ಲಕ್ಷದಷ್ಟು ಜನಸಂಖ್ಯೆಯನ್ನು ಹೊಂದಿರುವ ಈ ನಗರದಲ್ಲಿ ಶವಪೆಟ್ಟಿಗೆಗಳ ಕೊರತೆಯೂ ಎದುರಾಗಿದ್ದು, ಶ್ಮಶಾನ ತುಂಬಿ ಹೋಗಿದೆ. ಹಾಗಾಗಿ ಸ್ಥಳವಿಲ್ಲದೇ ಮಾರ್ಗ ಬದಿಯಲ್ಲೇ ಇಡುವಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next